ಭಾರತೀಯ ಸೇನಾ ಸೇವೆಗೆ ಆಯ್ಕೆಯಾದ ಕೆಡೆಟ್ಗಳಿಗೆ ಸನ್ಮಾನ

ಶೇಡಬಾಳ  18: ಕಾಗವಾಡ ಶಿವಾನಂದ ಮಹಾವಿದ್ಯಾಲಯದ ಎನ್.ಸಿ.ಸಿ.ಘಟಕದಲ್ಲಿ ಪ್ರತಿ ವರ್ಷ ನೂರಕ್ಕೂ ಹೆಚ್ಚು ವಿದ್ಯಾಥರ್ಿಗಳು ಭಾಗವಹಿಸುತ್ತಾರೆ. ಈ ವರ್ಷ 6 ಕೆಡೆಟ್ಗಳು ಭಾರತೀಯ ಸೇನಾ ಸೇವೆಗೆ ಆಯ್ಕೆಯಾಗಿ ದೇಶ ಸೇವೆಗೆ ಸಿದ್ಧರಾಗಿ ತರಬೇತಿಯನ್ನು ಪಡೆಯುತ್ತಿರುವದು ಹೆಮ್ಮೆಯ ಸಂಗತಿಯಾಗಿದೆ. ಇವರು ತಮ್ಮ ಸೇವಾ ಕರ್ತವ್ಯದಲ್ಲಿ ಯಶಸ್ವಿಗಳಾಗಲೆಂದು ಹಾರೈಸುತ್ತಾ ಅವರ ಸಾಧನೆಗೆ ಮೆಚ್ಚಿ ಇತ್ತೀಚೆಗೆ ಜರುಗಿದ ವಾಷರ್ಿಕೋತ್ಸವದಲ್ಲಿ ಮುಖ್ಯ ಅತಿಥಿಗಳಾಗಿದ್ದ ರಾಣಿ ಚನ್ನಮ್ಮಾ ವಿಶ್ವವಿದ್ಯಾಲಯದ ವಿಭಾಗದ ಮುಖ್ಯಸ್ಥ ಎಂ.ಬಿ.ಎ ಪ್ರೊ.ಸಿ.ಎಂ.ತ್ಯಾಗರಾಜ, ಯತೀಶ್ವರಾನಂದ ಸ್ವಾಮೀಜಿ, ಪ್ರಾಚಾರ್ಯ ಡಾ..ಜಿ.ಜಿ.ಕರಲಟ್ಟಿ, ಎನ್.ಸಿ.ಸಿ ಅಧಿಕಾರಿ ಮೇಜರ್ ವ್ಹಿ.ಎಸ್.ತುಗಶೆಟ್ಟಿ ಆಡಳಿತ ಮಂಡಳಿ ಸದಸ್ಯ ಎ.ಎ.ಪಾಟೀಲ ಹಾಗೂ ಗಣ್ಯರು ಸತ್ಕರಿಸಿ ಸನ್ಮಾನಿಸಿದರು. 

ಇವರಲ್ಲಿ ಶ್ರೇಯಸ್ ಪಾಟೀಲ, ಸಾಗರ ಪಾಟೀಲ, ಕಾಶಿಲಿಂಗ ಚಂದೂರೆ, ಭೂಪಾಲ ಕೊರವೆ, ಸುನೀಲ ಕಾಂಬಳೆ, ಮತ್ತು ಸಾಗರ ಗುರವ ಸೇನೆಗೆ ಸೇರಿದ ಕೆಡೆಟ್ಗಳಾಗಿದ್ದಾರೆ. 

ಅದರಂತೆ ದೆಹಲಿಯ ತಳಸೇನಾ ಶಿಬಿರದಲ್ಲಿ ಫೈರಿಂಗ್ದಲ್ಲಿ ರಾಷ್ಟ್ರಮಟ್ಟದ ಸಾಧನೆ ಮಾಡಿದ ಕೆಡೆಟ್ ಜೀನಾಶ್ರೀ ಗಣೆ, ಅಂತಾರಾಷ್ಟ್ರೀಯ ಕರಾಟೆ, ಕ್ರೀಡಾ ಪಟು ಕೆಡೆಟ್ ಮಯೂರಿ ಉಮರಾಣೆ, 'ಸಿ' ಸಟರ್ಿಫಿಕೇಟ್ ಪರೀಕ್ಷೆ ತೇರ್ಗಡೆಯಾದ ಕೆಡೆಟ್ ಮಹೇಶ ಜಾಧವ, ವಿಶ್ವವಿದ್ಯಾಲಯ ಮಟ್ಟದ ಕುಸ್ತಿ ಕ್ರೀಡಾಪಟು ಕೆಡೆಟ್ ಸುಹಾಸಿನಿ ಮಗದುಮ್ ಇವರನ್ನೂ ಸಹ ಸತ್ಕರಿಸಿ ಶುಭ ಹಾರೈಸಿದರು. 

ಮಹಾವಿದ್ಯಾಲಯದ ಎಲ್ಲ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದು ಶುಭ ಹಾರೈಸಿದರು.