ಲೋಕದರ್ಶನ ವರದಿ
ಬಳ್ಳಾರಿ: ಸಾಮಾಜಿಕ ಜಾಲತಾಣದಲ್ಲಿ ವಾಲ್ಮೀಕಿ ಸಮೂದಾಯಗಳ ಬಗ್ಗೆ ಅವಹೇಳನಾ ಕಾರಿಯಾಗಿ ಮಾತನಾಡಿ ವ್ಯಾಟ್ಸ್ಪ್ ಫೇಸ್ಬುಕ್ನಲ್ಲಿ ಹಾಕಿರುವವರ ಮೇಲೆ ಕಾನೂನು ಕ್ರಮಕ್ಕೆ ಆಗ್ರಹಿಸಿ ಜಿಲ್ಲಾ ವಾಲ್ಮೀಕಿ ಹೋರಾಟ ಸಮಿತಿ ಬುಧವಾರ ನಗರದಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು. ನಗರದ ನಾಗನೂರು ನಾರಾಯಣರಾವ್ ಉದ್ಯಾನವನದಿಂದ ಪ್ರತಿಭಟನಾ ಆರಂಭಿಸಿ ಗಡಗಿ ಚನ್ನಪ್ಪ ವೃತ್ತದಲ್ಲಿ ಕೆಲಸಮಯ ರಸ್ತೆ ತಡೆ ನಡೆಸಿ ಟೈರ್ಗೆ ಬೆಂಕಿ ಅಚ್ಚುವ ಮೂಲಕ ಪ್ರತಿಭಟನೆ ನಡೆಸಿದರು. ಕೆಲ ಕಿಡಿಗೇಡಿಗಳು ವಾಲ್ಮೀಕಿ ಸಮೂದಾಯದವರ ಬಗ್ಗೆ ಅವಹೇಳನಕಾರಿ ಮಾತುಗಳನ್ನು ಅವ್ಯಾಚ ಶಬ್ದಗಳಿಂದ ನಿಂದಿಸಿ ಚಿತ್ರಿಕರಿಸುವ ವಿಡಿಯೋ ಮತ್ತು ಆಡಿಯೋಗಳು ಪ್ರಜ್ಞಾವಂತ ಸಮಾಜ ನಾಚುವಂತ ಕೆಲಸವಾಗಿದೆ. ಎಲ್ಲಾ ವರ್ಗದ ಜನ ಮತ್ತು ನಮ್ಮ ಸಮೂದಾಯ ಅದನ್ನು ನೋಡಿ ವಾಲ್ಮೀಕಿ ಸಮಾಜಕ್ಕೆ ತೀರ್ವ ಆಕ್ರೋಶ ಉಂಟು ಮಾಡಿದೆ. ಅವಮಾನಕರ ಹೇಳಿಕೆ ನೀಡಿದ ಕಿಡಿಗೇಡಿಗಳು ಕೊಪ್ಪಳ ಮತ್ತು ಹಾವೇರಿ ಜಿಲ್ಲೆಯವರೆಂದು ಹೇಳಿಕೊಂಡಿದ್ದಾರೆ.
ಅವರನ್ನು ಕಾನೂನು ರೀತಿ ಬಂಧಿಸಿ ಕ್ರಮಿನಲ್ ಮುಕದ್ದಮೆ ಹಾಕಿ ಜಾತಿನಿಂದನೆ ಕೆಸ್ ದಾಖಲಿಸಲು ಮುಖ್ಯಮಂತ್ರಿಗಳಿಗೆ ಒತ್ತಾಯಿಸಿದೆ. ಈ ತಪ್ಪು ಮಾಡಿದವರನ್ನು ಬಂಧಿಸದಿದ್ದರೇ ತೀರ್ವ ಹೋರಾಟಗೊಳ್ಳಲಿದೆ. ಎಂಬ ಮನವಿ ಪತ್ರವನ್ನು ಜಿಲ್ಲಡಳಿತಕ್ಕೆ ಸಲ್ಲಿಸಲಾಯಿತು. ಈ ಪ್ರತಿಭಟನೆಯಲ್ಲಿ ಸಮೂದಾಯದ ಮುಖಂಡರುಗಳಾದ ವಿ.ಕೆ.ಬಸಪ್ಪ, ಎಸ್.ಸತ್ಯನಾರಾಯಣ, ಬಿ.ರುದ್ರಪ್ಪ, ಜೋಳದರಾಶಿ ತಿಮ್ಮಪ್ಪ, ದೊಡ್ಡ ಹುಲುಗಪ್ಪ, ರಂಜಿತ್ ಕುಮಾರ, ಯರ್ರಗುಡಿ ಬುಗ್ಗಪ್ಪ, ಬಿ.ರಘು, ಲೋಕರೆಡ್ಡಿ, ಮಲ್ಲಯ್ಯ, ರಮೇಶ, ಸೀನಾ, ದಿವಾಕರ್, ತಾಯಣ್ಣ, ಜನಾರ್ಧನ ನಾಯ್ಕ್, ದುರುಗಪ್ಪ, ಕಾಯಪಲ್ಲೆ ಬಸವರಾಜ, ಅದ್ದಿಗೇರಿ ತಿಮ್ಮಪ್ಪ, ಸುಂಕಣ್ಣ, ಸೇರಿದಂತೆ ನೂರಾರು ಜನ ವಾಲ್ಮೀಕಿ ಸಮೂದಾಯದವರು ಈ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.