ಗ್ರಾಮಲೆಕ್ಕಾಧಿಕಾರಿಗಳ ಕರ್ತವ್ಯಕ್ಕೆ ಭದ್ರತೆ ನೀಡಲು ಶಿವಳ್ಳಿಮಠ ಒತ್ತಾಯ

ಧಾರವಾಡ 26: ಕರ್ತವ್ಯದ ಮೇಲೆ ಇದ್ದಾಗ ಮರಳು ಅಕ್ರಮ ಸಾಗಾಣಿಕೆದಾರರಿಂದ ಹಲ್ಲೆಗೆ ಒಳಗಾಗಿ ಮರಣ ಹೊಂದಿರುವ ರಾಯಚೂರ ಜಿಲ್ಲೆ ಚೀಕಲಪವರ್ಿ ಗ್ರಾಮಲೆಕ್ಕಾಧಿಕಾರಿ ಸಾಹೇಬ್ ಪಟೇಲ್ ಅವರ ಕುಟುಂಬಕ್ಕೆ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ 50 ಲಕ್ಷರೂ. ನೀಡಬೇಕು ಮತ್ತು ಸರಕಾರದ ಪ್ರತಿನಿಧಿಗಳಾಗಿ ಗ್ರಾಮೀಣ ಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಗ್ರಾಮ ಲೆಕ್ಕಾಧಿಕಾರಿಗಳಿಗೆ ಸರಕಾರ ಸೂಕ್ತ ಭದ್ರತೆ ನೀಡಬೇಕು ಗ್ರಾಮ ಲೆಕ್ಕಾಧಿಕಾರಿಗಳ ಸಂಘದ ಅಧ್ಯಕ್ಷ ಪರಮಾನಂದ ಶಿವಳ್ಳಿಮಠ ಒತ್ತಾಯಿಸಿದರು.

ಅವರು ಇಂದು ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಆಯೋಜಿಸಿದ್ದ ಗ್ರಾಮ ಲೆಕ್ಕಾಧಿಕಾರಿಗಳ ಸಂಘ ಮತ್ತು ಜಿಲ್ಲಾ ಕಂದಾಯ ನೌಕರ ಸಂಘದ ಪ್ರತಿಭಟನೆ ಉದ್ದೇಶಿಸಿ, ಮಾತನಾಡಿದರು.

ಸರಕಾರದ ಆದೇಶದಂತೆ ರಾಜ್ಯದ ನೈಸಗರ್ಿಕ ಸಮಫನ್ಮೂಲಗಳನ್ನು ರಕ್ಷಿಸಲು ಗ್ರಾಮಲೆಕ್ಕಾಧಿಕಾರಿಗಳು ಸೇರಿದಂತೆ ಕಂದಾಯ ಇಲಾಖೆ ನೌಕರರು ಶ್ರಮಿಸುತ್ತಿದ್ದಾರೆ. ಅವರಿಗೆ ಸೂಕ್ತ ಭದ್ರತೆ ನೀಡಬೇಕು. ಮತ್ತು ಸಾಹೇಬ್ ಪಟೇಲ್ ಸಾವಿಗೆ ಕಾರಣರಾದವರ ಮೇಲೆ ನಿದರ್ಾಕ್ಷಿಣ್ಯ ಕ್ರಮ ಜರುಗಿಸಬೇಕೆಂದು ಒತ್ತಾಯಿಸಿದರು.

ಪ್ರತಿಭಟನಾಕಾರರನ್ನು ಉದ್ದೇಶಿಸಿ, ಗ್ರಾಮಲೆಕ್ಕಾಧಿಕಾರಿಗಳ ಸಂಘದ ಜಿಲ್ಲಾ ಉಪಾಧ್ಯಕ್ಷ ಅಶೋಕ ಮಲ್ಲೂರ ಧಾರವಾಡ ತಾಲೂಕಾ ಅಧ್ಯಕ್ಷ ವಿನಾಯಕ ದೀಕ್ಷಿತ, ನವಲಗುಂದ ತಾಲೂಕಾ ಅಧ್ಯಕ್ಷ ಋಷಿ ಸಾರಂಗಿ, ರಾಜ್ಯ ಕಂದಾಯ ನೌಕರರ ಸಂಘದ ಜಿಲ್ಲಾ ಅಧ್ಯಕ್ಷ ಇ.ಎಂ.ಹಿರೇಮಠ, ಕಾರ್ಯದಶರ್ಿ ಅಜಯ ಆಯಿ, ಖಜಾಂಚಿ ಎಚ್.ಎಸ್.ದೇಸಾಯಿ, ಉಪತಹಸಿಲ್ದಾರ ಪಿ.ಎ.ಪಾಟೀಲ್, ಕನರ್ಾಟಕ ರಾಜ್ಯ ಸರಕಾರಿ ನೌಕರರ ಸಂಘದ ಜಿಲ್ಲಾ ಅಧ್ಯಕ್ಷ ಎಸ್.ಕೆ.ರಾಮದುರ್ಗ, ಪ್ರಧಾನ ಕಾರ್ಯದಶರ್ಿ ಎಸ್.ಎಫ್.ಸಿದ್ದನಗೌಡರ, ಕೋಶಾಧ್ಯಕ್ಷ ಎಸ್.ಜಿ.ಸುಬ್ಬಾಪೂರಮಠ ಹಾಗೂ ಇತರ ಪದಾಧಿಕಾರಿಗಳು ಮಾತನಾಡಿದರು.

ಸಭೆ ನಂತರ ಪ್ರತಿಭಟನಾಕಾರರು ಮೌನ ಆಚರಿಸಿ, ಮೃತ ಗ್ರಾಲೆಕ್ಕಾಧಿಕಾರಿ ಸಾಹೇಬ್ ಪಟೇಲಗೆ ಶ್ರದ್ಧಾಂಜಲಿ ಸಲ್ಲಿಸಿದರು.

ನಂತರ ಜಿಲ್ಲಾಧಿಕರಿ ದೀಪಾ ಚೋಳನ್ ಅವರಿಗೆ ನ್ಯಾಯ ಪರಿಹಾರ ಕೋರಿ ಕನರ್ಾಟಕ ರಾಜ್ಯ ಸರಕಾರಿ ನೌಕರರ ಸಂಘ, ಕನರ್ಾಟಕ ಸರಕಾರದ ಕಂದಾಯ ಇಲಾಖೆ ನೌಕರರ ಸಂಘ ಮತ್ತು ಕನರ್ಾಟಕ ರಾಜ್ಯ ಗ್ರಾಮ ಲೇಕ್ಕಾಧಿಕಾರಿಗಳ ಸಂಘದ ಮುಖಂಡರು ಮನವಿ ಪತ್ರ ಸಲ್ಲಿಸಿ, ಬೇಡಿಕೆಗಳ ಈಡೆರಿಕೆಗಾಗಿ ಸರಕಾರಕ್ಕೆ ಒತ್ತಾಯ ಮಾಡಿದರು.

ಪ್ರತಿಭಟನೆಯಲ್ಲಿ ಧಾರವಾಡ ಜಿಲ್ಲಾ ಕಂದಾಯ ನೌಕರರು, ಗ್ರಾಮಲೆಕ್ಕಾಧಿಕಾರಿಗಳ ಸಂಘದ ಸದಸ್ಯರು ಹಾಗೂ ವಿವಿಧ ಇಲಾಖೆಗಳ ನೌಕರರ ಪ್ರತಿನಿಧಿಗಳು ಭಾಗವಹಿಸಿದ್ದರು.