ಗ್ರಾಮೀಣ ಭಾಗದಲ್ಲಿ ಕ್ರಿಕೆಟ್ ಮಿನುಗಲಿ: ಎಲ್ ಕೃಷ್ಣ ನಾಯ್ಕ್
ಹೂವಿನ ಹಡಗಲಿ 10: ಐಪಿಎಲ್‌ನಂತೆ ಗ್ರಾಮೀಣ ಭಾಗದಲ್ಲಿ ಕ್ರಿಕೆಟ್ ಮಿನುಗಲಿ ಎಂದು ಶಾಸಕ ಎಲ್ ಕೃಷ್ಣ ನಾಯ್ಕ್ ಹೇಳಿದರು. ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ಗುರುವಾರಹಡಗಲಿ ಪ್ರೀಮಿಯರ್ ಲೀಗ್ ಹೆಚ್ ಪಿ ಎಲ್ ಟಿ 20 ಕ್ರಿಕೆಟ್ ಪಂದ್ಯಾವಳಿಗೆ ಬ್ಯಾಟಿಂಗ್ ಪ್ರದರ್ಶಿಸುವ ಮೂಲಕ ಚಾಲನೆ ನೀಡಿದರು. ಐಪಿಎಲ್ ಕ್ರಿಕೆಟ್ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಖ್ಯಾತಿ ಪಡೆದಿದೆ. ವಿದೇಶಿ ಕ್ರಿಕೆಟಿಗರು ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ನೆರವಾಗುತ್ತದೆ.ನಮ್ಮ ದೇಶದ ಯಶಸ್ವಿ ಜೈಸ್ವಾಲ್, ಶುಭಮನ್ ಗಿಲ್,ಬೂಮ್ರಾ, ರಿಂಕು ಸಿಂಗ್, ಮೊದಲಾದ ಯುವ ಆಟಗಾರರು ಐಪಿಎಲ್ ಮುಖಾಂತರ ರಾಷ್ಟ್ರೀಯ ತಂಡಕ್ಕೆ ಅವಕಾಶ ಪಡೆದಿದ್ದಾರೆ ಎಂದರು.
ಕ್ರಿಕೆಟ್ ಹಾಗೂ ಎಲ್ಲಾ ಕ್ರೀಡೆಗಳಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ತಾಲೂಕು ಕ್ರೀಡಾಂಗಣದಲ್ಲಿ ಹೊನಲು ಬೆಳಕಿನ ಸುಸಜ್ಜಿತ ಲೈಟಿಂಗ್ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ತಿಳಿಸಿದರು.ಯುವಕರು ದುಶ್ಚಟಗಳಿಗೆ ಬಲಿಯಾಗದೆ ಕ್ರೀಡೆ ವ್ಯಾಯಾಮ ಜಿಮ್ ನಡಿಗೆ ದೈಹಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಿರಿ ಎಂದು ಹೇಳಿದರು.ಮುಖಂಡರಾದ ಎಂ ಪರಮೇಶ್ವರ್ಪ, ಪುತ್ರೇಶ್,ಸುರೇಶ ಮಲ್ಕಿಒಡೆಯರ್,ಹಾಗೂ ತಂಡಗಳ ಮಾಲೀಕರಾರ ಮಹಾಬಲೇಶ್ವರ ದಿವಾಕರ, ಪುನೀತ್ ದೊಡ್ಮನಿ,ಪಂಕಜ್ ಕುಮಾರ್, ಶಿವರಾಜ್ ರಾಠೋಡ್, ಡಿ ಫಯಾಜ್,ಡಿ ಮಹಮದ್ ಅಜರುದ್ದೀನ್ ಜುನಕಿ ಇಂತಿಯಾಜ್, ಸೋಮಣ್ಣ, ಬಿ ಫಾರೂಕ್ ಸೇರಿದಂತೆ ಕ್ರಿಕೆಟ್ ಅಭಿಮಾನಿಗಳು ಪಾಲ್ಗೊಂಡು ಮೆರುಗು ತಂದರು.