ವಿವರ ನೀಡದೇ ಕರಾಟೆ ಸ್ವಧರ್ೆ ಆಯೋಜನೆಗೆ ಖಂಡನೆ

ಲೋಕದರ್ಶನ ವರದಿ

ಬ್ಯಾಡಗಿ24 : ಕ್ರೀಡಾಪಟುಗಳಿಗೆ ಪೂವರ್ಾಪರ ಮಾಹಿತಿ ನೀಡದೇ ಮತ್ತು ಯಾರಿಗೂ ತಿಳಿಯದಂತೆ ಪ್ರೌಢಶಾಲಾ ವಿಭಾಗದ ಜಿಲ್ಲಾ ಮಟ್ಟದ ಕರಾಟೆ ಸ್ಪಧರ್ೆಗಳನ್ನು ನಡೆಸಲಾಗಿದೆ.

  ಸಾರ್ವಜನಿಕ ಶಿಕ್ಷಣ ಇಲಾಖೆಯ ಜಿಲ್ಲಾ ಉಪನಿದರ್ೇಶಕರ ಕಛೇರಿಯಿಂದ ಜಿಲ್ಲೆಯ ಉದಯೋನ್ಮುಖ ಕ್ರೀಡಾಪಟುಗಳಿಗೆ ಅನ್ಯಾಯವಾಗಿದ್ದು ಕೂಡಲೇ ಜಿಲ್ಲಾಧಿಕಾರಿಗಳು ಮಧ್ಯ ಪ್ರವೇಶಿಸುವ ಮೂಲಕ ಮತ್ತೊಮ್ಮೆ ಪಂದ್ಯಾವಳಿಯನ್ನು ಸಂಘಟಿಸುವಂತೆ ಕರಾಟೆ ತರಬೇತುದಾರ ನಾರಾಯಣ ಪೂಜಾರ ಆಗ್ರಹಿಸಿದ್ದಾರೆ. 

 ಪಟ್ಟಣದ ಪ್ರವಾಸಿಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕ್ರೀಡಾ ಪ್ರತಿಭೆಗಳನ್ನು ಗುತರ್ಿಸಿ ಅವರಿಗೆ ಸೂಕ್ತವಾದ ತರಬೇತಿಯನ್ನು ನೀಡಿ ಕ್ಲಷ್ಟರ ಮಟ್ಟ, ತಾಲೂಕುಮಟ್ಟ, ಜಿಲ್ಲಾಮಟ್ಟ, ವಿಭಾಗಮಟ್ಟ, ರಾಜ್ಯಮಟ್ಟ ಹಾಗೂ ರಾಷ್ಟ್ರಮಟ್ಟದ ಸ್ಫಧರ್ೆಗಳಲ್ಲಿ ಪಾಲ್ಗೊಳ್ಳುವಂತೆ ಶಿಕ್ಷಣ ಇಲಾಖೆ ಹಣವನ್ನು ವ್ಯಯಿಸಿ ಎಲ್ಲ ರೀತಿಯ ಸೌಲಭ್ಯಗಳನ್ನು ನೀಡುತ್ತದೆ, ಆದರೆ ಹಾವೇರಿ ಜಿಲ್ಲೆಯಲ್ಲಿ ಕರಾಟೆ ವಿಭಾಗದ ಸ್ಪಧರ್ೆಗಳಲ್ಲಿ ಇಂತಹ ಯಾವುದೇ ನಿಯಮವನ್ನು ಪಾಲಿಸದೇ ಯಾರಿಗೂ ತಿಳಿಯದಂತೆ ಏಕಾಏಕಿ ಜಿಲ್ಲಾ ಮಟ್ಟದ ಸ್ಪಧರ್ೆಗಳನ್ನು ತಮಗೆ ತಿಳಿದ ಶಾಲೆಗಳಿಗಷ್ಟೇ ಮಾಹಿತಿ ರವಾನಿಸಿರುವುದು ಸರಿಯಾದ ಕ್ರಮವಲ್ಲ ಎಂದು ಆರೋಪಿಸಿದರು.

  ಒಲಂಪಿಕ್ನಲ್ಲಿ ಭಾಗವಹಿಸುವ ಸಾಮಥ್ರ್ಯವುಳ್ಳವರಿದ್ದಾರೆ: ಕರಾಟೆ ವಿಭಾಗದ ಸಧರ್ೆಗಳಲ್ಲಿ ಜಿಲ್ಲೆಯು ಅತ್ಯುತ್ತಮ ಹೆಸರನ್ನು ಪಡೆದಿದ್ದು, ಮಲೇಷಿಯ ಸಿಂಗಪೂರ್ಗಳಿಗೆ ತೆರಳಿ ಅಂತರಾಷ್ಟ್ರೀಯ ಸ್ಪಧರ್ೆಗಳಲ್ಲಿ ಜಯಶಾಲಿಯಾಗಿದ್ದಾರೆ. 

   ಆದರೆ ಅಂತಹವರಿಂದ ತರಬೇತಿ ಪಡೆದಂತಹ ವಿದ್ಯಾಥರ್ಿಗಳು ಜಿಲ್ಲೆಯ ಹೆಸರನ್ನು ರಾಷ್ಟ್ರಮಟ್ಟದವರೆಗೂ ಒಯ್ಯುವಂತಹ ಕ್ರೀಡಾಪಟುಗಳಿಗೆ ತಿಳಿಸದೇ ಸ್ಪಧರ್ೆಗಳನ್ನು ಏಕಾಏಕಿ ನಡೆಸಿರುವುದು ಎಷ್ಟರಮಟ್ಟಿಗೆ ಸರಿ..? ಎಂದು ಪ್ರಶ್ನೀಸಿದ ಅವರು, ರಾಜ್ಯ ಮತ್ತು ರಾಷ್ಟ್ರ ಕ್ರೀಡಾಪಟುಗಳಿಗೆ ಅನುಕೂಲಕ್ಕೋಸ್ಕರ ಇರುವಂತಹ ಸ್ಪಧರ್ೆಗಳು ಇಲಾಖೆಯ ಅಧಿಕಾರಿಗಳ ನಿರ್ಲಕ್ಷ್ಯದಿಂದ ವಂಚಿತರಾಗುತ್ತಿದ್ದು ಕೂಡಲೇ ಮತ್ತೊಮ್ಮೆ ಕ್ರೀಡಾಕೂಟಗಳನ್ನು ನಡೆಸುವಂತೆ ಆಗ್ರಹಿಸಿದರು. ಚಂದ್ರು ಛತ್ರದ, ಪಾಂಡು ಸುತಾರ, ಸಿದ್ಧಲಿಂಗಪ್ಪ ಕುರವತ್ತಿ ಹಾಗೂ ಇನ್ನಿತರರು ಉಪಸ್ಥಿತರಿದ್ದರು.