ಕಾರ್ಖಾನೆ ಮುಚ್ಚಲು ಜಿಲ್ಲಾಡಳಿತಕ್ಕೆ ಮನಸ್ಸಿಲ್ಲ : ಅಲ್ಲಮಪ್ರಭು ಬೆಟ್ಟದೂರು

The district administration does not mind closing the factory: Allamaprabhu Bettadur

ಕಾರ್ಖಾನೆ ಮುಚ್ಚಲು ಜಿಲ್ಲಾಡಳಿತಕ್ಕೆ ಮನಸ್ಸಿಲ್ಲ : ಅಲ್ಲಮಪ್ರಭು ಬೆಟ್ಟದೂರು

ಕೊಪ್ಪಳ 05 ಸರಕಾರವೇ ಸಾರ್ವಜನಿಕ ಕೆರೆ ಮಾರಿದ ಬಗ್ಗೆ ಮಾಹಿತಿ ಕೇಳಿದರೆ ಜಿಲ್ಲಾಧಿಕಾರಿ ಅವರು ಮಾಹಿತಿ ನೀಡಲು ಸಮಯ ಇಲ್ಲವೆನ್ನುತ್ತಿದ್ದಾರೆ, ಅದಕ್ಕೆ ಜಿಲ್ಲಾಧಿಕಾರಿಗಳ ತುರ್ತು ವರ್ಗಾವಣೆ ಆಗಬೇಕಿದೆ ಎಂದು ಹೋರಾಟಗಾರ, ಬಂಡಾಯ ಸಾಹಿತಿ ಅಲ್ಲಮಪ್ರಭು ಬೆಟ್ಟದೂರು ಆಗ್ರಹಿಸಿದರು.ಅವರು ಈ ಕುರಿತು ಪತ್ರಿಕಾ ಭವನದಲ್ಲಿ ಮಾಧ್ಯಮ ಗೋಷ್ಠಿ ನಡೆಸಿ ಮಾತನಾಡಿದರು. 

ಅಲ್ಲಿನ ಜನತೆಗೆ ತೀವ್ರ ಸ್ವರೂಪದ ಕಾಯಿಲೆಗಳು ಬಂದಿವೆ, ಕ್ಯಾನ್ಸರ್ ಕಾರಕ ಪರಿಸರ ಹಾನಿ ಆದರೂ ಸಹ ನಮಗೆ ಮಾಹಿತಿ ಇಲ್ಲ. ಪರಿಸರ ಇಲಾಖೆ ಇದೆಯೋ ಇಲ್ವೋ, ಇದ್ದರೆ ಎಲ್ಲಿದೆ, ಅವರು ಸತ್ತು ಹೋಗಿದ್ದಾರಾ? ಎಂದು ಅವರು ಪ್ರಶ್ನಿಸಿದರು. ಪ್ರಗತಿಪರ ಹೋರಾಟಗಾರ ಕೆ. ಬಿ. ಗೋನಾಳ ಅವರು ಮಾತನಾಡಿ, ಬೇರೆ ತಾಲೂಕಿನ ಜನ ಬಂದು ಇಲ್ಲಿ ಪತ್ರಿಕೆಗಳಿಗೆ ಹೇಳಿಕೆ ಕೊಟ್ಟು ಕಾರ್ಖಾನೆ ಅವರಿಂದ ಏನೋ ಲಾಭ ಪಡೆದುಕೊಳ್ಳಲು ಬರುತ್ತಿದ್ದಾರೆ ಅವರನ್ನು ನಿರ್ಲಕ್ಷ್ಯ ಮಾಡಬೇಕು, ಅವರು ಎಂದೂ ಜನರಪರ ಹೋರಾಟ ಮಾಡಿದವರಲ್ಲ ಎಂಬುದನ್ನು ಈ ಮೂಲಕ ತಿಳಿಯಪಡಿಸುತ್ತೇವೆ ಎಂದರು.ಹೋರಾಟ ನಿರಂತರವಾಗಿರುತ್ತದೆ, ಕಂಪನಿಯವರು ಜನರಿಗೆ ಮಂಕು ಬೂದಿ ಎರಚುತ್ತಿದ್ದಾರೆ, ಕಾರ್ಖಾನೆ ಮಾಲಿಕರೇ ಕೆಲವು ಸಂಘಟನೆಗಳಿಗೆ ಚೂ ಬಿಡುವ ಕೆಲಸ ಮಾಡುತ್ತಿದ್ದಾರೆ. ಕೊಪ್ಪಳ ಜಿಲ್ಲಾ ಬಚಾವೋ ಆಂದೋಲನದ ಮೂಲಕ ಜನಪ್ರತಿನಿಧಿಗಳಿಗೆ ಒತ್ತಾಯ ಮಾಡುತ್ತೇವೆ, ಕಾರ್ಖಾನೆ ಬಂದು ಮಾಡಿಸಿ ಇಲ್ಲವೇ ರಾಜೀನಾಮೆ ಕೊಡಿ ಎಂಬುದು. ಸರಕಾರ ಅಣು ಸ್ಥಾವರದ ಕುರಿತು ಮಾತನಾಡುತ್ತಿಲ್ಲ, ನಮಗೆ ಅದಕ್ಕಾಗಿ ಇನ್ನೊಂದು ಹೋರಾಟ ಮಾಡಲು ಆಗಲ್ಲ. ಆದ್ದರಿಂದ ಆ ವಿಷಯ ಕೂಡ ಚರ್ಚೆ ಆಗಬೇಕು. ಸರಕಾರಿ ಕೆರೆ ಸಾರ್ವಜನಿಕ ಬಳಕೆಗೆ ಮುಕ್ತವಾಗಬೇಕು, ಅದಕ್ಕೆ ಕಟ್ಟಿರುವ ಗೋಡೆ ತಗಿಬೇಕು. ಅಲ್ಲಿನ ಬಾದಿತ ಜನರ ಆರೋಗ್ಯ ಸಮೀಕ್ಷೆ ಮಾಡಿ ಅವರಿಗೆ ಸರಕಾರಿ ವೆಚ್ಚದಲ್ಲಿ ಚಿಕಿತ್ಸೆ ನೀಡಬೇಕು ಎಂದು ಮುಖಂಡರು ಒತ್ತಾಯಿಸಿದರು.ಈ ಸಂದರ್ಭದಲ್ಲಿ ಜಿಲ್ಲಾ ಬಚಾವೋ ಆಂದೋಲನ ಸಮಿತಿಯ ಜ್ಯೋತಿ ಎಂ. ಗೊಂಡಬಾಳ, ನಜೀರಸಾಬ್ ಮೂಲಿಮನಿ, ಮಹಾಂತೇಶ ಕೊತಬಾಳ, ಶರಣು ಗಡ್ಡಿ, ಮಂಜುನಾಥ ಜಿ. ಗೊಂಡಬಾಳ, ಕಾಶಪ್ಪ ಚಲವಾದಿ, ಮುದಕಪ್ಪ ಹೊಸಮನಿ ಇತರರು ಇದ್ದರು.