ಲೋಕದರ್ಶನ ವರದಿ
ಬೆಳಗಾವಿ 12: ಕಂದಾಯ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವ ಗ್ರಾಮ ಸಹಾಯಕರನ್ನು 'ಡಿ' ದಜರ್ೆ ನೌಕರರು ಎಂದು ಪರಿಗಣಿಸಲು ಒತ್ತಾಯಿಸಿ ಡಿ.17 ಸುವರ್ಣಸೌಧದ ಎದುರು ಅನಿಧರ್ಿಷ್ಠ ಮುಷ್ಕರ ನಡೆಸುವುದಾಗಿ ನಿರ್ಧರಿಸಲಾಗಿದೆ ಎಂದು ಕನರ್ಾಟಕ ರಾಜ್ಯ ಕಂದಾಯ ಇಲಾಖೆ ಗ್ರಾಮ ಸಹಾಯಕರ ಸಂಘದ ಬೆಳಗಾವಿ ಜಿಲ್ಲಾಧ್ಯಕ್ಷ ಮಹಾದೇವಪ್ಪ ಇಂಗಳಗಿ ಹೇಳಿದರು.
ಮಂಗಳವಾರ ನಗರದ ಕಂದಾಯ ಇಲಾಖೆಯ ನೌಕರರ ಸಂಘದ ಭವನದಲ್ಲಿ ನಡೆದ ಗ್ರಾಮ ಸಹಾಯಕರನ್ನು 'ಡಿ' ದಜರ್ೆ ಮಾಡುತ್ತೇವೆ ಎಂದು ಭರವಸೆ ನೀಡಿ 5 ವರ್ಷ ಗತಿಸಿದರೂ ಸರಕಾರ ಅನುಷ್ಠಾನಗೊಳಿಸಿಲ್ಲದ ಕಾರಣ ವಿಳಂಭ ನೀತಿ ಖಂಡಿಸಿ ಸರಕಾರವನ್ನು ಒತ್ತಾಯಿಸಿ ನವಂಬರ.22 ರಂದು ಬೆಂಗಳೂರಿನ ನೌಕರರ ಭವನದಲ್ಲಿ ನಡೆದ ರಾಜ್ಯ ಸಭೆಯಲ್ಲಿ ರಾಜ್ಯ ಸಂಘದ ತಿಮರ್ಾನದಂತೆ ಡಿ.17 ರಂದು ಸುವರ್ಣಸೌಧದ ಎದುರು ಅನಿಧರ್ಿಷ್ಠ ಮುಷ್ಕರ ನಡೆಸುವುದಾಗಿ ನಿರ್ಧರಿಸಲಾಗಿದೆ ಎಂದರು.
ಬೆಳಗಾವಿ ಜಿಲ್ಲಾ ಗ್ರಾಮ ಸಹಾಯಕರ ಸಂಘದ ಗೌರವಾಧ್ಯಕ್ಷ ಮಡಿವಾಳಪ್ಪ ವಣ್ಣೂರ ಮಾತನಾಡಿದ ಅವರು ರಾಜ್ಯ ಸಕಾರದ ಕಂದಾಯ ಇಲಾಖೆಯಲ್ಲಿ ಗ್ರಾಮ ಸಹಾಯಕರಾಗಿ ಕಳೆದ 40 ವರ್ಷಗಳಿಂದ ಯಾವುದೇ ಸೇವಾಭದ್ರತೆ ಇಲ್ಲದೇ ಸೇವೆ ಸಲ್ಲಿಸುತ್ತಿರುವ ರಾಜ್ಯದ 10450 ಗ್ರಾಮ ಸಹಾಯಕರನ್ನು `ಡಿ' ಗ್ರೂಪ್ ಮಾಡುವುದಾಗಿ ಹಿಂದಿನ ಸರಕಾರ ಭರವಸೆ ನೀಡಿದ್ದು, ಈಗ ವಿಳಂಭ ಮಾಡುತ್ತಿರುವುದನ್ನು ಖಂಡಿಸಿ 'ಮಾಡು ಇಲ್ಲವೇ ಮಡಿ'ಎಂಬ ಘೋಷಣೆೆಯೊಂದಿಗೆ ಈ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದರು.
ವಿಜಯಪುರ ಜಿಲ್ಲಾ ಉಪಾಧ್ಯಕ್ಷ ಅಲ್ಲಾಭಕ್ಷ ಕೊರಬು ಮಾತನಾಡಿ ಈ ಪ್ರತಿಭಟನೆಯಲ್ಲಿ ರಾಜ್ಯದ ಎಲ್ಲ ಗ್ರಾಮ ಸಹಾಯಕರು ಭಾಗವಹಿಸಿ ಈ ಹೋರಾಟವನ್ನು ಯಶಸ್ವಿಗೊಳಿಸಬೇಕು ಎಂದರು. ರಾಜ್ಯ ಸಂಘಟನಾ ಕಾರ್ಯದಶರ್ಿ ಪ್ರಕಾಶ ಅಂತಣ್ಣವರ ಮಾತನಾಡಿ ಈಗ ನಡೆಯುತ್ತಿರುವ ಅಧಿವೇಶನ ಗ್ರಾಮ ಸಹಾಯಕರನ್ನು ಡಿ ದಜರ್ೆ ಘೋಷಣೆ ಮಾಡಬೇಕು ಎಂದು ಆಗ್ರಹಿಸಿದರು.
ಬೆಳಗಾವಿ ಗ್ರಾಮ ಸಹಾಯಕರ ಸಂಘದ ಉಪಾದ್ಯಕ್ಷ ವೆಂಕಟೇಶ ಕೆಳಗೇರಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಈ ವೇಳೆ ತಾಲೂಕಾ ಅಧ್ಯಕ್ಷ ಮಲ್ಲಿಕಾಜರ್ುನ ನರಗುಂದ, ಯಲ್ಲಪ್ಪ ಬಡಸದ, ರೋಣ ತಾಲೂಕ ಅಧ್ಯಕ್ಷ ರಾಜೇಸಾಬ ರಾಜೇಖಾನ, ಕೃಷ್ಣಾ ಮುಶೇನ್ನವರ, ಫಕ್ಕೀರಪ್ಪ ತಳವಾರ, ಅಬ್ದುಲ ಸತ್ತಾರ, ಶಿವಾಜಿ ಕೋಲಕಾರ, ಶಂಕರ ಮರಿಕಟ್ಟಿ, ಕಾರ್ಯದಶರ್ಿಗಳಾದ ಮನೋಹರ ಕಣವಿ, ಆನಂದ ಕಾಂಬಳೆ, ಸಂಘಟನಾ ಕಾರ್ಯದಶರ್ಿ ಸುರೇಶ ಅತ್ತಿಕೇರಿ, ಬೆಳಗಾವಿ ವಿಭಾಗ ಮಟ್ಟದ ಜಿಲ್ಲಾ ಪದಾಧಿಕಾರಿಗಳು, ಉಪಸ್ಥಿತರಿದ್ದರು. ಗ್ರಾಮ ಸಹಾಯಕ ಮಡಿವಾಳಪ್ಪ ವಣ್ಣೂರ ನಿರುಪಿಸಿದರು. ಸಂತೋಷ ಖೋತ ಸ್ವಾಗತಿಸಿದರು. ಯಮನಪ್ಪ ಸನದಿ ವಂದಿಸಿದರು.