ಧಾರವಾಡ 07: ನಗರದಲ್ಲಿ ಜರುಗಲಿರುವ ಅಖಿಲ ಭಾರತ 84ನೆಯ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಪಾಲ್ಗೊಳ್ಳುವ ನೋಂದಾಯಿತ ಪ್ರತಿನಿಧಿಗಳಿಗೆ ಮಾಹಿತಿ ಒದಗಿಸುವ 75 ನೋಂದಣಿ ಮಾಹಿತಿ ಕೌಂಟರ್ಗಳನ್ನು 2019ರ ಜನವರಿ 3ರಂದು ಸಂಜೆ 4 ಗಂಟೆಯಿಂದಲೇ ಇಲ್ಲಿಯ ಕೃಷಿ ವಿಶ್ವವಿದ್ಯಾಲಯದ ಆವರಣದಲ್ಲಿ ಕಾಯರ್ಾರಂಭಗೊಳಿಸಲು ತೀಮರ್ಾನಿಸಲಾಗಿದೆ.
ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಉಪ ಮೇಯರ್ ಮೇನಕಾ ಹುರಳಿ ಅಧ್ಯಕ್ಷತೆಯಲ್ಲಿ ಗುರುವಾರ ಸಭೆ ಸೇರಿದ್ದ ಕನ್ನಡ ಸಾಹಿತ್ಯ ಸಮ್ಮೇಳನದ ನೋಂದಣಿ ಸಮಿತಿ ಸಭೆಯಲ್ಲಿ ಈ ತೀಮರ್ಾನ ಕೈಕೊಳ್ಳಲಾಯಿತು. ದೂರದ ಜಿಲ್ಲೆಗಳಿಂದ ಸಾಹಿತ್ಯ ಸಮ್ಮೇಳನಕ್ಕೆ ಆಗಮಿಸುವ ಪ್ರತಿನಿಧಿಗಳ ಅನುಕೂಲಕ್ಕಾಗಿ, ಜೊತೆಗೆ ಸಮ್ಮೇಳನ ಆರಂಭಗೊಳ್ಳುವ ದಿನ ಜನವರಿ 4 ರಂದು ಪ್ರತಿನಿಧಿಗಳಿಗೆ ಸುಲಭವಾಗಿ ಕಿಟ್ಗಳ ವಿತರಣೆ ನಡೆಯಬೇಕೆನ್ನುವ ಉದ್ದೇಶದಿಂದ ಸಭೆಯಲ್ಲಿ ವ್ಯಕ್ತವಾದ ಅಭಿಪ್ರಾಯದಂತೆ ಈ ತೀಮರ್ಾನ ಕೈಕೊಳ್ಳಲಾಗಿದೆ.
ದರಪಟ್ಟಿ ಅಂತಿಮ : ಸಾಹಿತ್ಯ ಸಮ್ಮೇಳನದ ನೆನಪಿನಲ್ಲಿ ನೋಂದಾಯಿತ ಪ್ರತಿನಿಧಿಗಳಿಗೆ ನೀಡಲು ಉದ್ದೇಶಿಸಿರುವ ಉತ್ತಮ ದಜರ್ೆಯ ಬ್ಯಾಗ್ಗಳ ಖರೀದಿಗೆ ಸಂಬಂಧಿಸಿದಂತೆ ಪತ್ರಿಕೆಗಳಲ್ಲಿ ಜಾಹೀರಾತು ನೀಡಿ ಆಹ್ವಾನಿಸಿದ್ದ ಶೀಲ್ಡ ಮಾಡಿದ್ದ ದರಪಟ್ಟಿಗಳನ್ನು ಇದೇ ಸಭೆಯಲ್ಲಿ ತೆರೆದು ಬ್ಯಾಗ್ಗಳ ದರಪಟ್ಟಿಯನ್ನು ಅಂತಿಮಗೊಳಿಸಲಾಯಿತು. ಪತ್ರಿಕಾ ಜಾಹೀರಾತಿಗೆ ಅನುಗುಣವಾಗಿ ಬ್ಯಾಗ್ಗಳ ಪೂರೈಕೆ ಮಾಡುವ ಅಂಗಡಿ ಮಾಲಿಕರು ಕಳಿಸಿದ್ದ ಬ್ಯಾಗ್ಗಳ ಮಾದರಿಗಳನ್ನೂ ಸಹ ಸಭೆ ಪರೀಕ್ಷಿಸಿ ಬ್ಯಾಗ್ಗಳನ್ನು ಅಂತಿಮಗೊಳಿಸಿತು.
ನೋಂದಣಿ ಕೌಂಟರ್ಗಳ ಜಾಗೆ, ಕೌಂಟರ್ಗಳ ಸೈಜು, ತಾಲೂಕು ಹಾಗೂ ಜಿಲ್ಲೆಗಳ ಪ್ರಕಾರ ನೋಂದಣಿ ಕೌಂಟರ್ಗಳ ಸೂಚನಾ ಫಲಕಗಳ ಅಳವಡಿಕೆ, ನೋಂದಣಿ ಕೌಂಟರ್ಗಳ ಹತ್ತಿರದಲ್ಲಿಯೇ ತಾತ್ಕಾಲಿಕ ಶೌಚಾಲಯ ವ್ಯವಸ್ಥೆಯನ್ನು ಕಲ್ಪಿಸುವುದು, ಬಲ್ಕ್ ಎಸ್.ಎಂ.ಎಸ್. ಮೂಲಕ ನೋಂದಾಯಿತ ಎಲ್ಲ ಪ್ರತಿನಿಧಿಗಳಿಗೆ ಸಾಕಷ್ಟು ಪೂರ್ವದಲ್ಲಿಯೇ ಸಮ್ಮೇಳನದ ವಿವರಗಳ ಹಾಗೂ ಅವರಿಗೆ ಮಾಡಲಾದ ವಸತಿ ವ್ಯವಸ್ಥೆಯ ಲೋಕೇಶನ್ಗಳನ್ನು ತಿಳಿಸುವುದೂ ಸೇರಿದಂತೆ ಹಲವಾರು ಪ್ರಮುಖ ವಿಚಾರಗಳನ್ನು ಸಭೆ ಕೂಲಂಕುಷವಾಗಿ ಚಚರ್ಿಸಿತು.
ಸಮಿತಿಯ ಕಾಯಾಧ್ಯಕ್ಷ ಶಿಕ್ಷಣ ಇಲಾಖೆಯ ಅಪರ ಆಯುಕ್ತ ಮೇಜರ್ ಸಿದ್ದಲಿಂಗಯ್ಯ ಹಿರೇಮಠ, ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಸದಸ್ಯರಾದ ಲಕ್ಷ್ಮಿಬಾಯಿ ಬಿಜವಾಡಕರ ಹಾಗೂ ನಾರಾಯಣ ಜರತಾರಘರ, ಸಮಿತಿ ಸದಸ್ಯರಾದ ಆಶಾ ಜಮಖಂಡಿ, ದೀಪಕ ಮಡಿವಾಳರ, ಡಾ.ಎಚ್.ವ್ಹಿ.ಬೆಳಗಲಿ, ನಾಗಪ್ಪ ದಾಂಡೋಲಿ, ಮೃತ್ಯುಂಜಯ ಕುಂದಗೋಳ, ಎಂ.ಬಿ.ಕಟ್ಟಿ, ಡಾ. ಬಿ.ಜಿ.ಬಿರಾದಾರ, ಅಜರ್ುನ ಕಂಬೋಗಿ, ಸಿ.ಎಂ. ಚನಬಸಪ್ಪ, ಹನುಮಂತಪ್ಪ ಈರಾಪುರೆ, ಅಶೋಕಕುಮಾರ ಸಿಂದಗಿ, ಮಹಾದೇವಿ ಮಾಡಲಗೇರಿ, ವಿಜಯಲಕ್ಷ್ಮಿ ಹಂಚಿನಾಳ, ಶಾಂತಾ ಮೀಸಿ, ಭಾರತಿ ಮನ್ನಿಕೇರಿ, ಶ್ರೀಧರ ಪಾಟೀಲ, ಎಂ.ಜಿ. ಜಾಡಗೌಡರ, ಸಿ.ಎಂ. ಕೆಂಗಾರ, ಎಸ್.ಸಿ. ಶಾನವಾಡ, ಎಸ್.ಜಿ. ಬೆಟಗೇರಿ, ಗುರುಮೂತರ್ಿ ಯರಗಂಬಳಿಮಠ, ಎನ್.ಎನ್. ಮುಲ್ಲಾ, ಗುರು ಬಿದರಿ, ಮಹಾದೇವಿ ದೊಡಮನಿ, ಸುನಿತಾ ಮಣ್ಣೆನ್ನವರ ಸಭೆಯಲ್ಲಿ ಪಾಲ್ಗೊಂಡು ಅಭಿಪ್ರಾಯ ವ್ಯಕ್ತಪಡಿಸಿದರು.