ಲೋಕದರ್ಶನ ವರದಿ
ಕಂಪ್ಲಿ 19:ಆಕಸ್ಮಿಕ ಅನ್ವೇಷಣೆಗಳ ಮೂಲಕ ಪ್ರಾಚೀನ ಅವಶೇಷಗಳು ಪತ್ತೆಯಾಗಿವೆ. ಗಾಳಿ ಮತ್ತು ಮಳೆಯಿಂದಾಗಿ ಅನೇಕ ಸ್ಮಾರಕಗಳು ಬೆಳಕಿಗೆ ಬಂದಿವೆ ಎಂದು ಗಂಗಾವತಿ ಎಸ್ಕೆಎನ್ಜಿ ಸಕರ್ಾರಿ ಪ್ರಥಮ ದಜರ್ೆ ಕಾಲೇಜು ಇತಿಹಾಸ ಉಪನ್ಯಾಸಕ ಡಾ.ಪಿ.ಬಿ.ಮಂಜಣ್ಣ ಹೇಳಿದರು.
ಸರಕಾರಿ ಪ್ರಥಮ ದಜರ್ೆ ಕಾಲೇಜಿನಲ್ಲಿ ಪ್ರಾಚ್ಯವಸ್ತು ಸಂಗ್ರಹಾಲಯಗಳು ಪರಂಪರೆ ಮೈಸೂರು ಇಲಾಖೆಯ ಅಡಿಯಲ್ಲಿ ಇತಿಹಾಸ ವಿಭಾಗದ ಪರಂಪರೆ ಕೂಟವತಿಯಿಂದ ಶನಿವಾರ ಆಯೋಜಿಸಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಇತಿಹಾಸದ ಅನ್ವೇಷಣೆ ಮತ್ತು ಮಹತ್ವ ಕುರಿತು ಉಪನ್ಯಾಸ ನೀಡಿ ಮಾತನಾಡಿ, ಚರಿತ್ರೆಯನ್ನು ರಚಿಸಲು ಪ್ರಾಚೀನರು ಬಳಸುತ್ತಿದ್ದ ಅವಶೇಷಗಳು ಮತ್ತು ಪರಿಕರಗಳು ಉಪಯುಕ್ತವಾಗಿವೆ. ಕಲ್ಲು ಎಂಬ ಹೆಸರಿನಿಂದ ಆ ಗ್ರಾಮದ ಹೆಸರು ಇದ್ದರೆ ಅದು ಬೃಹತ್ ಶಿಲಾಯುಗದ ನೆಲೆಯಾಗಿತ್ತೆಂದು ಊಹಿಸಬಹುದಾಗಿದೆ. ಮತ್ತು ನೀರಾವರಿ ಕುರಿತು ಪ್ರಸ್ತಾಪಿಸುತ್ತಾ ದಕ್ಷಿಣ ಭಾರತ ಅತಿ ಹೆಚ್ಚು ಕೆರೆ ನೀರಾವರಿಗೆ ಒತ್ತು ಕೊಟ್ಟಿತ್ತು ಎಂದು ಹೇಳಿದರು ಇತಿಹಾಸ ವಿಭಾಗದ ಮುಖ್ಯಸ್ಥರು ಹಾಗೂ ಸಂಚಾಲಕರಾದ ಇಂದ್ರಿಪಿ ಮಲ್ಲಿಕಾಜರ್ುನ ಪ್ರಾಸ್ತಾವಿಕವಾಗಿ ಮಾತನಾಡಿದರು. ಪಾರಂಪರಿಕ ಕಲಾಕೃತಿಗಳನ್ನು ಸ್ಮಾರಕಗಳನ್ನು ಉಳಿಸುವುದು ನಮ್ಮೆಲ್ಲರ ಹೊಣೆಯಾಗಿದೆ ಎಂದರು. ಪ್ರಾಂಶುಪಾಲರಾದ ಶ್ರೀ ಕೆ.ನಾಗೇಂದ್ರಪ್ಪ ಅಧ್ಯಕ್ಷತೆವಹಿಸಿದ್ದರು.
ಈ ಸಂದರ್ಭದಲ್ಲಿ ಕಾಲೇಜಿನ ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಜೆ ಕೃಷ್ಣ, ಗ್ರಂಥಾಲಯ ವಿಭಾಗದ ಮುಖ್ಯಸ್ಥ ಗುರುಮೂತರ್ಿ, ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ರಾಜ್ಮಾ.ಟಿ.ಎಂ.ಆರ್, ಕನ್ನಡ ವಿಭಾಗದ ಮುಖ್ಯಸ್ಥ ಪ್ರವೀಣ್ ಕುಮಾರ್ ಎಂ.ಎನ್, ವಾಣಿಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥೆ ಮಮತ.ಜೆ.ಎಂ, ಉಪನ್ಯಾಸಕರಾದ ಅಮರೇಗೌಡ, ಡಾ.ಶಿಲ್ಪ, ಶಿವಕುಮಾರ್, ಸಿ.ಡಿ.ಕುಮಾರ್, ಡಾ. ಹನುಮಂತರಾಯ ದೊಡ್ಡಮನಿ, ಫಾತಿಮಾ, ರುದ್ರಮ್ಮ ಸೇರಿದಂತೆ ವಿದ್ಯಾಥರ್ಿಗಳು ಪಾಲ್ಗೊಂಡಿದ್ದರು.