ಶಿರಸಂಗಿ 24: ಸ್ಥಳೀಯ ಕಾಳಿಕಾ ದೇವಸ್ಥಾನದ ಆವರಣದಲ್ಲಿ ಗೌರಿ ಹುಣ್ಣಿಮೆ ನಿಮಿತ್ತ ಶುಕ್ರವಾರ ಕಾಳಿಕಾ ದೇವಿಯ 40 ನೇ ರಥೋತ್ಸವ ಅದ್ದೂರಿಯಾಗಿ ಜರುಗಿತು.
ಮುಧೋಳ ಬ್ರಹ್ಮಗಡ್ಡಿಮಠದ ಪರಮೇಶ್ವರ ಸಾಧುಮಹಾರಾಜರ ನೇತೃತ್ವದಲ್ಲಿ ಕಿಲ್ಲಾ ತೊರಗಲ್ಲ ಗಚ್ಚಿನಮಠದ ಚನ್ನಮಲ್ಲ ಶಿವಾಚಾರ್ಯ ಸ್ವಾಮೀಜಿ, ಮುಳ್ಳೂರು ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ಬಸಿಡೋಣಿಯ ಶಿವಾನಂದ ಮಠದ ಗಂಗಾಧರ ಸ್ವಾಮೀಜಿ, ಶಿರಸಂಗಿ ಮಹಾಲಿಂಗೇಶ್ವರ ಮಠದ ಬಸವ ಮಹಾಂತ ಸ್ವಾಮೀಜಿ, ಸಾನಿಧ್ಯ ವಹಿಸಿದ್ದರು.
ಸವದತ್ತಿ ತಹಸೀಲ್ದಾರ ಅನ್ನಪೂರ್ಣ ಮುದಕಮ್ಮನವರ, ಪಿಎಸ್ಐ ಪರಶುರಾಮ ಪೂಜಾರ, ತಾಪಂ ಸದಸ್ಯ ಮಹಾರಾಜ ಕಣವಿ, ನ್ಯಾಯವಾದಿ ಎಮ್.ಎಮ್. ಯಲಿಗಾರ, ಬಿ.ಎಸ್. ಪಾಟೀಲ, ಮಲ್ಲಿಕಾಜರ್ುನ ಪಂಚೇನವರ, ಶಿವಾಜಿ ಶಿಂಧೆ, ವಿ.ಜಿ. ಮೇಟಿ, ಪಾಂಡುರಂಗ ಚವ್ಹಾಣ, ಮಹಾಂತೇಶ ಪಂಚೇನವರ, ಮಲ್ಲಿಕಜರ್ುನ ಗೊರವನಕೊಳ್ಳ, ಈರಪ್ಪ ಪಂಚೇನವರ, ಎಮ್.ಬಿ. ಕರಡಿಗುಡ್ಡ, ವಿಜಯಲಕ್ಷ್ಮೀ ಚಿಕ್ಕುಂಬಿ, ಗದಿಗೆಪ್ಪಾ ಶಿರಸಂಗಿ, ವೀರಸಂಗಪ್ಪ ಯಕ್ಕುಂಡಿ ಸೇರಿದಂತೆ ಮತ್ತಿತರು ಉಪಸ್ಥಿತರಿದ್ದರು. ಸಕಲ ಭಕ್ತಾಧಿಗಳು ತಾಯಿಗೆ ಹಣ್ಣು, ಕಾಯಿ ಅಪರ್ಿಸಿ ದರ್ಶನ ಪಡೆದುಕೊಂಡರು.