ನಗರದಲ್ಲಿ ಉತ್ತಮವಾದ ಹಾಸ್ಯ ಭರಿತ ನಾಟಕ ಪ್ರದರ್ಶನ

ಲೋಕದರ್ಶನ ವರದಿ

ಕೊಪ್ಪಳ 16: ಸುಮಾರು 15-20ವರ್ಷಗಳ ಹಿಂದೆ 80 ಕ್ಕೂ ಹೆಚ್ಚು ನಾಟಕ ಕಂಪನಿಗಳು ಇದ್ದವು ಈಗ ಅವು ಬೆರಳೆಣಿಕೆಯಷ್ಟು ಮಾತ್ರ ಉಳಿದಿವೆ ಉತ್ತಮ ಗುಣಮಟ್ಟದ ನಾಟಕಗಳು ಬಂದರೆ ಜನ ನೋಡುತ್ತಾರೆ ಎಂದು ವಿಶ್ವಜೋತಿ ಪಂಚಾಕ್ಷರ ನಾಟ್ಯ ಸಂಘ ಜೇವರ್ಗ ಮಾಲಕ ರಾಜಣ್ಣ ಜೇವರ್ಗಿ ಯವರು ಹೇಳಿದರು. 

ಅವರು ನಗರದ ಪತ್ರಿಕಾ ಭವನದಲ್ಲಿ ನಡೆದ ಪತ್ರಿಕಾ ಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು ಕೆಲವು ನಾಟಕ ಸಂಸ್ಥೆಗಳು ಈ ಹಿಂದೆ ಐಟಮ್ ಸಾಂಗ್ ನಂತಹ ಹಾಡು ಮತ್ತು ಆಶ್ಲೀಲ  ಸಂಭಾಷಣೆಗಳಿಂದ ಜನರು ನಾಟಕಗಳು ನೋಡುವುದು ಕಡಿಮೆ ಮಾಡಿದ್ದಾರೆ, ಮೊಬೈಲ್ಗಳು ಬಂದ ನಂತರ ಸಿನಿಮಾ ನೋಡುವುದು ಸಹ ಕಡಿಮೆ ಮಾಡಿದ್ದಾರೆ, ಹಾಗಾಗಿ ಉತ್ತಮ ಗುಣಮಟ್ಟದ ನಾಟಕಗಳು ಮಾಡಿದರೆ ಮಾತ್ರ ಜನರು ನಾಟಕ ನೋಡಲು ಬರುತ್ತಾರೆ, ಇನ್ನೊಂದು ಸಮಸ್ಯೆ ಎಂದರೆ ಮೊದಲು ಎರಡು ಇಲಾಖೆಯಲ್ಲಿ ಅನುಮತಿ ಪಡೆದರೆ ಸಾಕಾಗಿತ್ತು ಆದರೆ ಈಗ 8ರಿಂದ 8 ಇಲಾಖೆಯ ಅನುಮತಿ ಪಡೆಯಬೇಕು, ಲೈಸನ್ಸ್ ಪಡೆಯಲು 70ರಿಂದ 80 ಸಾವಿರ ರೂಪಾಯಿ ಖಚರ್ಾಗುತ್ತದೆ. 

ನಾಟಕ ಕಂಪನಿ ಹಾಕಲು ಜಾಗದ ಸಮಸ್ಯೆ ಬೇರೆ ಸಾಹುಕಾರರ ಜಾಗದಲ್ಲಿ ಕಂಪನಿ ಹಾಕಲು ಅವರು ಜಾಗದ ಬಾಡಿಗೆ 10-15 ಸಾವಿರಕ್ಕೆ ಕೊಡುವುದಿಲ್ಲ ಅವರ ಜಾಗ ಊರ ಹೊರಗೆ ಇರುತ್ತವೆ ಅಲ್ಲಿಗೆ ಬಂದು ಜನ ನಾಟಕ ನೋಡುವುದಿಲ್ಲ ಒಂದು ಕಂಪನಿ ಒಂದು ಕಡೆಯಿಂದ ಇನ್ನೋಂದು ಕಡೆ ಹಾಕಲು 4ರಿಂದ 5 ಲಕ್ಷರೂಪಾಯಿ ಖರ್ಚಗುತ್ತದೆ ಹೀಗಾಗಿನಾಟಕ ಕಂಪನಿ ನೆಡೆಸಲು ಕಷ್ಟವಾಗಿದೆ ಎಂದರು. ನಮ್ಮ ಕಂಪನಿ ಉತ್ತಮ ಗುಣ ಮಟ್ಟದ ನಾಟಕಗಳು ಪ್ರದರ್ಶನ ಮಾಡುತಿದೆ ಹಾಸ್ಯ ಭರಿತವಾದ ನಾಟಕ ಶನಿವಾರದಿಂದ ಪ್ರದರ್ಶನ ಶುರುವಾಗಿದೆ ಕೊಪ್ಪಳ ನಗರದ ಗದಗ ರಸ್ತೆಯ ಮೈದಾನದಲ್ಲಿ ನಮ್ಮ ಕಂಪನಿ ಹಾಕಿದ್ದೇವೆ, ಸಾರ್ವಜನಿಕರು ನಮ್ಮ ಕಂಪನಿಯ ನಾಟಕ ನೋಡಿ ನಮಗೆ ಪ್ರೋತ್ಸಹಿಸಬೇಕು ಎಂದು ಕೊಪ್ಪಳ ಜನರಲ್ಲಿ ವಿನಂತಿಸಿ ಕೊಂಡರು, ಈ ಸಂದರ್ಭದಲ್ಲಿ ಹನುಮಂತಪ್ಪ ಬಾಗಲಕೊಟೆ ಯವರು ಸಹ ಉಪಸ್ಥಿತರಿದ್ದರು.