ಲೋಕದರ್ಶನ ವರದಿ
ಧಾರವಾಡ 12: ಕನ್ನಡ ಸಾಹಿತ್ಯ ಪ್ರಪಂಚ ಆಳವಾದದ್ದು ಹೌದು, ವಿಶಾಲವಾದದ್ದೂ ಹೌದು. ಕಥೆಗಾರಿಕೆ ಎನ್ನುವದು ಇಂಥದೊಂದು ದೊಡ್ಡ ಪರಂಪರೆಯ ಒಂದು ಭಾಗವಾಗಿ ಬಂದಿದ್ದು ತತ್ವಜ್ಞಾನ. ಚರಿತ್ರೆಗಳು ಘಟನೆಗಳನ್ನು ಹೇಳುವ ಪ್ರಕಾರಗಳಾದರೆ ಒಬ್ಬರ ಸುತ್ತ ಒಂದು ಕಥೆಯಾಗಿ ಹೆಣೆದದ್ದು ವಿಭಿನ್ನ ಅಭಿವ್ಯಕ್ತಿಗಳ ಮೂಲಕ ಹಾದಾಗ ಅದು ಸಾರ್ವತ್ರಿಕಗೊಂಡು ಕಾಲ ಧರ್ಮಗಳನ್ನೆಲ್ಲ ಅರಗಿಸಿಕೊಂಡು
ದೇಶ, ಕಾಲ ಮೀರಿ ನಿಲ್ಲುವ ಸಾಮಥ್ರ್ಯ ಹೊಂದಿರುತ್ತದೆ ಎಂದು ಕವಿ, ಪ್ರಸಿದ್ಧ ಕಥೆಗಾರ ಬಸು ಬೇವಿನಗಿಡದ ಅಭಿಪ್ರಾಯ ವ್ಯಕ್ತಪಡಿಸಿದರು.
ಸಾಹಿತ್ಯಿಕ ಸಂಘಟನೆ ಅನ್ವೇಷಣಕೂಟದ ಆಶ್ರಯದಲ್ಲಿ ಆದರ್ಶ ಶಿಕ್ಷಕ, ಸ್ನೇಹ ಜೀವಿ, ಸಾಹಿತಿ ಡಾ.ವರದರಾಜ ಹುಯಿಲಗೋಳ ಪುಣ್ಯಸ್ಮರಣೆಯ ಅಂಗವಾಗಿ ದಿ. 10ರಂದು ಸಾಧನಕೇರಿಯ 'ಚೈತ್ರದ ಸಭಾಂಗಣದಲ್ಲಿ ಏರ್ಪಡಿಸಿದ್ದ "ಕನ್ನಡ ಕಥಾ ಸಾಹಿತ್ಯ : ಹೊಸ ಒಲವುಗಳು" ಎಂಬ ವಿಶೇಷ ಉಪನ್ಯಾಸ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಅವರು ಮಾತನಾಡುತ್ತಿದ್ದರು.
ನವೋದಯ ಕಾಲದ ಮಾಸ್ತಿ, ಪಂಜೆಮಂಗೇಶರಾಯ, ಕೆರೂರು ವಾಸುದೇವಾಚಾರ್ಯರಂಥ ಹಿರಿಯ ಲೇಖಕರ ರಚನೆಗಳು ಮಾನವೀಯತೆ, ಪಾರಂಪರಿಕ ಮೌಲ್ಯಗಳು, ಹಾಸ್ಯ, ವಿನೋದ, ಸ್ವಾತಂತ್ರ್ಯದ ತವಕಗಳಿಂದ ಕೂಡಿದ್ದು ತಮ್ಮ ಆಶಯಗಳನ್ನು ನೇರವಾಗಿ ಹೇಳುತ್ತಿದ್ದರೆ, ನವ್ಯ ಕಾಲ ಘಟ್ಟದ ಅನಂತಮೂತರ್ಿ, ಲಂಕೆೇಶ, ಶಾಂತಿನಾಥ ದೇಸಾಯಿ, ಪೂರ್ಣಚಂದ್ರ ತೇಜಸ್ವಿಯವರಂಥ ಸಮರ್ಥ ಬರಹಗಾರರ ಕೃತಿಗಳೆಲ್ಲ ಸಾಂಪ್ರದಾಯಿಕ ಪರಂಪರೆ, ಆಧುನಿಕತೆ, ಬದುಕಿನ ಛಿದ್ರತೆ, ಅಪನಂಬಿಕೆ, ಕೌಟುಂಬಿಕ ವಿಘಟನೆಗಳೆಲ್ಲವನ್ನೂ ಮುಖಾಮುಖಿಗೊಳಿಸುತ್ತ ಮಾನವ ಸಜೀವ ಸಂಬಂಧಗಳನ್ನು ತೋರಿಸುವ ಕಲಾತ್ಮಕ ಸಾಧನಗಳಾಗಿ ನಿಲ್ಲತ್ತವೆ. ಅದರ ಮುಂದುವರಿಕೆಯಾಗಿ ವರ್ಗ ಸಂಘರ್ಷ, ಜಾತಿ ಸಂಘರ್ಷಗಳ ಆಧುನಿಕ ಜಗತ್ತಿನ ತಲ್ಲಣಗಳಿಂದ ಕೂಡಿದ ಇತ್ತೀಚಿನ ಕೆಲ ಕಥೆಗಾರರ ರಚನೆಗಳು ಬೇರೆಯದೊಂದೇ ಆಯಾಮದತ್ತ ನಮ್ಮನ್ನು ಸೆಳೆಯುವುದನ್ನು ನಾವಿಂದು ಕಾಣುತ್ತಿದ್ದೇವೆ ಎಂದು ಬಸು ಬೇವಿನಗಿಡದ ಕಥಾ ಸಾಹಿತ್ಯದ ವಿವಿಧ ಹಂತಗಳ ವಿಶೇಷತೆಗಳನ್ನು ವಿವರಿಸಿದರು.
ಅಧ್ಯಕ್ಷತೆ ವಹಿಸಿದ್ದ ಡಾ. ವಿ.ಟಿ.ನಾಯಕ ಅವರು ಮಾತನಾಡಿ ಹಿರಿಯರಾದ ವರದರಾಜ ಹುಯಿಲಗೋಳ ಹಾಗೂ ತಮ್ಮ ನಡುವಿನ ಒಂದು ಕಾಲದ ಸುಮಧುರ ಬಾಂಧವ್ಯವನ್ನು ನೆನಪಿಸಿಕೊಂಡು ವರದರಾಜರ ವೈವಿಧ್ಯಮಯ ಸಾಹಿತ್ಯ ಕೃಷಿ ಮತ್ತು ಸಂಘಟನಾ ಚಾತುರ್ಯವನ್ನು ಕೊಂಡಾಡಿದರು. ಕಥಾ ಸರಿತ್ಸಾಗರ, ಪಂಚತಂತ್ರಗಳಲ್ಲಿಯ ತಂತ್ರಗಾರಿಕೆಗಳು ಜಗತ್ತಿನ ಇನ್ನಾವುದೇ ಸಾಹಿತ್ಯದಲ್ಲಿ ಕಾಣಬರುವದಿಲ್ಲ ಎಂದರು.
ನಂತರ ನಡೆದ ಸಂಗೀತ ಕಾರ್ಯಕ್ರಮದಲ್ಲಿ ಗಾಯಕ ಕರಣಂ ಶ್ರೀಪಾದ ಅವರು ಆಡಪೋಗೋಣ ಬಾರೊ ರಂಗಾ, ದೇವಿ ಬನಶಂಕರಿ, ರಾಘವೇಂದ್ರ ಗುರುರಾಯಾ, ಕಂಡು ಕಂಡು ನೀ ಎನ್ನ ಕೈ ಬಿಡುವದೇ, ಮೀರಾ ಭಜನ್ ಮುಂತಾದ ಭಕ್ತಿ ಗೀತಗಳನ್ನು ಸುಶ್ರಾವ್ಯವಾಗಿ ಪ್ರಸ್ತುತ ಪಡಿಸಿದರು. ಹಾಮರ್ೋನಿಯಂದಲ್ಲಿ ಷಣ್ಮುಖಪ್ಪಾ ಬಡಿಗೇರ, ಹಾಗೂ ತಬಲಾದಲ್ಲಿ ಅನೂಪ ಕುಲಕಣರ್ಿ ಸಾಥ್ ನೀಡಿದರು.
ಅನ್ವೇಷಣಕೂಟದ ಅಧ್ಯಕ್ಷ ನರಸಿಂಹ ಪರಾಂಜಪೆ, ವೆಂಕಟೇಶ ದೇಸಾಯಿ, ಹ.ವೆಂ.ಕಾಖಂಡಿಕಿ, ಗಣ್ಯರಾದ ಪ್ರೊ.ಸಿ.ವಿ.ವೇಣುಗೋಪಾಲ, ಪ್ರೊ.ದುಷ್ಯಂತ ನಾಡಗೌಡ, ಡಾ. ಎಸ್.ಕೆ.ಜೋಶಿ, ಪ್ರೊ.ಎ.ಜಿ.ಸಬರದ, ಡಾ.ಆರ್.ಬಿ.ಚಿಲುಮಿ, ಅರವಿಂದ ಯಾಳಗಿ, ಡಾ. ಗೋವಿಂದರಾಜ ತಳಕೋಡ, ಎಚ್.ಎಮ್.ಪಾಟೀಲ, ಹ.ಶಿ.ಭೈರನಟ್ಟಿ, ಶ್ರೀನಿವಾಸ ವಾಡಪ್ಪಿ, ಡಾ. ದೀಪಕ ಆಲೂರ, ಆನಂದ ಪಾಟೀಲ, ಜಿ.ಬಿ.ಹೊಂಬಳ, ಪ್ರೊ.ಸಿ.ಆರ್.ಜೋಶಿ, ಲಕ್ಷ್ಮೀಕಾಂತ ಇಟ್ನಾಳ, ಶ್ರೀನಿವಾಸ ಹುದ್ದಾರ, ಎಸ್.ಎಂ.ದೇಶಪಾಂಡೆ, ಬಿ.ಆರ್.ಪರ್ವತೀಕರ, ಎಸ್.ಬಿ.ದ್ವಾರಪಾಲಕ, ಎಸ್.ಆರ್.ಭಟ್ಕಳ ಮುಂತಾದವರು ಉಪಸ್ಥಿತರಿದ್ದರು.