ವಿಶ್ವಾರಾಧ್ಯರ ರಥೋತ್ಸವ ಅದ್ದೂರಿಯಾಗಿ ಜರುಗಿತು
ಶಿಗ್ಗಾವಿ 01: ತಾಲೂಕಿನ ಹಿರೇಬೆಂಡಿಗೇರಿ ಗ್ರಾಮದಲ್ಲಿ ವಿಶ್ವಾರಾಧ್ಯರ ರಥೋತ್ಸವ ಅದ್ದೂರಿಯಾಗಿ ಜರುಗಿತು ಹಿರೇಮಠದಿಂದ ಪ್ರಾರಂಭವಾದ ರಥೋತ್ಸವ ಗ್ರಾಮದ ಪ್ರಮುಖ ಬೀದಿಗಳಲ್ಲಿ ಡೊಳ್ಳು ಭಜನೆ ಸನಾದಿ ಹಲವಾರು ವಾದ್ಯಗಳೊಂದಿಗೆ ಮುತ್ತೈದೆಯರು ಆರತಿಯೊಂದಿಗೆ ಪಾಲ್ಗೊಂಡು ನೂರಾರು ಭಕ್ತರು ಹಣ್ಣು ಉತ್ತತ್ತಿ ತೇರಿಗೆ ಮತ್ತು ತೇರಿನ ಕಳಸಕ್ಕೆ ಎಸೆಯುವ ಮೂಲಕ ತಮ್ಮ ಭಕ್ತಿ ಭಾವವನ್ನು ಸಮರ್ಿಸಿದರು.ಈ ಸಂದರ್ಭದಲ್ಲಿ ವಿಶ್ವರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳು ಹಿರೇಮಣಕಟ್ಟಿ. ವೈಜನಾಥ ಶಿವಲಿಂಗೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ಗಂಜಿಗಟ್ಟಿ. ವೇದಮೂರ್ತಿ ರೇವಣಸಿದ್ದಯ್ಯ ಸ್ವಾಮಿಜಿ ಅಸೂಟಿ, ವೇದಮೂರ್ತಿ ಚೆನ್ನಯ್ಯ ಸ್ವಾಮಿಗಳು ಹಿರೇಮಠ, ಸೇರಿದಂತೆ ಹರ ಗುರು ಚರಮೂರ್ತಿಗಳು ಶಿವಾಚಾರ್ಯರು ಗ್ರಾಮದ ಸಕಲ ಸದ್ಭಕ್ತರು ಹಾಗೂ ಸುತ್ತಮುತ್ತಲಿನ ಗ್ರಾಮಗಳ ಭಕ್ತರು ಪಾಲ್ಗೊಂಡಿದ್ದರು