ವಿಜೃಂಭಣೆಯಿಂದ ಜರುಗಿದ ತೇರು ಹನುಮಪ್ಪನ ರಥೋತ್ಸವ

The chariot festival of Lord Hanuman was celebrated with great pomp and show.

ವಿಜೃಂಭಣೆಯಿಂದ ಜರುಗಿದ ತೇರು ಹನುಮಪ್ಪನ ರಥೋತ್ಸವ  

ಹೂವಿನ ಹಡಗಲಿ: 08 ಪಟ್ಟಣದ ತೇರು ಹನುಮಪ್ಪ  ಸ್ವಾಮಿಯ 50ನೇ ರಥೋತ್ಸವ ಶನಿವಾರ ಸಂಜೆ ವಿಜೃಂಭಣೆಯಿಂದ ಜರುಗಿತು.ದೇವಸ್ಥಾನದಿಂದ ಪಲ್ಲಕ್ಕಿಯಲ್ಲಿ ಸಾಗಿ ಬಂದ ಸ್ವಾಮಿಯ ಉತ್ಸವ ಮೂರ್ತಿಯನ್ನು ರಥದಲ್ಲಿ ಪ್ರತಿಷ್ಠಾಪಿಸಲಾಯಿತು. ಬಳಿಕ ’ವೆಂಕಟರಮಣ ಗೋವಿಂದ’ ಎಂಬ ಭಕ್ತರ ಜಯಘೋಷ, ಹರ್ಷೋದ್ಗಾರದ ನಡುವೆ ರಥೋತ್ಸವ ಪ್ರಾರಂಭವಾಯಿತು. ರಥ ಮುಂದೆ ಸಾಗುತ್ತಿದ್ದಂತೆ ಭಕ್ತರು ಬಾಳೆಹಣ್ಣು, ಎಸೆದು ಭಕ್ತಿ ಸಮರ​‍್ಿಸಿದರು. ಇದಕ್ಕೂ ಮುನ್ನ ನಡೆದ ನಿಶಾನೆ ಹರಾಜಿನಲ್ಲಿ ಮಲ್ಲಿಕಾರ್ಜುನ  ?1,35,101ಕ್ಕೆ ಪಟಾಕ್ಷಿ ಪಡೆದರು.ಡಾ.ಹಿರಿಶಾಂತವೀರಸ್ವಾಮಿ.ಚನ್ನಬಸವ ಸ್ವಾಮಿ.ಗಾಡಿತಾತ್‌.ಶಾಸಕ ಕೃಷನಾಯಕ.ದೇಗುಲ ಕಮಿಟಿ ಅದ್ಯಕ್ಷ ಅಟವಾಳಗಿ ಕೊಟ್ರೇಶ. ಎಸ್‌.ಸುಧಾಕರ.ಹಕ್ಕಂಡಿ ಶಿವನಾಗಪ್ಪ.ತಹಶೀಲ್ದಾರ ಸಂತೋಷ ಕುಮಾರ. ಧರ್ಮದರ್ಶಿ ಡಾ.ರಾಖೇಶಯ್ಯ ರಾಮಸ್ವಾಮಿ.