ವಿಶ್ವ ಸದ್ಭಾವನ ಶಾಂತಿ ಯಾತ್ರೆ ಅತ್ಯಂತ ವಿಜ್ರಂಭಣೆ ಜರುಗಲಿದೆ
ಕೊಪ್ಪಳ 23 : ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯದ ವತಿಯಿಂದ ಮಹಾಶಿವರಾತ್ರಿ ಪ್ರಯುಕ್ತ ಶಿವದ್ವಜಾರೋಹಣ ಹಾಗೂ ವಿಶ್ವ ಸದ್ಭಾವನ ಶಾಂತಿ ಯಾತ್ರೆ ಅತ್ಯಂತ ವಿಜ್ರಂಭಣೆಯಿಂದ ಜರುಗಿತು. ಬೆಳಿಗ್ಗೆ 8 ಗಂಟೆಗೆ ಶಿವ ಧ್ವಜಾರೋಹಣ ನಡೆಯಿತು. ಬ್ರಹ್ಮಕುಮಾರಿ ಯೋಗಿನಿ ಅಕ್ಕ ಶಿವಧ್ವಜದ ಕೆಳಗಡೆ ದೃಢ ಪ್ರತಿಜ್ಞೆ ಮಾಡಿಸಿದರು. ಮಹಾಶಿವರಾತ್ರಿಯ ಬಗ್ಗೆ ತಿಳಿಸುತ್ತಾ ರಾತ್ರಿ ಎಂದರೆ ಕಲಿಯುಗದ ಅಜ್ಞಾನವೇ ರಾತ್ರಿ ಮನುಷ್ಯನಿಗೆ ನಾನು ಯಾರು,ಪರಮಾತ್ಮ ಯಾರು, ಸೃಷ್ಟಿಯ ರಹಸ್ಯವೇನು ಎಂಬ ಸತ್ಯತೆಯ ಅರಿವು ಇಲ್ಲದೆ ಇರುವ ಅಜ್ಞಾನವೆಂಬ ರಾತ್ರಿಯಲ್ಲಿ ಪರಮಾತ್ಮ ಶಿವನು ಅವತರಿಸಿ ಸತ್ಯ ಜ್ಞಾನದ ಬೆಳಕನ್ನು ನೀಡುವುದರ ಪ್ರತೀಕವಾಗಿ ಆಚರಿಸುವ ಹಬ್ಬವೇ ಮಹಾಶಿವರಾತ್ರಿ ಎಂದರು. ದ್ವಾದಶ ಜ್ಯೋತಿರ್ಲಿಂಗಗಳ ರಥಯಾತ್ರೆ ಹಾಗೂ ಶಾಂತಿ ಯಾತ್ರೆ ವಿಜೃಂಭಣೆಯಿಂದ ಜರುಗಿತು.