ಹೆಣ್ಣುಮಕ್ಕಳಿಗೆ ದೊಡ್ಡ ಸಂಭ್ರಮವೆಂದರೆ ಜಾನಪದ

ಧಾರವಾಡ 9:  ಜಾನಪದ ಎಂದರೆ ಹೆಣ್ಣು, ಹೆಣ್ಣು ಎಂದರೆ ಜಾನಪದ. ಹೆಣ್ಣುಮಕ್ಕಳಿಂದಲೇ ಹುಟ್ಟಿದ್ದು ಜಾನಪದ, ಹೆಣ್ಣುಮಕ್ಕಳಿಗೆ ದೊಡ್ಡ ಸಂಭ್ರಮವೆಂದರೆ ಜಾನಪದ. ಒಂದಿಷ್ಟು ವಿದ್ವಾಂಸರ ಪ್ರಕಾರ ಜಾನಪದ ಕಾವ್ಯಗಳು ಎಂದರೆ ಮಹಿಳಾ ಕಾವ್ಯಗಳು ಇದ್ದ ಹಾಗೆ ಎಂದು ಕ.ವಿ.ವಿ. ಡಾ. ಆರ್. ಸಿ. ಹಿರೇಮಠ ಕನ್ನಡ ಅಧ್ಯಯನ ಪೀಠದ ಸಹಾಯಕ ಪ್ರಾಧ್ಯಾಪಕ ಡಾ. ಮುದೇನೂರ ನಿಂಗಪ್ಪ ಹೇಳಿದರು.   

ಕನರ್ಾಟಕ ವಿದ್ಯಾವರ್ಧಕ ಸಂಘವು ಆಯೋಜಿಸಿದ್ದ ` ಲಲಿತಾ ಮತ್ತು ಪ್ರೊ. ಸಿ. ವ್ಹಿ. ಕೆರಿಮನಿ ದತ್ತಿ' ಕಾರ್ಯಕ್ರಮದಲ್ಲಿ `ಜನಪದ ಕಾವ್ಯ ಮತ್ತು ಮಹಿಳಾ ಅಭಿವ್ಯಕ್ತಿ' ವಿಷಯ ಕುರಿತು ಉಪನ್ಯಾಸ ನೀಡುತ್ತಾ ಅವರು ಮಾತನಾಡುತ್ತಿದ್ದರು. 

ಸಾಮಾಜಿಕ, ಕೌಟುಂಬಿಕ, ಧಾರ್ಮಿ ಕ ವಿಷಯಗಳನ್ನು ಸಮಾಜಕ್ಕೆ ಆಡುಭಾಷೆಯಲ್ಲಿ ಹಾಡಿನ ರೂಪದಲ್ಲಿ ಕಟ್ಟಿಕೊಡುವುದೇ ಜಾನಪದ ಕಾವ್ಯ. ಜಾನಪದ ಕಾವ್ಯ ಇದು ನಮ್ಮ ಭಾಷೆಯನ್ನು ತೋರಿಸುತ್ತದೆ. ಜಾನಪದ ಎಂದರೆ ಕರಕಿ ಹುಲ್ಲು ಇದ್ದ ಹಾಗೆ. ಹೆಣ್ಣು ಅನಕ್ಷರಸ್ಥಳಿದ್ದರೂ ನಿಸರ್ಗದ ಭಾಷೆಯಾಗಿ ಜಾನಪದ ಅವಳಿಗೆ ಒಲಿಯುತ್ತದೆ. ನೀತಿಯ ಮಾತುಗಳನ್ನು ಹೆಣ್ಣು ಮಕ್ಕಳಿಗೆ ಕಲಿಸಿಕೊಡುವುದೇ ಜಾನಪದ ಸಾಹಿತ್ಯ, ಉದಾರಣೆಗೆ ತಾಯಿ ಸತ್ತ ಮೇಲೆ ತವರಿಗೆ ಎಂದೂ ಹೋಗಬಾರದವ್ವ ಹೀಗೆ ಜಾನಪದ  ಎವ್ವ ಹೆಣ್ಣ ಅಂದರೆ ಕನ್ನಡಿ ಇದ್ದಂಗ, ಕಲ್ಲಮ್ಯಾಗ ಕನ್ನಡಿ ಬಿದ್ದರೂ, ಕನ್ನಡಿಮ್ಯಾಗ ಕಲ್ಲು ಬಿದ್ದರೂ ಒಡಿದು ಕನ್ನಡಿನ. ಹಿಂಗ ನಮ್ಮ ಜಾನಪದ ಕಾವ್ಯ ನೀತಿ ಮಾತು ಕಲಿಸುತ್ತವೆ. ಜೀವನ ಹೆಂಗ ಮಾಡಬೇಂಬುದನ್ನು ಕಲಿಸಿಕೊಡುತ್ತವೆ. 

ಮುತ್ತು ಕೊಟ್ಟವಳು ಬಂದಾಗ ತುತ್ತು ಕೊಟ್ಟವಳನ್ನು ಮರಿಬ್ಯಾಡ ಎಂಬ ಜಾನಪದ ಕಾವ್ಯ ತಾಯಿಯ ಮಹತ್ವನ್ನು ಎತ್ತಿ ಹೇಳುತ್ತದೆ. ಹೀಗೆ ಜಾನಪದ ಕಾವ್ಯ ಹೆಣ್ಣನ್ನು ವಿವಿಧ ರೂಪದಲ್ಲಿ ನೋಡಿ ಅವಳಿಗೆ ಗೌರವ ನೀಡುವ ಮೂಲ ಸಾಹಿತ್ಯವೆ ಜಾನಪದ ಕಾವ್ಯವಾಗಿದೆ ಎಂದರು.

ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಕನ್ನಡ ಪ್ರಾಧ್ಯಾಪಕರು ಹಾಗೂ ಕರ್ನಾ ಟಕ ಸಾಹಿತ್ಯ ಅಕಾಡೆಮಿ ಸದಸ್ಯ ಡಾ. ಜಿನದತ್ತ ಹಡಗಲಿ ಮಾತನಾಡಿ, ಜಾನಪದ ಕಾವ್ಯ ಕಟ್ಟಿಕೊಡುವ ಸಾಮಥ್ರ್ಯ ಹೊಂದಿದವಳೆ ಮಹಿಳೆ. ಬಾಯಿಂದ ಬಾಯಿಗೆ ಬಂದಿದ್ದೆ ಜಾನಪದ. ಇದನ್ನು ಯಾರೂ ಕಲಿಸಿಕೊಡುವುದಿಲ್ಲ.  ಮಹಿಳೆಯರು ಬಾಲ್ಯದಿಂದಲೇ ಮನೆಯಲ್ಲಿ ಹಿರಿಯರಿಂದ ಆಡುಭಾಷೆಯ ಮೂಲಕ ಜಾನಪದವನ್ನು ಕರಗತಮಾಡಿಕೊಂಡಿರುತ್ತಾರೆ. ಗ್ರಾಮೀಣ ಪ್ರದೇಶದಲ್ಲಿ ಮುಂಜಾನೆದ್ದು ಮೊದಲು ನೆನೆಯುವುದೇ ಭೂಮಿ ತಾಯಿಯನ್ನು. ಪ್ರಾಚೀನ ಕಾಲದಿಂದಲೂ ಹೆಣ್ಣನು ಅಬಲೆ ಎಂದು  ತಿಳಿದುಕೊಂಡಿರುತ್ತಾರೆ. ಬಾಲ್ಯದಲ್ಲಿ ತಂದೆಯ ಆಶ್ರಯದಲ್ಲಿ, ತಾರುಣ್ಯದಲ್ಲಿ ಗಂಡನ ಆಶ್ರಯದಲ್ಲಿ, ಮುಪ್ಪಿನಲ್ಲಿ ಮಕ್ಕಳ ಆಶ್ರಯದಲ್ಲಿ ಹೀಗೆ ಅವಲಂಬಿತ ಜೀವನವನ್ನು ಬದುಕುತ್ತಾಳೆ. ಅದಕ್ಕೆ ಅಬಲೆ ಎಂದು ಕರೆದರು. ಅದೇ ಮತ್ತೊಂದು ಕಡೆ ಸ್ತ್ರೀಯನ್ನು ದೇವತೆ ಎಂದು ಪೂಜಿಸುತ್ತಾರೆ. ಯಾವ ಮನೆಯಲ್ಲಿ ಹೆಣ್ಣು ಮಕ್ಕಳನ್ನು ಪೂಜ್ಯಭಾವನೆಯಿಂದ, ಗೌರವದಿಂದ ಕಾಣುತ್ತಾರೊ ಆ ಮನೆಯಲ್ಲಿ  ಐಶ್ಚರ್ಯ, ಸುಖ, ಶಾಂತಿ, ನೆಮ್ಮದಿ ಮೂಡುತ್ತದೆ ಎಂಬ ಪ್ರತೀತಿ ಇದೆ. ಯಾವ ಮನೆಯಲ್ಲಿ ಹೆಣ್ಣಿಗೆ ಗೌರವವಿಲ್ಲವೋ ಆ ಮನೆಯಲ್ಲಿ ಎಷ್ಟೇ ಸಂಪತ್ತು ತುಂಬಿ ತುಳುಕುತ್ತಿದ್ದರೂ ಅದು ನಶ್ವರ. ಆ ಮನೆ ನರಕ ಇದ್ದ ಹಾಗೆ. ಹೆಣ್ಣಿಗೆ ಗಂಡನ ಮನೆ ಮತ್ತು ತವರು ಮನೆ ರಥದ ಎರಡು ಚಕ್ರವಿದ್ದ ಹಾಗೆ. ಎರಡೂ ಅವಳಿಗೆ ಸಮಾನ ಹಾಗೂ ಶ್ರೇಷ್ಟವಾದವುಗಳು ಎಂದರು. 

ಅಧ್ಯಕ್ಷತೆ ವಹಿಸಿದ್ದ ನಿವೃತ್ತ ಪ್ರಾಚಾರ್ಯ ಡಾ. ಚಿತ್ರಾ ನಾಯಕ ಮಾತನಾಡಿ, ಜ್ಞಾನದ ಹೂವುಗಳನ್ನು ಕೂಡಿಸಿ ಒಂದು ಹೂಗುಚ್ಚವಾಗಿದೆ, ಹೆಣ್ಣು ಒಂದು ಶಕ್ತಿ. ಹೆಣ್ಣು ಒಂದು ಮಾಯೆ, ಹೆಣ್ಣು ಸಮಾಜದ ಕಣ್ಣು, ಹೆಣ್ಣು ಎಲ್ಲ ಪಾತ್ರದಲ್ಲಿ ನಟಿಸುವ ಸಾಮಥ್ರ್ಯ ಹೊಂದಿದ್ದಾಳೆ. ಜಾನಪದ ಕಾವ್ಯಕ್ಕೂ ಹೆಣ್ಣಿಗೂ ಅವಿನಾಭಾವ ಸಂಬಂಧವಿದೆ ಎಂದರು. 

ವೇದಿಕೆಯಲ್ಲಿ ಸಂಘದ ಕಾಯರ್ಾಧ್ಯಕ್ಷ ಶಿವಣ್ಣ ಬೆಲ್ಲದ, ಲಲಿತಾ ಮತ್ತು ಪ್ರೊ. ಸಿ. ವ್ಹಿ. ಕೆರಿಮನಿ ಹಾಗೂ ದತ್ತಿದಾನಿ ಸಂಪದಾ ಸುಭಾಷ ಬಕಾಲಿ (ಕೆರಿಮನಿ) ಉಪಸ್ಥಿತರಿದ್ದರು.

ಸಂಘದ ಉಪಾಧ್ಯಕ್ಷ ನಿಂಗಣ್ಣ ಕುಂಟಿ (ಇಟಗಿ) ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ  ಪ್ರಕಾಶ ಎಸ್. ಉಡಿಕೇರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕಾರಿ ಸಮಿತಿ ಸದಸ್ಯರಾದ ವಿಶ್ವೇಶ್ವರಿ ಬ. ಹಿರೇಮಠ ವಂದಿಸಿದರು. ಸತೀಶ ತುರಮರಿ ನಿರೂಪಿಸಿದರು. ಮೇಘಾ ಹುಕ್ಕೇರಿ, ಕುಸುಮಾ ಓತಗೇರಿ ಮತ್ತು ಲತಾ ಶಹಾಪೂರ ಪ್ರಾರ್ಥನೆ ನಡೆಸಿಕೊಟ್ಟರು. ಮನೋಜ ಪಾಟೀಲ, ಪ್ರಿ. ಶಿವಶಂಕರ ಹಿರೇಮಠ, ಹನುಮಾಕ್ಷಿ ಗೋಗಿ, ಭಾರತಿದೇವಿ ರಾಜಗುರು, ಪ್ರಭಾವತಿ ಮೂರಶಿಳ್ಳಿ, ಶಾಂತಾ ಸಾಲಂಕಿ, ಬಿ. ಎಸ್. ಶಿರೋಳ, ವೀರಣ್ಣ ಒಡ್ಡೀನ ಹಾಗೂ ಕೆರಿಮನಿ ಕುಟುಂಬದವರು, ಬಂಧುಗಳು ಸೇರಿದಂತೆ ಅನೇಕರು ಭಾಗವಹಿಸಿದ್ದರು.