ಹುಬ್ಬಳ್ಳಿ-06, ಧಾರವಾಡ ಜಿಲ್ಲೆ ಹಿಂದಿನಿಂದಲೂ ಸಹಕಾರ ಕ್ಷೇತ್ರದ ಬೆಳವಣಿಗೆಯಲ್ಲಿ ತನ್ನದೇ ಆದ ಛಾಪು ಮೂಡಿಸಿ, ರಾಜ್ಯದ ಪ್ರಗತಿಪರ ಜಿಲ್ಲೆ ಎನಿಸಿಕೊಂಡಿತ್ತು. ಕೆಲವು ಅನಿವಾರ್ಯ ಕಾರಣಗಳಿಂದ ಕುಂಠಿತಗೊಂಡು ಸಹಕಾರಿಗಳ ಸತತ ಪರಿಶ್ರಮದಿಂದ ಇಂದು ಉಳಿದೆಲ್ಲ ಮುಂದುವರೆದ ಜಿಲ್ಲೆಗಳಂತೆ ಧಾರವಾಡ ಜಿಲ್ಲೆಯು ಸಹಕಾರ ಕ್ಷೇತ್ರದಲ್ಲಿ ವಿಶೇಷ ಪ್ರಗತಿಯನ್ನು ಸಾಧಿಸುತ್ತಾ ಬಂದಿದೆ. ಇದಕ್ಕಾಗಿ ಜಿಲ್ಲೆಯ ಹಲವಾರು ಹಿರಿಯ ಸಹಕಾರಿ ಮುಖಂಡರು ತಮ್ಮ ತನುಮನವನ್ನು ಧಾರೆಯೆರೆದು ಬೆಳಸಿದ್ದಾರೆ ಎಂದು ಕೆ.ಸಿ.ಸಿ. ಬ್ಯಾಂಕ ಧಾರವಾಡ ಹಾಗೂ ಧಾರವಾಡ ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಬಾಪುಗೌಡ ಡಿ. ಪಾಟೀಲ ಹೇಳಿದರು.
ಅವರು ಇಂದು ನಗರದ ಮುನ್ಸಿಪಲ್ ನೌಕರರ ಸಹಕಾರ ಸಂಘದ ಸಭಾಭವನದಲ್ಲಿ ಕನರ್ಾಟಕ ರಾಜ್ಯ ಸಹಕಾರ ಮಹಾಮಂಡಳ ಬೆಂಗಳೂರು ಮತ್ತು ಧಾರವಾಡ ಜಿಲ್ಲಾ ಸಹಕಾರ ಯೂನಿಯನ್ ಇವರುಗಳ ಸಹಯೋಗದಲ್ಲಿ ಜರುಗಿದ ಹುಬ್ಬಳ್ಳಿ ಹಾಗೂ ಕುಂದಗೋಳ ತಾಲೂಕಿನ ಸಹಕಾರ ಸಂಘಗಳ ಚುನಾವಣೆ ಜರುಗಿಸಬೇಕಾದಂತಹ ಸಂಘಗಳ ಮುಖ್ಯ ಕಾರ್ಯನಿವರ್ಾಹಕರು ಮತ್ತು ಚುನಾವಣಾಧಿಕಾರಿಗಳ ತರಬೇತಿ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಮುಖ್ಯ ಕಾರ್ಯನಿರ್ವಾ ಹಕರು ಮತ್ತು ಚುನಾವಣಾಧಿಕಾರಿಗಳಿಗೆ ಜಾಗೃತಿಯನ್ನು ಮೂಡಿಸಲು ಪ್ರಾಥಮಿಕ ಹಂತದಲ್ಲಿ ತರಬೇತಿಗಳನ್ನು ನೀಡುವುದರಿಂದ ಚುನಾವಣೆ ಕುರಿತು ಹೆಚ್ಚು ತಿಳುವಳಿಕೆಯನ್ನು ನೀಡಿದಂತಾಗುತ್ತದೆ ಎಂದರು.
ಚುನಾವಣಾ ತರಬೇತಿಯಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ ಯೂನಿಯನ್ ನಿದರ್ೇಶಕ ಪಿ.ಪಿ. ಗಾಯಕವಾಡ, ಕೆ.ಸಿ.ಸಿ. ಬ್ಯಾಂಕ ನಿದರ್ೇಶಕ ನಿಂಗನಗೌಡ ಮರಿಗೌಡ್ರ, ಬ್ಯಾಂಕಿನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ. ಮುನಿಯಪ್ಪ, ಸಹಕಾರ ಸಂಘಗಳ ಉಪನಿಬಂಧಕಿ ಎಸ್.ಬಿ. ಹಿರೇಮಠ, ಸಹಕಾರ ಸಂಘಗಳ ಲೆಕ್ಕ ಪರಿಶೋಧನಾ ಇಲಾಖೆಯ ಉಪನಿದರ್ೇಶಕಿ ಗಾಯತ್ರಿ ಪಿ. ಕಕ್ಕಾಳಮೇಲಿ ಉಪಸ್ಥಿತರಿದ್ದು ಮಾತನಾಡಿದರು. ತಹಸಿಲ್ದಾರ ಬಸವರಾಜ ಮೆಳವಣಕಿ ಮತ್ತು ಶಿವಾನಂದ ಪಿ. ರಾಣೆ ಉಪಸ್ಥಿತರಿದ್ದರು.
ಅಧ್ಯಕ್ಷತೆ ವಹಿಸಿದ ಧಾರವಾಡ ಜಿಲ್ಲಾ ಸಹಕಾರ ಯೂನಿಯನ್ ಉಪಾಧ್ಯಕ್ಷ ಪ್ರತಾಪ ಎ. ಚವ್ಹಾಣ ಅವರು ಸಹಕಾರ ಕಾಯ್ದೆ ಹಾಗೂ ಕಾನೂನಿನಲ್ಲಿ ಇತ್ತಿಚೆಗೆ ಸಾಕಷ್ಟು ತಿದ್ದುಪಡೆಗಳು ಆಗುತ್ತಿರುವ ಇಂತಹ ಸಂದರ್ಭದಲ್ಲಿ, ಚುನಾವಣಾಧಿಕಾರಿಗಳಿಗೆ ಮತ್ತು ಮುಖ್ಯ ಕಾರ್ಯನಿರ್ವಾ ಹಕರಿಗೆ ಅಗತ್ಯವಾದ ಒಂದು ದಿನದ ತರಬೇತಿಯನ್ನು ವ್ಯವಸ್ಥೆ ಮಾಡಲಾಗಿದೆ. ತರಬೇತಿಯಲ್ಲಿ ಚುನಾವಣೆ ಜರುಗಿಸಬೇಕಾದಂತಹ ಸಹಕಾರ ಸಂಸ್ಥೆಗಳ ಸಿಬ್ಬಂದಿಗಳಿಗೆ ತಜ್ಞರು, ಉಪನ್ಯಾಸಗಳನ್ನು ನೀಡಲಿದ್ದಾರೆ ಇದರ ಪ್ರಯೋಜನ ಪಡೆದುಕೊಳ್ಳಲು ಕರೆ ನೀಡಿದರು. ಕಾರ್ಯಕ್ರಮದಲ್ಲಿ ಎಂ.ಜಿ. ಪಾಟೀಲ ಹಾಗೂ ವ್ಹಿ.ಜಿ. ಕುಲಕರ್ಣಿ ಅವರು ಉಪನ್ಯಾಸ ನೀಡಿದರು.
ಎಂ.ಜಿ. ಪಾಟೀಲ ಸ್ವಾಗತಿಸಿ, ನಿರೂಪಿಸಿದರು. ಪಿ.ಪಿ. ಗಾಯಕವಾಡ ವಂದಿಸಿದರು.