ಕೊಪ್ಪಳ27; ಮುಂಬರುವ ಲೋಕ ಸಭೆಯ ಚುನಾವಣೆಯಲ್ಲಿ ಕಾಂಗ್ರೇಸ್ ಪಕ್ಷವನ್ನು ಬೂತ್ ಮಟ್ಟದಲ್ಲಿ ಬಲಿಷ್ಠಗೊಳಿಸಲು ರಾಷ್ಟ್ರೀಯ ಕಾಂಗ್ರೆಸ್ ಸೇವಾದಳದಿಂದ ಪ್ರತಿ ಬೂತ್ ನಲ್ಲಿ ಸೇವಾದಳದ ಸಮಿತಿ ರಚಿಸುವುದು ಒಬ್ಬರು ಸೇವಾದಳ ಬೂತ್ ಪುರುಷ ಅದ್ಯಕ್ಷರು ಹಾಗೂ ಮಹಿಳಾ ಸೇವಾದಳ ಬೂತ್ ಅದ್ಯಕ್ಷರು ಮತ್ತು ಯುವ ಬ್ರೀಗೆಡ್ ಅಧ್ಯಕ್ಷರು ಹೀಗೆ ಸಮೀತಿಗಳನ್ನು ರಚಿಸಿಲು ನಮ್ಮ ರಾಷ್ಟ್ರೀಯ ಕಾಗ್ರೆಸ್ ಅದ್ಯಕ್ಷರಾದ ರಾಹುಲ್ ಗಾಂಧಿಯವರ ಅದೇಶದ ಮೆರೆಗೆ ರಾಷ್ಟ್ರೀಯ ಸೇವಾದಳದ ವತಿಯಿಂದ ಇಡಿ ಭಾರತದಲ್ಲಿ ಅಭಿಯಾನವನ್ನು ಆರಂಬಿಸಲಾಗಿದೆ ಎಂದು ರಾಜ್ಯ ಸೇವಾದಳದ ಉಸ್ತುವಾರಿಗಳಾದ ವಿನೋದ್ ಕಲ್ಪಕರ್ರು ತಿಳಿಸಿದರು.
ಮಂಗಳವಾರ ಕೊಪ್ಪಳ ನಗರದ ಕಾಂಗ್ರೇಸ್ ಕಛೇರಿಯಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡುತ್ತಾ ಬೀಳಿ ಟೀಷರ್ಟ ಬ್ಲೂ ಪ್ಯಾಂಟ್ ಹಾಗೂ ಬೀಳಿ ಮಂಕಿ ಕ್ಯಾಪ್ ಇದು ನಮ್ಮ ಸೇವಾದಳದ ಡ್ರೇಸ್ ಕೊಡ್ ಅಗಿರುತ್ತದೆ ಎಂದು ಸೇವಾದಳ ಸಮಿತಿ ನಿರ್ಧರಿಸಿದೆ ಎಂದರು. ಈಸಭೆಯಲ್ಲಿ ಸೇವಾದಳ ರಾಜ್ಯ ಉಪಾದ್ಯಕ್ಷರಾದ ಕುಪೇಂದ್ರ ದೊಳೆ,ರಾಜ್ಯ ಸೇವಾದಳ ಮಹಿಳಾ ಉಪಾದ್ಯಕ್ಷರಾದ ಪದ್ಮ ಡೇವಿಡ್,ರಾಜ್ಯ ಸೇವಾದಳ ಕಾರ್ಯದಶರ್ಿಗಳಾದ ಜಾಕೀರ್ ಹುಸೇನ್ ಕಿಲ್ಲೆದಾರ್, ಜಿಲ್ಲಾ ಸೇವಾದಳ ಅದ್ಯಕ್ಷರಾದ ನಿಂಗರಾಜ್ ಕಾಳೆ,ಪಕ್ಷದ ಹಿರಿಯರಾದ ದ್ಯಾಮಣ್ಣ ಚಿಲವಾಡ್ಗಿ, ಮತ್ತು ಎಲ್ಲಾ ಬ್ಲಾಕ್ ಕಾಂಗ್ರೆಸ್ ಅದ್ಯಕ್ಷರು ಹಾಗೂ ಪಕ್ಷದ ಕಾರ್ಯಕರ್ತರು ಭಾಗವಹಿಸಿದ್ದರು.