ಸಂಕ್ರಮಣದ ನಿಮಿತ್ಯ ಸಂಭ್ರಮದ ತೆಪ್ಪೋತ್ಸವ

ಲೋಕದರ್ಶನ ವರದಿ

ಮುನವಳ್ಳಿ 16: ಜ. 15 ರಂದು ಸಾಯಂಕಾಲ 5.30 ಗಂಟೆಗೆ ಇಲ್ಲಿನ ಶಿಂದೋಗಿ-ಮುನವಳ್ಳಿಯ ಕುಮಾರೇಶ್ವರ ಆಲೂರಮಠದ ವತಿಯಿಂದ ಮಲಪ್ರಭಾ ನದಿಯಲ್ಲಿ ಮಕರ ಸಂಕ್ರಮಣದ ನಿಮಿತ್ಯ ತೆಪ್ಪೋತ್ಸವ ಸಂಭ್ರಮ ಹಾಗೂ ವಿಜೃಂಭಣೆಯಿಂದ ಜರುಗಿತು.

ತೆಪ್ಪೋತ್ಸವದ ತೇರಿನಲ್ಲಿ ಹುಬ್ಬಳ್ಳಿ ಮೂರುಸಾವಿರಮಠದ ಜಗದ್ಗುರು ಗುರುಸಿದ್ಧರಾಜಯೋಗೀಂದ್ರ ಮಹಾಸ್ವಾಮಿಗಳು ಆಸೀನರಾಗಿ ಭಕ್ತರಿಗೆ ದರ್ಶನಾಶೀವರ್ಾದ ನೀಡಿದರು. ಈ ಸಂದರ್ಭದಲ್ಲಿ ಸೋಮಶೇಖರಮಠದ ಮುರುಘೇಂದ್ರ ಸ್ವಾಮೀಜಿ, ಸವದತ್ತಿ ಸ್ವಾದಿಮಠದ ಶಿವಬಸವ ಸ್ವಾಮೀಜಿ, ಕಲ್ಮಠದ ಶಿವಲಿಂಗ ಸ್ವಾಮೀಜಿ, ಶಿಂದೋಗಿಯ ಮಡಿವಾಳಯ್ಯಸ್ವಾಮಿ ಹಿರೇಮಠ, ಈರಯ್ಯಸ್ವಾಮಿ ಹಿರೇಮಠ ಹಾಗೂ ಶಿಂದೋಗಿ-ಮುನವಳ್ಳಿ ಸಮಸ್ತ ಸದ್ಭಕ್ತರು ಉಪಸ್ಥಿತರಿದ್ದರು. ಉತ್ತತ್ತಿ ಹಾಗೂ ಬಾಳೆಹಣ್ಣುಗಳನ್ನು ತೆಪ್ಪದತ್ತ ಭಕ್ತರು ಭಕ್ತಿಭಾವದಿಂದ ಹಾರಿಸುತ್ತಿದ್ದರು. ಕಾರ್ಯಕ್ರಮದ ಮೊದಲು ಪಟ್ಟಣದ ಪ್ರಮುಖ ಬೀದಿಗಳಲ್ಲಿ ವಾದ್ಯ ವೈಭವಗಳೊಂದಿಗೆ ಪಲ್ಲಕ್ಕಿ ಉತ್ಸವ ಜರುಗಿತು.