ಲೋಕದರ್ಶನ ವರದಿ
ಬೆಳಗಾವಿ 26: ಬೆಳಗಾವಿ ತಾಲೂಕಿನ ಹೊಸವಂಟಮುರಿ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ಬರುವ ಗ್ರಾಮೀಣ ವಸತಿ ಮಾಧ್ಯಮಿಕ ಶಾಲೆ ಹೊಸವಂಟಮುರಿಯಲ್ಲಿ ನವ್ಯದಿಶಾ ಸುಗ್ರಾಮ ಯೊಜನೆ ಅಡಿಯಲ್ಲಿ, ಗ್ರಾಮೀಣ ಕೂಟ ಹಾಗೂ ಗ್ರಾಮೀಣ ವಸತಿ ಮಾಧ್ಯಮಿಕ ಶಾಲೆ ಇವುಗಳ ಸಂಯುಕ್ತ ಆಶ್ರಯದಲ್ಲಿ 10 ನೇ ತರಗತಿ ಮಕ್ಕಳಿಗೆ " ಚೇತನ" ಮನೋ ವಿಕಾಸ ಹಾಗೂ ಪರೀಕ್ಷಾ ಸಿದ್ದತೆ ಕುರಿತು ಮೂರು ದಿನಗಳ ಕಾರ್ಯಗಾರವನ್ನು ದಿ.15ರಿಂದ 17ರವರೆಗೆ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು. ತರಬೇತಿಯು ಮಕ್ಕಳಲ್ಲಿ ಆತ್ಮವಿಶ್ವಾಸ ತುಂಬುವುದು ಮತ್ತು ಆಂತರಿಕ ಪ್ರೇರಣೆಯನ್ನು ನೀಡುವುದು, ಮಕ್ಕಳಲ್ಲಿ ಆಳವಾದ ಸ್ವ-ಅರಿವುವನ್ನು ಮೂಡಿಸುವುದು. 10 ನೇ ತರಗತಿಯ ಬಗ್ಗೆ ಅವರ ಗ್ರಹಿಕೆಯನ್ನು ಬದಲಿಸುವುದು ಮತ್ತು ಅದರ ಅರ್ಥ ಮೂಡಿಸುವುದು. ವಿದ್ಯಾಥರ್ಿಗಳಲ್ಲಿ ಅಂತರ್ ವ್ಯಕ್ತಿ ಕೌಶಲ್ಯ, ತಂಡ ಕಾರ್ಯದ ಕೌಶಲ್ಯ, ಗುರಿ ನಿಧರ್ಾರದ ಪರಿಕಲ್ಪನೆ, ಅಧ್ಯಯನ ಕೌಶಲ್ಯ ವಿದ್ಯಾಥರ್ಿಗಲ್ಲಿ ಒತ್ತಡವನ್ನು ರಚನಾತ್ಮಕವಾಗಿ ಗ್ರಹಿಸುವಂತೆ ಸಕಾರತ್ಮಕ ಮನೋಭಾವ ರೂಪಿಸುವುದು & ಒತ್ತಡವನ್ನು ನಿರ್ವಹಿಸುವ ವಿಧಾನವನ್ನು ಕಲಿಸುವುದು ವಿದ್ಯಾಥರ್ಿಗಳಿಗೆ ಪರಿಣಾಮಕಾರಿಯಾಗಿ ಸಮಯವನ್ನು ಯೋಜಿಸುವುದು ಮತ್ತು ಬಳಸಿಕೊಳ್ಳುವುದನ್ನು ಮನದಟ್ಟ ಮೂಡಿಸುವುದು ಹಾಗೂ ವಿದ್ಯಾಥರ್ಿಗಳಲ್ಲಿನ ಪರೀಕ್ಷೆಯ ಕುರಿತು ಗ್ರಹಿಕೆಯನ್ನು ಸಕಾರತ್ಮಕವಾಗಿ ಪರಿವತರ್ಿಸುವುದು.
ಪರೀಕ್ಷಾ ಭೀತಿಯನ್ನು ಸಮರ್ಥವಾಗಿ ನಿರ್ವಹಿಸುವಂತೆ ತರಬೇತಿಗೊಳಿಸುವುದು. ವಿದ್ಯಾಥರ್ಿಗಳಲ್ಲಿನ ವಿಮಶರ್ಾತ್ಮಕ ಆಲೋಚನೆಯನ್ನು ಉತ್ತೇಜಿಸಿ ಮನೋವಿಕಾಸಕ್ಕೆ ಪುಷ್ಠಿ ನೀಡುವ ಚಟುವಟಿಕೆಗಳನ್ನು ಈ ಒಂದು ಮೂರು ದಿನ ಶಿಬಿರ ಒಳಗೊಂಡಿತ್ತು. ಈ ಒಂದು ಕಾರ್ಯಕ್ರಮವನ್ನು ಬೆಳಗಾವಿ ಸುಗ್ರಾಮ ತಂಡ ಸಂಘಟಿಸಿತ್ತು. ಮಂಜುನಾಥ ಬಿ.ಎಸ್.ಸು.ಶಿಕ್ಷಣ ಸಂಯೋಜಕರು ನವ್ಯದಿಶಾ ಬೆಂಗಳೂರು ಮಹಾದೇವ ಪಾಟೀಲ ಸುಗ್ರಾಮ ವ್ಯವಸ್ಥಾಪಕರು ಬೆಳಗಾವಿ ರಾಜಶೇಖರ ಮಠ ಅಭಿವೃದ್ಧಿ ಅಧಿಕಾರಿಗಳು ಸುಗ್ರಾಮ ಯೋಜನೆ ಬೆಳಗಾವಿ ಶಿವಕುಮಾರ ಹಲ್ಯಾಳಿ ಅಭಿವೃದ್ಧಿ ಅಧಿಕಾರಿಗಳು ಸುಗ್ರಾಮ ಯೋಜನೆ ಬೆಳಗಾವಿ ಶಾಲೆಯ ಆಡಳಿತ ಮಂಡಳಿ, ಶಾಲೆಯ ಶಿಕ್ಷಕ ವೃಂದ ಹಾಗೂ ಮುದ್ದು ವಿದ್ಯಾಥರ್ಿಬಳಗ ಈ ಮೂರು ದಿನದ ಶಿಬಿರಕ್ಕೆ ಸಾಕ್ಷಿಯಾದರು.