ರಾಜ್ಯೋತ್ಸವ ಕೇವಲ ನವೆಂಬರಗೆ ಸೀಮಿತ ಬೇಡ ಕನ್ನಡಾಂಬೆಯ ಪೂಜೆ ನಿತ್ಯ ನಡೆಯಲಿ

ಗದಗ 04: ಕನ್ನಡ ಸಾಹಿತಿಗಳು, ಸಾಹಿತ್ಯಾಸಕ್ತರು ನವೆಂಬರ ತಿಂಗಳಿನಲ್ಲಿ ಮಾತ್ರವೇ ಕನ್ನಡಮ್ಮನನ್ನು ನೆನೆಸಿಕೊಳ್ಳುವಂತಹ ಅನಿಷ್ಟ ಪದ್ಧತಿಗೆ ಕಡಿವಾಣ ಹಾಕುವಂತೆ ಹಿರಿಯ ಸಾಹಿತಿ, ಚಿಂತಕ ಪ್ರೊ.ರವೀಂದ್ರ ಕೊಪ್ಪರ ಕರೆ ನೀಡಿದರು.

 ಇಲ್ಲಿಯ ಹಾಳದಿಬ್ಬ ಓಣಿಯ  ನಾಡಕವಿ ಹುಯೀಲಗೋಳ ನಾರಾಯಣರಾವ ಅಭಿಮಾನಿ ಬಳಗದಾಶ್ರಯದಲ್ಲಿ ಜರುಗಿದ ಕನರ್ಾಟಕ ರಾಜ್ಯೋತ್ಸವ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು.

   ಪ್ರಸ್ತುತ ಕೆಲವರು ರಾಜ್ಯೋತ್ವದ ತಿಂಗಳಿನಲ್ಲಿ ಮಾತ್ರ ಕನ್ನಡ ಭಾಷೆ, ನೆಲ, ಜಲದ ಬಗ್ಗೆ ಮಾತನಾಡುತ್ತಾರೆ. ಉಳಿದ 11  ತಿಂಗಳು ನಿದ್ದೆಯಲ್ಲಿದ್ದವರಂತೆ ಮಾಡುತ್ತ ಕನ್ನಡಾಂಬೆಗೆ ಅವಮಾನ ಮಾಡುತ್ತಿದ್ದಾರೆ. ಇದು ಸರಿಯಲ್ಲ. ಕನ್ನಡಾಂಬೆಯ ಸೇವೆ ವರ್ಷದ 365 ದಿನವೂ ನಡೆಯಬೇಕೆಂದು ಕರೆ 

ನೀಡಿದರು.

ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿಯೇ ಕನ್ನಡ ಭಾಷಿಕರು ಅಲ್ಪಸಂಖ್ಯಾತರಾಗಿದ್ದಾರೆ. ಕನ್ನಡದಲ್ಲಿ ಮಾತನಾಡಿದರೇ ಬೆಂಗಳೂರಿನಲ್ಲಿ ಯಾವದೇ ಕೆಲಸ ಕಾರ್ಯಗಳಾಗುವದಿಲ್ಲವೆಂಬಂತಹ     ಪರಿಸ್ಥಿತಿ  ನಿಮರ್ಾಣವಾಗಿದೆ. ಇದು ಅತ್ಯಂತ ಅಸಹ್ಯಕರ ಸಂಗತಿಯಾಗಿದೆ. ಸರಕಾರ ಈ ದಿಶೆಯಲ್ಲಿ ಬೆಂಗಳೂರಿನಲ್ಲಿ ಪ್ರತಿಯೊಬ್ಬರೂ ಕಡ್ಡಾಯವಾಗಿ ಕನ್ನಡದಲ್ಲಿಯೇ ಮಾತನಾಡುವಂತೆ ಆದೇಶಿಸಬೇಕು.  ಮುಖ್ಯಮಂತ್ರಿಗಳು ಸರಕಾರದ ಕಡತಗಳನ್ನು ಕನ್ನಡದಲ್ಲಿಯೇ ನಿರ್ವಹಿಸುವಂತೆ ಸೂಚಿಸಿದ್ದಾರೆ. ಇದು ಅತ್ಯಂತ ಸ್ವಾಗತಾರ್ಹ ಸಂಗತಿಯಾಗಿದೆ. ಆದರೆ ಮುಖ್ಯಮಂತ್ರಿಗಳ ಕಳಕಳಿಗೆ ಐಎಎಸ್ ಅಧಿಕಾರಿಗಳು ಸ್ಪಂದಿಸಿ ಕಾರ್ಯನಿರ್ವಹಿಸುವದು ಇಂದಿನ ಅಗತ್ಯವಾಗಿದೆಯೆಂದು ಪ್ರತಿಪಾದಿಸಿದರು.

ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಅಶೋಕ ಮಂದಾಲಿ ಮಾತನಾಡಿ ರಾಜ್ಯ ಸರಕಾರ ಆಡಳಿತದಲ್ಲಿ ಕನ್ನಡ ಭಾಷೆಯನ್ನು ಸಂಪೂರ್ಣವಾಗಿ ಅನುಷ್ಟಾನಕ್ಕೆ ತರಲು ಬದ್ಧವಾಗಿದೆ. ಸರಕಾರದ ಈ ಆಸಕ್ತಿಗೆ ಅಧಿಕಾರಿಗಳು ಮನಸ್ಸು ಮಾಡುವದು ಅಗತ್ಯವಾಗಿದೆ. ಸರಕಾರಿ ಅಧಿಕಾರಿಗಳು ಅಸಡ್ಡೆ ತೋರಿದರೇ ಸರಕಾರದ ಯಾವದೇ ಯೋಜನೆಗಳಾಗಲಿ ಅಥವಾ ಆದೇಶಗಳಾಗಲಿ ಜಾರಿಗೆ ಬರುವದು ಕಷ್ಟಕರವಾಗುತ್ತದೆ. ಈ ದಿಶೆಯಲ್ಲಿ ರಾಜ್ಯದಲ್ಲಿನ ಸರಕಾರಿ ಅಧಿಕಾರಿಗಳು ತಮ್ಮ ಮನೋಭಾವನೆಯನ್ನು ಬದಲಸಿಕೊಳ್ಳುವಂತೆ ಸಲಹೆ ನೀಡಿದರು.

ಸಾಮಾಜಿಕ ಕಾರ್ಯಕರ್ತ ಮುತ್ತಣ್ಣ ಭರಡಿ ಮಾತನಾಡಿ ಹುಯೀಲಗೋಳ ನಾರಾಯಣರಾಯರು ರಚಿಸಿದ ಉದಯವಾಗಲಿ ಚಲುವ ಕನ್ನಡ ನಾಡು ಗೀತೆಯನ್ನು ರಾಜ್ಯದ ಅಧೀಕೃತ ನಾಡಗೀತೆಯನ್ನಾಗಿಸುವಂತೆ ಆಗ್ರಹಿಸಿದರು.

ಮುಖ್ಯ   ಅತಿಥಿಗಳಾಗಿ ನಗರ ಯೋಜನಾ ಪ್ರಾಧಿಕಾರದ ಮಾಜಿ ಅಧ್ಯಕ್ಷ ಎಚ್.ವೈ. ದೇಸಾಯಿಗೌಡ್ರ, ಬಸವರಾಜ ಕಡಮನಿ, ಹುಯೀಲಗೋಳ  ನಾರಾಯಣರಾಯರ ಮೊಮ್ಮಗ ಡಾ.ವಾಸುದೇವರಾವ ಹುಯೀಲಗೋಳ, ನಗರಸಭೆಯ ಮಾಜಿ ಅಧ್ಯಕ್ಷೆ ರುದ್ರಮ್ಮ ಕೆರಕಲಮಟ್ಟಿ, ಸಾಹಿತಿ ಬಾಹುಬಲಿ ಜೈನರ, ಪ್ರೇಮಾಬಾಯಿ ರೇವಣಕಿ, ಬಿ.ಬಿ.ಕುಂದಗೋಳ, ಬಿ.ಬಿ.ಹುಡೇದ, ಎಂ.ಎಲ್.ಅಯ್ಯನಗೌಡರ, ಯುವ ಕಾಂಗ್ರೆಸ್ ಜಿಲ್ಲಾ ಉಪಾಧ್ಯಕ್ಷೆ ಶೃತಿ ಕಮತರ, ಸಂತೋಷ ಶಿದ್ಲಿಂಗ, ಮಹಾಂತೇಶ ಮಡಿವಾಳರ, ವಿನಯ ಹುಯೀಲಗೋಳ, ಪರಶುರಾಂ ಆಲೂರ,ನಾರಾಯಣ ಪುಣೇಕರ, ಅಶೋಕ ಪವಾರ,ವಿನೋದ ಹುಯೀಲಗೋಳ ಮುಂತಾದವರು ಪ್ರಾಸ್ತಾವಿಕವಾಗಿ ಮಾತನಾಡಿದರು.

ಮುತ್ತಣ್ಣ ಭರಡಿ ಸ್ವಾಗತಿಸಿದರು. ವಿನಯ ಹುಯೀಳಗೋಳ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.