ಆಥಣಿ 30: ನಿಮರ್ಾಣ ಹಂತದಲ್ಲಿದ್ದ ಬಸ್ ನಿಲ್ದಾಣದ ಕೌಂಪೌಂಡ ಗೋಡೆ ಬಿದ್ದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದ್ದ ಹಿನ್ನೆಲೆಯಲ್ಲಿ ಸ್ಥಳೀಯ ಶಾಸಕ ಮಹೇಶ ಕುಮಠಳ್ಳಿ ಭೇಟಿ ನೀಡಿ ಪರಿಶೀಲಿಸಿದರು. ಬಸ್ ನಿಲ್ದಾಣದ ಕಾಮಗಾರಿ ಪೂರ್ಣಗೊಂಡಿದ್ದು, ನಿಲ್ದಾಣದ ಆವರಣದಲ್ಲಿ ಬೆಡ್ ಹಾಕುವ ಸಂಬಂಧದಲ್ಲಿ ಕಾಂಕ್ರಿಟ್ ತುಂಬಿದ ವಾಹನ ಹಿಂದಿನಿಂದ ಡಿಕ್ಕಿ ಹೊಡೆದಿದ್ದರಿಂದ ಕೌಂಪೌಂಡ ಗೋಡೆ ಕುಸಿದು ಬಿದ್ದಿದೆ ಎಂದು ಬೆಡ್ಡ ಹಾಕುತ್ತಿದ್ದ ಕಾಮರ್ಿಕರು ಶಾಸಕ ಮಹೇಶ ಕುಮಠಳ್ಳಿ ಇವರಿಗೆ ಮಾಹಿತಿ ನೀಡಿದರು.
ಕುಮಠಳ್ಳಿ ಅವರು ಮಾತನಾಡಿ ಈಗಾಗಲೇ ಬಸ್ ನಿಲ್ದಾಣದ ಕಟ್ಟಡ ಕಾಮಗಾರಿ ಪೂರ್ಣಗೊಂಡು ಕೆಲ ತಿಂಗಳು ಹಿಂದೆಯೇ ಮುಕ್ತಾಯಗೊಂಡಿದೆ. ಸದ್ಯದ ಸ್ಥಿತಿಯಲ್ಲಿ ಬಸ್ ನಿಲ್ದಾಣದ ಆವರಣದಲ್ಲಿ ಬೆಡ್ ಹಾಕುವ ಕಾರ್ಯ ನಡೆದಿದ್ದು, ಯಾರ ನಿರ್ಲಕ್ಷದಿಂದ ಕೌಂಪೌಂಡ ಗೋಡೆ ಬಿದ್ದಿದೆಯೋ ಅವರೇ ಆ ಗೋಡೆಯನ್ನು ನಿಮರ್ಿಸಿಕೊಡಬೇಕು ಎಂದು ಆದೇಶಿಸಿದ ಅವರು ಬಸ್ ನಿಲ್ದಾಣದ ಆವರಣದಲ್ಲಿ ನಡೆಯುತ್ತಿರುವ ಕಾಮಗಾರಿಯಲ್ಲಿ ಟೆಂಡರ್ ಪ್ರಕ್ರಿಯೆಯಲ್ಲಿ ಸರಕಾರ ವಿಧಿಸಿದ ಷರತ್ತು ಮತ್ತು ನಿಯಮಗಳನ್ನು ಪಾಲಿಸಬೇಕು ಎಂದು ಬೆಡ್ ಗುತ್ತಿಗೆದಾರರಿಗೆ ಆದೇಶಿಸಿದರು.
ಪ್ರೊಜೆಕ್ಟ ಮ್ಯಾನೇಜರ ನವೀನ ಶೆಟ್ಟಿ ಮಾತನಾಡಿ, ಬಸ್ ನಿಲ್ದಾಣದ ಕಟ್ಟಡ ಕಾಮಗಾರಿ ಮತ್ತು ಕೌಂಪೌಂಡ ಗೋಡೆ ಗುತ್ತಿಗೆದಾರ ಉದಯಕುಮಾರ ಶೆಟ್ಟಿ ನಿಮರ್ಿಸಿದ್ದಾರೆ. ಈ ಎರಡೂ ಕಾಮಗಾರಿಗಳು ಮುಕ್ತಾಯಗೊಂಡು ಮೂರು ತಿಂಗಳುಗಳೇ ಕಳೆದಿವೆ ಆದರೆ ಬಸ್ ನಿಲ್ದಾಣದ ಆವರಣದಲ್ಲಿ ಬೆಡ್ ನಿಮರ್ಿಸುತ್ತಿರುವವರ ನಿರ್ಲಕ್ಷದ ಪರಿಣಾಮ ಕಾಂಕ್ರೀಟ್ ವಾಹನ ಹಿಂದಿನಿಂದ ಗೋಡೆಗೆ ಡಿಕ್ಕಿ ಹೊಡೆದಿದ್ದರಿಂದ ಗೊಡೆ ಕುಸಿದಿದೆ ಎಂದು ಸ್ಪಷ್ಟಪಡಿಸಿದ ಅವರು ಬಿದ್ದಿದ್ದ ಕೌಂಪೌಂಡ ಗೋಡೆಯನ್ನು ಈಗಾಗಲೇ ಬೆಡ್ಡ ಹಾಕುತ್ತಿರುವ ಗುತ್ತಿಗೆದಾರರೇ ನಿಮರ್ಿಸುತ್ತಿದ್ದಾರೆ ಎಂದು ಮಾಹಿತಿ ನೀಡಿದರು.
ಕಾಂಗ್ರೆಸ್ ಮುಖಂಡ ರಮೇಶ ಸಿಂದಗಿ ಉಪಸ್ಥಿತರಿದ್ದರು.