ಪ್ಲಾಸ್ಟಿಕ್ ಬಳಕೆ ನಿಂತಾಗ ಮಾತ್ರ ಪರಿಸರ ಉಳಿಯಲು ಸಾಧ್ಯ
ಕಾಗವಾಡ 20 : ಪರಿಸರ ನಿರ್ವಹಣೆ ಯಲ್ಲಿ ಪ್ಲಾಸ್ಟಿಕ್ ಬಳಕೆಯನ್ನು ಸಂಪೂರ್ಣ ನಿಲ್ಲಿಸಿದಾಗ ಮಾತ್ರ ನಮ್ಮ ಮುಂದಿನ ಪೀಳಿಗೆಗೆ ಒಳ್ಳೆಯ ಪರಿಸರ ವ್ಯವಸ್ಥೆ ಉಳಿಯಲು ಸಾದ್ಯ ಎಂದು ಕರ್ನಾಟಕ ವಿಕಾಸ ಬ್ಯಾಂಕ್ ನಿವೃತ್ತ ವ್ಯವಸ್ಥಾಪಕ ವಿಠ್ಠಲ ಹಳ್ಳೋಳಿ ಹೇಳಿದರು. ಮೋಳೆ ಗ್ರಾಮದಲ್ಲಿ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆ ಬಿಸಿ ಟ್ರಸ್ಟ್ ಜ್ಞಾನ ವಿಕಾಸ ಕಾರ್ಯಕ್ರಮದಡಿ ಆಯೋಜಿಸಿದ ಪ್ಲಾಸ್ಟಿಕ್ ಬಳಕೆ ಬಗ್ಗೆ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿ ಪ್ಲಾಸ್ಟಿಕ್ ಬಳಸಿ ನಾವು ಬಿಸಾಡುವುದರಿಂದ ಮೂಕ ಪ್ರಾಣಿ ಪಕ್ಷಿಗಳು ಅದನ್ನು ಸೇವನೆ ಮಾಡಿ ಜೀವಕ್ಕೆ ಆಪತ್ತು ಮಾಡಿಕೊಳ್ಳುತ್ತವೆ ಎಲ್ಲೆಂದರಲ್ಲಿ ಒಗೆಯುವದರಿಂದ ಅದು ಕೊಳೆಯದೆ ಹಾಗೆ ಉಳಿಯುವದರಿಂದ ಪರಿಸರದ ಕೆಟ್ಟ ಪರಿಣಾಮ ಬೀರುತ್ತದೆ ಹಾಗಾಗಿ ಮಹಿಳಾ ಗುಂಪುಗಳು ಒಬ್ಬ ಒಬ್ಬರು ಪ್ಲಾಸ್ಟಿಕ್ ಬಳಕೆ ಬದಲು ಬಟ್ಟೆ ಚೀಲಗಳನ್ನು ಬಳಸಲು ಶುರುಮಾಡಿ ಹಾಗೆ ನಿಮ್ಮ ಅಕ್ಕ ಪಕ್ಕದ ಐದು ಜನರಿಗೆ ಇದರ ದುಷ್ಪರಿಣಾಮಗಳ ಬಗ್ಗೆ ಮಾಹಿತಿ ನೀಡಿ ಇಡೀ ನಿಮ್ಮ ಗ್ರಾಮ ಸ್ವಚ್ಛವಾಗುತ್ತದೆ ಅದರಂತೆ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆ ಗ್ರಾಮೀಣ ಭಾಗದ ಮಹಿಳೆಯರು ಸ್ವಾವಲಂಬಿಗಳಾ ಜೀವನ ನಡೆಸಲು ರಾಷ್ಟ್ರೀಕೃತ ಬ್ಯಾಂಕ್ ಹಾಗೂ ಹಿಂದುಳಿದ ಹಾಗೂ ಗ್ರಾಮೀಣ ಭಾಗದ ಬಡ ಮಹಿಳೆಯರು ಆರ್ಥಿಕವಾಗಿ ಸದೃಢವಾಗಲು ಡಾ.ವೀರೇಂದ್ರ ಹೆಗಡೆ ಅವರ ನೇತೃತ್ವದ ಧರ್ಮಸ್ಥಳ ಗ್ರಾಮಾಭಿವೃದ್ದಿ ಸಂಸ್ಥೆ ಶಕ್ತಿ ನಿಲ್ಲುವುದರ ಜೊತೆಗೆ ಮದ್ಯ ವ್ಯೆರ್ಜನ ಗ್ರಾಮಗಳ ಕೆರೆ ಅಭಿವೃದ್ಧಿ ಶಾಲೆ ಹಾಗೂ ದೇವಸ್ಥಾನ ಅಭಿವೃದ್ಧಿಯಂತ ಸಾಮಾಜಿಕ ಕಾರ್ಯಕ್ರಮಗಳನ್ನು ಮಾಡುತ್ತ ಬರುತ್ತಿರುವುದು ಶ್ಲಾಘನೀಯ ಎಂದು ಹೇಳಿದರು. ಕಾರ್ಯಕ್ರಮದ ಬಗ್ಗೆ ಜಿಲ್ಲಾ ನಿರ್ದೇಶಕಿ ನಾಗರತ್ನಾ ಹೆಗಡೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಪಿಡಿಒ ದಾನಮ್ಮ ಸಜ್ಜನ ಸಂಜೀವ ಮರಾಠೆ ಅನಸೂಯಾ ಸಪ್ಪಡ್ಲಿ ಸವಿತಾ ದೇಸಾಯಿ ಕಲ್ಲವ್ವ ತೇಜುಮಾಳಿ ಸೇರಿದಂತೆ ಅನೇಕರು ಇದ್ದರು ವಿವರಿಸಿದರು.