ಲೋಕದರ್ಶನ ವರದಿ
ವಿಜಯಪುರ 20:ಜಾತಿಭೇದ ಅಳಿದು ಎಲ್ಲರೂ ನಮ್ಮವರೆಂಬ ಭಾವ ಎಲ್ಲರಲ್ಲಿ ಮೂಡಿ ಬರಬೇಕು. ಪ್ರತಿಯೊಬ್ಬರು ಸತ್ಯ, ಶುದ್ಧ ಕಾಯಕ ಮಾಡುತ್ತ ಜೀವನವನ್ನು ಸಾರ್ಥಕಪಡಿಸಿಕೊಳ್ಳಬೇಕು. ಎಂದು ಪ್ರೊ. ಬಸವರಾಜ ಕುಂಬಾರ ನುಡಿದರು.
ಅವರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಆಶ್ರಯದಲ್ಲಿ ವಿಜಯಪುರದ ದಗರ್ಾ ರಸ್ತೆಯಲ್ಲಿರುವ ಕೇಂದ್ರ ಕಾರಾಗೃಹದಲ್ಲಿ ದತ್ತಿಗಳ ಸ್ಮರಣಾರ್ಥ ಬಂಧಿಗಳ ಮನಪರಿವರ್ತನಾ ನಿಮಿತ್ಯ ಹಮ್ಮಿಕೊಳ್ಳಲಾಗಿದ್ದ ವಿಶೇಷ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ 'ಸೂಫಿ ಸಂತರ ಹಾಗೂ ಶರಣರ ನುಡಿಗಳಲ್ಲಿ ಮನಪರಿವರ್ತನೆಯ ಹಾದಿ' ಎಂಬ ವಿಷಯದ ಕುರಿತು ಮಾತನಾಡಿದರು.
ಸೂಫಿಗಳ, ಸಂತರ, ಶರಣರ ನಡೆ ನುಡಿಗಳು ಒಂದೇ ಆಗಿದ್ದವು. ಹೇಳುವುದೊಂದು ಮಾಡುವುದೊಂದು ಬದುಕು ಅವರದಾಗಿರಲಿಲ್ಲ. ಹಾಗಾಗಿಯೇ ಅವರು ನಡೆದಾಡುವ ದೇವರುಗಳು ಎಂದೆನಿಸಿಕೊಂಡರು. ಅದೇ ಮಾರ್ಗದಲ್ಲಿ ಈಗಿನ ಸಿದ್ಧಗಂಗಾ ಶ್ರೀಗಳು ಮತ್ತು ಸಿದ್ಧೇಶ್ವರ ಶ್ರೀಗಳು ಮುನ್ನಡೆಯುತ್ತಿದ್ದಾರೆ. ಇಂತಹ ಮಹಾತ್ಮರೆಲ್ಲರು ಜನಮಾನಸದಲ್ಲಿ ಅಚ್ಚಳಿಯದೇ ಉಳಿದುಬಿಡುತ್ತಾರೆ ಎಂದು ನುಡಿದರು.
ಅಧ್ಯಕ್ಷತೆ ವಹಿಸಿದ್ದ ಕೇಂದ್ರ ಕಾರಾಗೃಹದ ಅಧೀಕ್ಷಕ ಡಾ|| ಮಲ್ಲಿಕಾಜರ್ುನ ಬಿ. ಸ್ವಾಮಿ ಮಾತನಾಡಿ, ಇಲ್ಲಿನ ಬಂಧಿಗಳು ಯಾವುದೋ ಸಂದರ್ಭದಲ್ಲಿ ಆಕಸ್ಮಿಕವಾಗಿ ಅಪರಾಧಿಗಳಾಗಿರಬಹುದು. ಕೆಲವರು ಆರೋಪಗಳನ್ನು ಎದುರಿಸುತ್ತಿರುವವರು ಆಗಿದ್ದಾರೆ. ನೀವೆಲ್ಲಾ ಆದರ್ಶರಾಗಬೇಕಾದರೇ ಮೊದಲಿಗೆ ಬದುಕಿನಲ್ಲಿ ಮಹಾತ್ಮರ ತತ್ವಾದರ್ಶಗಳನ್ನು ಅಳವಡಿಸಿಕೊಳ್ಳಬೇಕು ಎಂದು ಹೇಳಿದರು. ಬಂಧಿಗಳ ಮನಪರಿವರ್ತನಾ ಮಾಡಲು ವಿವಿಧ ಕಾರ್ಯಕ್ರಮಗಳನ್ನು ನಾವು ಮುಂಬರುವ ದಿನಗಳಲ್ಲಿ ಹಮ್ಮಿಕೊಳ್ಳುತ್ತೇವೆ. ಶಾಂತಿ ನೆಮ್ಮದಿಗಾಗಿ, ಉತ್ತಮ ಆರೋಗ್ಯಕ್ಕಾಗಿ ಬೇಕಾಗುವ ಸೂತ್ರಗಳನ್ನು ತಿಳಿಸುವ ನಿಟ್ಟಿನಲ್ಲಿ ಕೇಂದ್ರ ಕಾರಾಗೃಹದಲ್ಲಿನ ಬಂಧಿಗಳಿಗೆ ವಿಶೇಷ ಕಾರ್ಯಕ್ರಮ ಏರ್ಪಡಿಸಲಾಗುವುದು ಎಂದರು.
ತಾಲೂಕು ಕ.ಸಾ.ಪ. ಅಧ್ಯಕ್ಷ ಪ್ರೊ. ಯು.ಎನ್. ಕುಂಟೋಜಿ ಪ್ರಾಸ್ತಾವಿಕವಾಗಿ ಮಾತನಾಡಿ, ಮಾನವನ ಬದುಕಿನಲ್ಲಿ ಏರು ಪೇರುಗಳು ಆಗುವುದು ಸಹಜ. ಉದ್ವೇಗಕ್ಕೆ ಒಳಗಾಗದೇ ಕ್ಲಿಷ್ಟ ಹಾಗೂ ಕ್ಲೇಷಕರ ಸಂದರ್ಭಗಳನ್ನು ಸಮಚಿತ್ತದಿಂದ ಎದುರಿಸಿ ಬದುಕನ್ನು ಗೆಲ್ಲಬೇಕು ಎಂದು ಕಾರಾಗೃಹ ಬಂಧಿಗಳಿಗೆ ಕಿವಿಮಾತು ಹೇಳಿದರು.
ಕ.ಸಾ.ಪ. ಜಿಲ್ಲಾಧ್ಯಕ್ಷ ಮಲ್ಲಿಕಾಜರ್ುನ ಯಂಡಿಗೇರಿ ಮಾತನಾಡಿ, ಯಾವುದೋ ಕಾರಣಕ್ಕಾಗಿ ಆವೇಶದಲ್ಲಿ ಅಪರಾಧ ಕೃತ್ಯ ಎಸಗಿರಬಹುದು. ಮಾಡಿದ ಅಪರಾಧಕ್ಕೆ ಪಶ್ಚಾತ್ತಾಪ ಪಟ್ಟುಕೊಂಡು ಮುಂದೆ ಆದರ್ಶ ನಾಗರಿಕರಾಗಿ ಸನ್ನಡತೆಯಿಂದ ಬಾಳುವ ಮೂಲಕ ಎಲ್ಲರ ಮನ ಗೆಲ್ಲಬೇಕು. ನೀವುಗಳು ಸಹ ಈ ಸಮಾಜದ ಒಂದು ಭಾಗವಾಗಿ ಎಲ್ಲರೊಂದಿಗೆ ಬೆರೆತು ಪ್ರೀತಿಯಿಂದ ಬದುಕು ಸಾಗಿಸಿ ಎಂದು ನುಡಿದರು.
ವೇದಿಕೆಯ ಮೇಲೆ ಕಾರಾಗೃಹದ ಜೈಲರ್ಗಳಾದ ಅಂಬರೀಶ್ ಪೂಜಾರಿ, ಎಸ್.ಡಿ. ಸೋದಗಾರ, ಪ್ರಧಾನ ವೀಕ್ಷಕರಾದ ಎ.ಎನ್. ವಣರ್ೇಕರ್, ಎ.ಎಮ್. ಹೊನವಾಡ, ಉಪನ್ಯಾಸಕರಾದ ರಾಜೇಂದ್ರಕುಮಾರ್ ಬಿರಾದಾರ್, ಶರಣಗೌಡ ಪಾಟೀಲ, ಗಾಯಕ ಸೋಮಶೇಖರ ಕುಲರ್ೆ ಉಪಸ್ಥಿತರಿದ್ದರು.