ಮುಂಬೈ, ನ 26 (ಯುಎನ್ಐ) ಮುಂಬೈ ಷೇರುಪೇಟೆ ಸೂಚ್ಯಂಕ ಸೆನ್ಸೆಕ್ಸ್ ಮಂಗಳವಾರದ ಆರಂಭಿಕ ವಹಿವಾಟಿನಲ್ಲಿ 133 ಅಂಕ ಏರಿಕೆ ಕಂಡು 41 ಸಾವಿರದ ಗಡಿ ದಾಟಿದೆ. ಸೆನ್ಸೆಕ್ಸ್ 41,022.85 ರಲ್ಲಿ ವಹಿವಾಟು ಆರಂಭಿಸಿದರೆ, ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ ನಿಫ್ಟಿ ಸಹ 31 ಅಂಕ ಏರಿಕೆ ಕಂಡು 12,110.20 ಯಲ್ಲಿತ್ತು. ಸೆನ್ಸೆಕ್ಸ್ ಅಂತರ ದಿನದ ಗರಿಷ್ಠ ಮತ್ತು ಕನಿಷ್ಠ ಮೌಲ್ಯ ಕ್ರಮವಾಗಿ 41,120.28 ಮತ್ತು 40,888.18. ನಿಫ್ಟಿ ಅಂತರ ದಿನದ ಗರಿಷ್ಠ ಮತ್ತು ಕನಿಷ್ಠ ಮೌಲ್ಯ 12,132.45 ಮತ್ತು 12,063. ಯೆಸ್ ಬ್ಯಾಂಕ್ ಶೇ 4.16 ರಷ್ಟು ಏರಿಕೆ ಕಂಡು 66.35 ರೂ, ಒ ಎನ್ ಜಿ ಸಿ ಶೇ 1.3 ರಷ್ಟು ಏರಿಕೆ ಕಂಡು 132.60 ರೂ, ಐ ಸಿ ಐ ಸಿ ಐ ಬ್ಯಾಂಕ್ ಶೇ 1.02 ರಷ್ಟು ಹೆಚ್ಚಳ ಕಂಡು 503.15 ರೂ ಮತ್ತು ಐ ಟಿ ಸಿ ಶೇ 0.79 ರಷ್ಟು ಏರಿಕೆಯಾಗಿ 249.75 ರೂ ನಷ್ಟಿತ್ತು. ಭಾತರ್ಿ ಏಟರ್ೆಲ್ ಶೇ 3.42 ಇಳಿಕೆಯಾಗಿ 435.85 ರೂ, ಟಾಟಾ ಮೋಟಾಸರ್್ ಡಿವಿಆರ್ ಶೇ 1.71 ರಷ್ಟು ಇಳಿಕೆ ಕಂಡು 74.75 ರೂ, ಪವರ್ ಗ್ರಿಡ್ ಶೇ 1.46 ರಷ್ಟು ಇಳಿಕೆಯಾಗಿ 195.90 ರೂ ಮತ್ತು ಟಾಟಾ ಮೋಟಾಸರ್್ ಶೇ 0.90 ರಷ್ಟು ಇಳಿಕೆಯಾಗಿ 164.55 ರೂ ನಷ್ಟಿದೆ.
ಡಾಲರ್ ಎದುರು ರೂಪಾಯಿ ಮೌಲ್ಯ ಒಂದು ಪೈಸೆ ಇಳಿಕೆ ಮುಂಬೈ, ನ 26 (ಯುಎನ್ಐ) ಅಮೆರಿಕ ಡಾಲರ್ ಎದುರು ರೂಪಾಯಿ ಮೌಲ್ಯ ಮಂಗಳವಾರದ ಆರಂಭಿಕ ವಹಿವಾಟಿನಲ್ಲಿ ಒಂದು ಪೈಸೆ ಇಳಿಕೆ ಕಂಡು ಒಂದು ಡಾಲರ್ ಬೆಲೆ 71 ರೂಪಾಯಿ 74 ಪೈಸೆಯಷ್ಟಿತ್ತು. ಆರಂಭಿಕ ವಹಿವಾಟಿನಲ್ಲಿ ಅತ್ಯಲ್ಪ ಬದಲಾವಣೆಯಾಗಿದ್ದು ರೂಪಾಯಿ ಮೌಲ್ಯದ ಅಂತರ ದಿನಗ ಗರಿಷ್ಠ ಮತ್ತು ಕನಿಷ್ಠ ಮೌಲ್ಯ ಕ್ರಮವಾಗಿ 71.69 ರೂ ಮತ್ತು 71.60 ರೂ ನಷ್ಟಿದೆ. ಇತರ ಕರೆನ್ಸಿಗಳ ಎದುರು ಡಾಲರ್ ಮೌಲ್ಯ ಬಲಗೊಂಡ ಹಿನ್ನೆಲೆಯಲ್ಲಿ ರೂಪಾಯಿ ಮೌಲ್ಯ ಕುಸಿದಿದೆ.