ವಿಜಯಪುರ 31: ಕನರ್ಾಟಕ
ರೈತ ಸುರಕ್ಷಾ ಫಸಲ ಬಿಮಾ ಯೋಜನೆಯ
ಲಾಭವು ರೈತರಿಗೆ ಸಕಾಲಕ್ಕೆ ದೊರೆಯಲು ಅನುಕೂಲವಾಗುವಂತೆ ಸಂಬಂಧಪಟ್ಟ ವಿಮೆ ಕಂಪನಿಗಳು ಹಾಗೂ
ಬ್ಯಾಂಕ್ಗಳು ಜವಾಬ್ದಾರಿಯಿಂದ ಕಾರ್ಯನಿರ್ವಹಿಸಿ ರೈತರಿಗೆ ನೆರವು ಒದಗಿಸುವಂತೆ ಜಿಲ್ಲಾಧಿಕಾರಿ ಎಸ್.ಬಿ.ಶೆಟ್ಟೆಣ್ಣವರ
ಅವರು ಸೂಚಿಸಿದರು.
ನಗರದ
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿಂದು ಕನರ್ಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ
ಫಸಲ ವಿಮಾ ಯೋಜನೆ 2018-19ರ
ಹಿಂಗಾರು ಹಾಗೂ ಬೇಸಿಗೆ ಹಂಗಾಮು
ವಿಮೆ ಯೋಜನೆ ಅನುಷ್ಠಾನ ಕುರಿತಂತೆ ನಡೆಸಿದ ಸಭೆಯ ಅಧ್ಯಕ್ಷತೆ ವಹಿಸಿದ್ದ
ಅವರು, 2018-19ರ ಹಿಂಗಾರು ಹಾಗೂ
ಬೇಸಿಗೆ ಹಂಗಾಮಿಗೂ ಕೇಂದ್ರ ಸಕರ್ಾರವು ಪ್ರಧಾನಮಂತ್ರಿ ಫಸಲ ಬಿಮಾ ಯೋಜನೆ
ಜಾರಿಗೊಳಿಸಿದ್ದು, ರಾಜ್ಯದಲ್ಲಿ ಕನರ್ಾಟಕ ರೈತ ಸುರಕ್ಷಾ ಯೋಜನೆ
ಎಂದು ಅನುಷ್ಠಾನಗೊಳ್ಳುತ್ತಿದೆ. ಈ ಹಿನ್ನಲೆಯಲ್ಲಿ ರೈತರಿಗೆ
ಈ ಯೋಜನೆಯಡಿ ಸಕಾಲಕ್ಕೆ ಸೌಲಭ್ಯ ದೊರಕಿಸಲು ಆಯಾ ವಿಮೆ ಕಂಪನಿ
ಹಾಗು ಬ್ಯಾಂಕ್ ಅಧಿಕಾರಿಗಳು ಅವಶ್ಯಕ ಕ್ರಮ ಕೈಗೊಳ್ಳುವಂತೆ ಸೂಚನೆ
ನೀಡಿದರು.
ಆಯಾ
ವಿಮೆ ಕಂಪನಿಗಳು ಕೂಡ ಈ ಹಿಂದೆ
ರೈತರಿಂದ ಪಡೆದಿರುವ ಪ್ರಿಮಿಯಂ ಹಣ, ನಂತರ ವಿಮೆ
ಪರಿಹಾರ ವಿತರಣೆಗೆ ಸಂಬಂಧಪಟ್ಟಂತೆ ಕೈಗೊಳ್ಳಲಾದ ಕ್ರಮಗಳ ಬಗ್ಗೆ ಮಾಹಿತಿ ಸಲ್ಲಿಸಬೇಕು. ಈ ಕುರಿತಂತೆ ಚಚರ್ಿಸಲು
ವಿಮೆ ಕಂಪನಿಯ ಅಧಿಕಾರಿಗಳೊಂದಿಗೂ ಸಹ ಪ್ರತ್ಯೇಕ ಸಭೆ
ನಡೆಸಲಾಗುವುದೆಂದ ಅವರು, ರೈತರು ಸಹ ಬೆಳೆ ವಿಮೆ
ಯೋಜನೆಯಡಿ ಬೆಳೆ ಸಾಲ ಪಡೆಯದ
ರೈತರು, ಬ್ಯಾಂಕ್ಗಳಿಗೆ ಘೋಷಣೆಯನ್ನು ಸಲ್ಲಿಸುವಾಗ ಅಜರ್ಿಯೊಂದಿಗೆ ಭೂಮಿ ಹೊಂದಿರುವುದಕ್ಕೆ ಪಹಣಿ,
ಖಾತೆ, ಪಾಸ್ಪುಸ್ತಕ, ಕಂದಾಯ ರಸೀದಿ ಮತ್ತು ಆಧಾರ ಸಂಖ್ಯೆಯನ್ನು ಕಡ್ಡಾಯವಾಗಿ
ಸಲ್ಲಿಸುವಂತೆ ತಿಳಿಸಿದರು.
ಈ ವಿಮೆ ಯೋಜನೆಯಡಿ ರೈತರಿಗೆ
ಯಾವುದೇ ಸಂದರ್ಭದಲ್ಲಿ ತೊಂದರೆಯಾಗದಂತೆ ಎಚ್ಚರಿಕೆ ವಹಿಸಬೇಕು. ಅಸಮರ್ಪಕ ನಿರ್ವಹಣೆ ಸಹಿಸಲಾಗುವುದಿಲ್ಲ ಎಂದು ತಿಳಿಸಿದ ಅವರು,
ವ್ಯವಸ್ಥಿತವಾಗಿ ವಿಮಾ ಯೋಜನೆಯ ಲಾಭ
ನೇರವಾಗಿ ರೈತರಿಗೆ ದೊರೆಯುವಂತಾಗಬೇಕು ಎಂದು ಜಿಲ್ಲಾ ಪಂಚಾಯತ್
ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಿಕಾಶ ಕಿಶೋರ ಸುರಳಕರ ಅವರು ಹೇಳಿದರು.
ಜಿಲ್ಲೆಗೆ
ಹಿಂಗಾರು ಹಂಗಾಮಿನಲ್ಲಿ ಗ್ರಾಮ ಪಂಚಾಯ್ತಿ ಮಟ್ಟಕ್ಕೆ ಮಳೆ ಆಶ್ರಿತ ಜೋಳ,
ಕಡಲೆ ಪ್ರಮುಖ ಅಧಿಸೂಚಿತ ಬೆಳಗಳಾಗಿವೆ. ಹಿಂಗಾರು ಹಂಗಾಮಿಗೆ ಹೋಬಳಿ ಮಟ್ಟಕ್ಕೆ ಜೋಳ (ನೀ), ಕಡಲೆ
(ನೀ), ಸೂರ್ಯಕಾಂತಿ (ನೀ), ಸೂರ್ಯಕಾಂತಿ (ಮ.ಆ), ಮುಸುಕಿನ ಜೋಳ
(ನೀ), ಗೋದಿ (ನೀ) ಗೋಧಿ (ಮ.ಆ), ಕುಸುಬೆ (ಮ.ಆ), ಹುರುಳಿ (ಮ.ಆ) ಪ್ರಮುಖ ಬೆಳೆಗಳಾಗಿವೆ
ಎಂದು ಹೇಳಿದರು.
ಬೇಸಿಗೆ
ಹಂಗಾಮಿಗೆ ಗ್ರಾಮ
ಪಂಚಾಯ್ತಿ ಮಟ್ಟಕ್ಕೆ ನೆಲಗಡೆಲ (ನೀ) ಪ್ರಮುಖ ಬೆಳೆಯಾಗಿದ್ದು,
ಬೇಸಿಗೆ ಹಂಗಾಮಿಗೆ ಹೋಬಳಿ ಮಟ್ಟಕ್ಕೆ ನೆಲಗಡಲೆ (ನೀ) ಹಾಗೂ ಸೂರ್ಯಕಾಂತಿ
(ನೀ) ಪ್ರಮುಖ ಬೆಳೆಗಳಾಗಿವೆ. ಹಿಂಗಾರು ಹಾಗೂ ಬೇಸಿಗೆ ಹಂಗಾಮಿನ
ವಿಜಯಪುರ ಜಿಲ್ಲೆಗೆ ಒಳಪಡುವ ಬೆಳೆಗಳಿಗೆ ಶೇಕಡ 1.5 ರಷ್ಟು ಮಾತ್ರ ವಿಮಾ ಕಂತನ್ನು ನಿಗದಿಪಡಿಸಲಾಗಿದೆ.
ಬೆಳೆ ಸಾಲ ಪಡೆದ ರೈತರಿಗೆ
ವಿಮೆ ಕಡ್ಡಾಯವಾಗಿದ್ದು, ಸಾಲ ಪಡೆಯದ ರೈತರಿಗೆ
ಐಚ್ಛಿಕವಾಗಿರುತ್ತದೆ.
ಹಿಂಗಾರು
ಬೆಳೆಗೆ ವಿಮೆ ಮಾಡಿಸಲು ಬೆಳೆಸಾಲ
ಪಡೆದ, ಬೆಳೆ ಸಾಲ ಪಡೆಯದ
ರೈತರಿಗೆ ಜೋಳ (ನೀ) (ಮ.ಆ), ಕುಸಬೆ (ಮ.ಆ), ಸೂರ್ಯಕಾಂತಿ (ನೀ)
ಹಾಗೂ (ಮ.ಆ), ಗೋಧಿ
(ಮ.ಆ) ದಿನಾಂಕ : 15-11-2018, ಮುಸುಕಿನ ಜೋಳ
(ನೀ) ದಿನಾಂಕ : 30-11-2018, ಗೋಧಿ (ನೀ), ದಿನಾಂಕ : 15-12-2018, ಕಡಲೆ (ನೀ)
ಹಾಗೂ (ಮ.ಆ) ದಿನಾಂಕ
: 31-12-2018 ಹೀಗೆ ಬೆಳೆವಾರು ದಿನಾಂಕಗಳನ್ನು ನಿಗದಿಪಡಿಸಲಾಗಿದೆ.
ಯೋಜನೆಯ
ಉದ್ದೇಶ : ಗ್ರಾಮ
ಪಂಚಾಯತ್ ಮಟ್ಟದಲ್ಲಿ ತಾಲೂಕಿನ ಪ್ರಮುಖ ಬೆಳೆಗಳು ಹಾಗೂ ಹೋಬಳಿ ಮಟ್ಟಕ್ಕೆ
ಇತರ ಮುಖ್ಯ ಬೆಳೆಗಳ ನಷ್ಟದ ಸಂದರ್ಭದಲ್ಲಿ ರೈತರಿಗೆ ಮುಂದಿನ ಹಂಗಾಮಿನ ಬೆಳೆಗಾಗಿ ಆಥರ್ಿಕ ಭದ್ರತೆ ಒದಗಿಸುವುದು, ರೈತರಿಗೆ ಹೊರೆಯಾಗದಂತೆ ಅತಿ ಕಡಿಮೆ ವಿಮಾ
ಕಂತು, ತಂತ್ರಾಂಶದ ಅಳವಡಿಕೆಯಿಂದ ಹಾಗೂ ಭೂಮಿ ತಂತ್ರಾಂಶ
ಜೋಡಣೆಯಿಂದ ದೋಷರಹಿತ ನೋಂದಣಿ ಪ್ರಕ್ರಿಯೆ ಮತ್ತು ವಿಮೆ ಪರಿಹಾರದ ಲೆಕ್ಕಾಚಾರ
ಹಾಗೂ ಸಂದಾಯಗಳು ತ್ವರಿತಗತಿಯಲ್ಲಿ ಕಲ್ಪಿಸುವ ಉದ್ದೇಶ ಹೊಂದಿದೆ ಎಂದು ಸಭೆಯಲ್ಲಿ ತಿಳಿಸಲಾಯಿತು.
ಸಭೆಯಲ್ಲಿ ಫಸಲ ಬಿಮಾ ಯೋಜನೆಯ
ಪೋಸ್ಟರ್ಗಳನ್ನು ಜಿಲ್ಲಾಧಿಕಾರಿ ಎಸ್.ಭಿ.ಶೆಟ್ಟೆಣ್ಣವರ
ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಿಕಾಶ ಕಿಶೋರ ಸುರಳಕರ ಅವರು ಬಿಡುಗಡೆಗೊಳಿಸಿದರು. ಕೃಷಿ ಜಂಟಿ
ನಿದರ್ೇಶಕ ಶಿವಕುಮಾರ ಸ್ವಾಗತಿಸಿ, ಕೊನೆಯಲ್ಲಿ ವಂದಿಸಿದರು. ವಿಮೆ ಅಧಿಕಾರಿಗಳು, ಬ್ಯಾಂಕ್
ಅಧಿಕಾರಿಗಳು, ಜಿಲ್ಲಾ ಮಟ್ಟದ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.