ಕೋಲ್ಕತ್ತ: 1975 ರಲ್ಲಿ ಘೋಷಿಸಲಾದ ತುತರ್ು ಪರಿಸ್ಥಿತಿ ವಾಷರ್ಿಕ ದಿನ ಅಂಗವಾಗಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನಜರ್ಿ ಹೇಳಿಕೆಯನ್ನು ನೀಡಿ, ಕಳೆದ ಐದು ವರ್ಷಗಳಿಂದ ದೇಶವು ತುರ್ತು ಪರಿಸ್ಥಿತಿ (ಸೂಪರ್ ಎಮಜರ್ೆನ್ಸಿ)ಯ ನಡುವೆ ಸಾಗಿದೆ ಎಂದು ಹೇಳಿದ್ದಾರೆ. 'ಇಂದು 1975 ರಲ್ಲಿ ಘೋಷಿಸಲಾದ ತುರ್ತು ಸ್ಥಿತಿಯ ವಾರ್ಷಿಕ ದಿನವಾಗಿದೆ. ಕಳೆದ ಐದು ವರ್ಷಗಳಿಂದ ದೇಶವು 'ಸೂಪರ್ ಎಮಜರ್ೆನ್ಸಿ' ಯ ಮೂಲಕ ಸಾಗಿದೆ.' ಎಂದು ಮಮತಾ ಬ್ಯಾನರ್ಜಿ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.
'ಇತಿಹಾಸದಿಂದ ನಾವು ಪಾಠಗಳನ್ನು ಕಲಿಯಬೇಕು ಮತ್ತು ದೇಶದ ಸಾಂವಿಧಾನಿಕ ಸಂಸ್ಥೆಗಳನ್ನು ರಕ್ಷಿಸಲು ಹೋರಾಡಬೇಕು.' ಎಂದು ಅವರು ಹೇಳಿದ್ದಾರೆ.
'ಅಂದಿನ ಪ್ರಧಾನಿ ಇಂದಿರಾ ಗಾಂಧಿ 1975 ರಿಂದ 1977 ರವರೆಗೆ(19 ತಿಂಗಳು) ದೇಶದಲ್ಲಿ ತುರ್ತು ಪರಿಸ್ಥಿತಿ ಘೋಷಿಸಿದ್ದರು. ಆಂತರಿಕ ಸಮಸ್ಯೆಗಳಿವೆ ಎಂಬ ಕಾರಣದಿಂದ ಸಂವಿಧಾನದ 352 ನೇ ವಿಧಿಯಲ್ಲಿನ ಅಧಿಕಾರ ಚಲಾಯಿಸಿ ರಾಷ್ಟ್ರಪತಿ ಫಕ್ರುದ್ದೀನ್ ಅಲಿ ದೇಶದಲ್ಲಿ ತುರ್ತು ಪರಿಸ್ಥಿತಿ ಜಾರಿಗೆ ಅಧಿಕೃತವಾಗಿ ಆದೇಶ ಹೊರಡಿಸಿದ್ದರು. ತುರ್ತು ಪರಿಸ್ಥಿತಿ ಜೂನ್ 25, 1975 ರಿಂದ ಮಾಚರ್್ 21, 1977ರ ವರಗೆ ದೇಶದಲ್ಲಿ ಜಾರಿಯಲ್ಲಿತ್ತು. ತುರ್ತು ಪರಿಸ್ಥಿತಿಯಿಂದ ದೇಶದಲ್ಲಿ ಚುನಾವಣೆಗಳು ಸ್ಥಗಿತಗೊಂಡು ನಾಗರಿಕ ಸ್ವಾತಂತ್ರ್ಯವನ್ನು ಹತ್ತಿಕ್ಕಲಾಯಿತು. ಇಂದಿರಾಗಾಂಧಿಯವರ ಬಹುತೇಕ ರಾಜಕೀಯ ವಿರೋಧಿಗಳನ್ನು ಜೈಲಿಗೆ ಕಳುಹಿಸಿ, ಪತ್ರಿಕಾ ಸ್ವಾಂತ್ರವ್ಯವನ್ನು ಹಿಂಪಡೆದು, ಮಾಧ್ಯಮಗಳನ್ನು ಸೆನ್ಸಾರ್ ಮಾಡಲಾಯಿತು. ಮಾನವ ಹಕ್ಕುಗಳ ಉಲ್ಲಂಘನೆಗಳ ಅನೇಕ ಘಟನೆಗಳು ವರದಿಯಾಗಿದ್ದವು. ಸ್ವತಂತ್ರ ಭಾರತದ ಇತಿಹಾಸದ ಅತ್ಯಂತ ವಿವಾದಾತ್ಮಕ ಅವಧಿಗಳಲ್ಲಿ ತುತರ್ು ಪರಿಸ್ಥಿತಿ ಒಂದಾಗಿದೆ.