ಬೆಳಗಾವಿ: ಆಡು ಸಾಕಾಣಿಕೆ ತರಬೇತಿಯ ಸಮಾರೋಪ ಸಮಾರಂಭ

ಲೋಕದರ್ಶನ ವರದಿ

ಬೆಳಗಾವಿ 01:   ಸಿಂಡ್ ಗ್ರಾಮೀಣ ಸ್ವ-ಉದ್ಯೋಗ ತರಬೇತಿ ಸಂಸ್ಥೆ ಬೆಳಗಾವಿ ಇವರ ಸಂಯುಕ್ತಾಶ್ರಯದಲಿ ್ಲಬೆಳಗಾವಿ ಜಿಲ್ಲೆಯ ಯುವಕ-ಯುವತಿಯರಿಗೆ ಹಮ್ಮಿಕೊಂಡಂತಹ ಆಡು ಸಾಕಾಣಿಕೆ ತರಬೇತಿಯ ಸಮಾರೋಪ ಸಮಾರಂಭ ಇತ್ತಿಚಿಗೆ ಜರುಗಿತು. ಕಾರ್ಯಕ್ರಮದ ಮುಖ್ಯ ಅತಿಥಿ ಸ್ಥಾನವನ್ನು ಅಲಂಕರಿಸಿದಂತಹ ಡಾ ಅಶೋಕ ದುರಗಣ್ಣವರ್ ಮುಖ್ಯ ಪಶು ವೈದ್ಯಾಧಿಕಾರಿಗಳು ಪಶು ವೈದ್ಯಕೀಯ ತರಬೇತಿ ಕೇಂದ್ರ ಬೆಳಗಾವಿ ಇವರು ಮಾತನಾಡಿ ಎಲ್ಲಾ ಉದ್ಯೋಗಗಳಲ್ಲಿ ಆಡು ಸಾಕಾಣಿಕೆ ಶ್ರೇಷ್ಟ ಉದ್ಯೋಗ, ಇದಕ್ಕೆ ಸಂಬಂದಿಸಿದಂತಹ ಎಲ್ಲಾ ಮಾಹಿತಿಯನ್ನು ಕಲೆ ಹಾಕಿ ಅದನ್ನು ನಿಮ್ಮ ಜೀವನದಲ್ಲಿ ಅಳವಡಿಸಿಕೊಂಡು ಪ್ರಾಮಾಣಿಕತನದಿಂದ ಕೆಲಸ ಮಾಡಿದಾಗ ಮಾತ್ರ ಒಬ್ಬ ಶ್ರೇಷ್ಟ, ಯಶಸ್ವಿ ಉದ್ಯೋಗಿಯಾಗಿ ಬೆಳೆಯಲು ಸಾದ್ಯ. ಎಲ್ಲದಕ್ಕಿಂತ ಮೊದಲು ನಾವು ನಮ್ಮ ಉದ್ಯೋಗಕ್ಕರ ಗೌರವವನ್ನು ಸಲ್ಲಿಸಬೇಕು, ಇದರಲ್ಲಿ ಅತೀ ಕಡಿಮೆ ಬಂಡವಾಳವನ್ನು ಹಾಕಿ ಆಡುಗಳ ಪಾಲನೆ ಪೋಷಣೆ ಮಾಡುತ್ತಾ ಯಶಸ್ವಿ ಉದ್ಯೂಗಿಯಾಗಿ ಬೆಳೆಯಬಹುದು ಆದರೆ ಇದಕ್ಕೆ ಸ್ವ-ಪ್ರಯತ್ನ ಹಾಗು ಸ್ವ-ಪ್ರೇರಣೆ ತುಂಬಾ ಮುಖ್ಯವಾಗಿರುತ್ತದೆ, ಆಡನ್ನು ಬಡವರ ಬಂದು ಎಂದು ಕೂಡಾ ಹೆಳಲಾಗುತ್ತೆ ಕಾರಣ ಇಷ್ಟೇ ಇದನ್ನು ನಾವು ಮನೆಯಲ್ಲಿಯೆ ಸಾಕಾಣಿಕೆ ಮಾಡಬಹುದು. ಮತ್ತು ಇದಕ್ಕೆ ಮನೆಯಲ್ಲಿನ ಪದಾರ್ಥಗಳು ಅಂದರೆ ( ಜೋಳ, ಹಿಂಡಿ, ಬಾಳೆಸಿಪ್ಪೇ, ಇತರೆ) ಹಾಕಿ ಮನೆಯಲ್ಲಿಯೆ ಸಾಕಾಣಿಕೆಯನ್ನು ಮಾಡಬಹುದು. ಮತ್ತು ಸಾಕಾಣಿಕೆದಾರರು ಯಾವುದೇ ದುಷ್ಟ-ಚಟಗಳಿಗೆ ಒಳಗಾಗದೆ, ಇದನ್ನು ಅತೀ ನಿಷ್ಠೇಯಿಂದ ಮತ್ತು ಆರೋಗ್ಯ ಪೂರ್ಣವಾಗಿ ಕೆಲಸ ಮಾಡಿದಾಗ ಮಾತ್ರ ಅದರಲ್ಲಿ ಯಶಸ್ಸುಗಳಿಸಲು ಸಾಧ್ಯ. ಮತ್ತು ಸಾಧ್ಯವಾದಷ್ಟು ನಿಮ್ಮ ಹತ್ತಿರವಿರುವ ಪಶು ಆಸ್ಪತ್ರೇಗಳಿಗೆ ನಿರಂರತ ಬೇಟಿ ನೀಡಿತ್ತಾ ಪಶು ವ್ಯದ್ಯಾದಿಕಾರಿಗಳ ಸಲಹೆ ಮೇರೆಗೆ ಆಡುಗಳ ಆರೈಕೆ ಮಾಡಬೇಕು ಎಂದು ತಿಳಿಹೇಳಿ ಶಿಬಿರಾಥರ್ಿಗಳನ್ನು ಹಾರೈಸಿದರು.

ಸಂಸ್ಥೆಯ ನಿದರ್ೇಶಕರಾದ್ದಂತಹ ಲಕ್ಷ್ಮೀಕಾಂತ ಪಾಟೀಲ ರವರು ಮಾತನಾಡಿ ನಿಮ್ಮ ಕಲಿಕೆ ಯಾವತ್ತು ನಿತಂತರವಾಗಿರಲಿ, ನಿಮ್ಮ ಉದ್ಯೋಗಕ್ಕೆ ಸಂಬಂದಿಸಿದಂತಹ  ಹೊಸ-ಹೊಸ ಮಾಹಿತಿಯನ್ನು ಕಲೆ ಹಾಕಿ ಅದರಲ್ಲಿ ಅಭಿವೃದ್ದಿಯಾಗಿ  ಮಾದರಿ ಜೀವನವನ್ನು ನಡೆಸಿರಿ ಮತ್ತು ಇದನ್ನು ಒಂದು ವೃತ್ತಿಯನ್ನಾಗಿ ಪರಿಗಣಿಸಿ, ಆಡುಗಳನ್ನು ನಮ್ಮ ಮನೆಯ ಮಕ್ಕಳಂತೆ ಪಾಲನೆ-ಪೋಷಣೆ ಮಾಡಿದಾಗ ಮಾತ್ರ ಈ ವೃತ್ತಿಯಲ್ಲಿ ಅಭಿವೃದ್ದಿಯಾಗಲು ಸಾಧ್ಯ ಎಂದು ತಿಳಿಹೇಳಿದರು.

ಕೊನೆಯದಾಗಿ ಶಿಬಿರದಲ್ಲಿ ಪಾಲ್ಗೊಂಡ ಶಿಭಿರಾಥರ್ಿಗಳು ತಮ್ಮ ತರಬೇತಿ ದಿನಗಳ ಅನುಭವ ಮತ್ತು ಅನಿಸಿಕೆಗಳನ್ನು ಅತೀ ಉತ್ಸಾಹದಿಂದ ಹಂಚಿಕೊಂಡರು ನಂತರ ಮುಖ್ಯ ಅಧ್ಯಕ್ಷರಿಂದ ಶಿಬಿರಾಥರ್ಿಗಳಿಗೆ ಪ್ರಮಾಣ ಪತ್ರವನ್ನು ವಿತರಿಸಲಾಯಿತು. ಸಂಸ್ಥೆಯ ಸಿಬ್ಬಂದಿಯ ರಾಜೇಶ್ವರಿ ದೇವಲಾಪೂರ ಸ್ವಾಗತಿಸಿದರು. ಸಂಸ್ಥೆಯ ಉಪನ್ಯಾಸಕ ಚಂದ್ರಕಾಂತ ಹಿರೇಮಠ ನಿರೂಪಿಸಿ, ವಂದಿಸಿದರು. ಸಂಸ್ಥೆಯ ಸಿಬ್ಬಂದಿಯವರಾದ ಬಸವರಾಜ ಕುಬಸದ ಮತ್ತು ಅಬ್ಬುಲ ರಜಾಕ್ ಉಪಸ್ಥಿತರಿದ್ದರು.