ವಿಜೃಂಭಣೆಯ ಮಹಮ್ಮದ ಪೈಗಂಬರ ಜಯಂತಿ ಆಚರಣೆ

ಲೋಕದರ್ಶನ ವರದಿ

ಮೂಡಲಗಿ 21: ಪ್ರವಾದಿ ಮಹಮ್ಮದ ಪೈಗಂಬರರು ಮಾನವ ಕುಲದ ಏಳ್ಗೆಗಾಗಿ ಶ್ರಮಿಸಿದ ಮಹಾನ್ ದೈವಿ ಪುರುಷರು ಅವರ ತತ್ವ ಆದರ್ಶಗಳನ್ನು ಅನುಸಿರಿಸಿ ಸನ್ಮಾರ್ಗದಲ್ಲಿ ನಡೆಯುವುದೇ ನಿಜವಾದ ಮನುಷ್ಯ ಧರ್ಮ ಎಂದು ಧರ್ಮ ಗುರುಗಳಾದ ಮೌಲಾನಾ ಮಹ್ಮದಶಫೀಕ ಆಜ್ಮಿ ಹೇಳಿದರು. 

ಅವರು ಸ್ಥಳೀಯ ಜಾಮೀಯಾ ಮಸೀದಿ ಮುಂದೆ ಮೆರವಣಿಗೆಗೆ ಚಾಲನೆ ನೀಡಿ  ಮಾತನಾಡಿ, ಪ್ರವಾದಿಯವರು ತಮ್ಮ ಜೀವನವನ್ನು ಸಮಾಜಕ್ಕಾಗಿ ಮೀಸಲಿಟ್ಟಿದ್ದರು. ನೀವು ಕಷ್ಟದಲ್ಲಿರುವವರಿಗೆ ಸಹಾಯ ಮಾಡಿ ಜಾತಿ ಪಂಥ ಪಂಗಡ ಯಾವುದು ನಿಜವಲ್ಲ ಮನುಷ್ಯ ಜಾತಿ ಮಾನವ ಕುಲ ಒಂದೇ ನಿಜವಾದದ್ದು ಪರಸ್ಪರರು ಕಚ್ಚಾಡದೇ ಒಂದಾಗಿ ಬಾಳಿರಿ ಎಂದು ಪ್ರವಾದಿಯವರು ಹಾಕಿಕೊಟ್ಟ ಮಾರ್ಗದರ್ಶನವಾಗಿದೆ ಎಂದು ಹೇಳಿದರು. 

   ಜಾಮೀಯಾ ಮಸೀದಿಯಿಂದ ವಿಜೃಂಭಣೆಯ ಭವ್ಯ ಮೇರವಣಿಗೆ ಹೋರಟು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮಕ್ಕಾ ಮದೀನಾ ರೂಪಕಗಳೊಂದಿಗೆ ಸಂಚರಿಸಿತು. ನಂತರ ಉದರ್ು ಶಾಲಾ ಮತ್ತು ಅರೇಬಿಕ ಶಾಲಾ ಮಕ್ಕಳಿಂದ ನಾಥಎ ಶರೀಫ, ಕೌವ್ಹಾಲಿ ಹಾಗೂ ಪ್ರವಚನ ನಡೆಯಿತು. ಶಾಲಾ ಮಕ್ಕಳಿಗೆ ಸಿಹಿ ಮತ್ತು ನೋಟಬುಕ್ಗಳನ್ನು ವಿತರಿಸಿದರು.

ಮೆರವಣಿಗೆಯಲ್ಲಿ  ಬಿಟಿಟಿ ಕಮೀಟಿ ಅಧ್ಯಕ್ಷ ಶರೀಫ ಪಟೇಲ, ಉಪಾಧ್ಯಕ್ಷ ಮಲೀಕ ಕಳ್ಳಿಮನಿ, ಸಲೀಂ ಇನಾಮದಾರ, ಯುನಸ್ ಹವಾಲ್ದಾರ, ಪುರಸಭೆ ಸದಸ್ಯೆ ಗಫಾರ ಡಾಂಗೆ, ಹುಸೇನಸಾಬ ಥರಥರಿ,  ಮೌಲಾನಾ ಕೌಶರ ರಜಾ, ಮೌಲನಾ ಅಮೀರ ಥರಥರಿ, ಹಸನಸಾಬ ಮುಗಟಖಾನ,  ಎನ್.ಎಮ್.ಥರಥರಿ, ರಾಜು ಅತ್ತಾರ, ಹುಸೇನ ಮುಲ್ಲಾ, ಸಾಹೇಬಫೀರ ಪೀರಜಾದೆ ಹಾಗೂ  ಸರ್ವ ಸುನ್ನಿ ಮುಸ್ಲಿಂ ಬಾಂಧವರು ಪಾಲ್ಗೊಂಡಿದ್ದರು.