ಯರಗಟ್ಟಿ: ದೇಶದ ಸದೃಡ ಪ್ರಜೆಗಳ ನಿರ್ಮಾ ಣವೇ ಎನ್ಸಿಸಿ ಗುರಿ

ಲೋಕದರ್ಶನ ವರದಿ 

ಯರಗಟ್ಟಿ 02: ವಿಧ್ಯಾರ್ಥಿಗಳಲ್ಲಿ ಆರೋಗ್ಯ, ಶಿಸ್ತು, ಸಮಯ ಪ್ರಜ್ಞೆ ಹಾಗೂ ದೇಶದ ಸದೃಡ ನಾಗರಿಕರನ್ನಾಗಿ ಮಾಡುವುದರ ಜೊತೆಗೆ ದೇಶದ ಸದೃಡ ಪ್ರಜೆಗಳನಿರ್ಮಾಣವೇ ಎನ್ಸಿಸಿ ಟ್ರೂಪ್ಗಳ ಗುರಿ ಎಂದು ಎನ್ಸಿಸಿ ಟ್ರೂಪ್ ಕಮಾಂಡೋ ಎನ್.ಎಸ್.ಕಾಂಬ್ಳೆ ಹೇಳಿದರು.

ಇಲ್ಲಿನ ಬಸವೇಶ್ವರ ಪ್ರೌಡ ಶಾಲೆಯಲ್ಲಿ ನಡೆದ ಎನ್ಸಿಸಿ ದಿನಾಚರಣೆಯಲ್ಲಿ ಮಾತನಾಡುತ್ತಾ ಇತ್ತೀಚೆಗೆ ಬೆಳಗಾವಿಯಲ್ಲಿ ನಡೆದ ವ್ಯಕ್ತಿತ್ವ ವಿಕಾಸನದ ಕ್ಯಾಂಪ್ನಲ್ಲಿ ನ್ಯೇವಿ, ಆಮರ್ಿ, ಏರ್ವಿಂಗ ವಲಯದಲ್ಲಿ ರಾಜ್ಯದ ಎಂಟನೂರು ಎನ್ಸಿಸಿ ವಿದ್ಯಾಥರ್ಿಗಳಲ್ಲಿ ಡ್ರಿಲ್ ಮಾರ್ಚನಲ್ಲಿ ಬಸವೇಶ್ವರ ಪ್ರೌಡ ಶಾಲಾ ಎನ್ಸಿಸಿ ಕ್ಯಾಡೇಟ್ಗಳು ಪ್ರಥಮ ಸ್ಥಾನ ಪಡೆದಿದ್ದು ನಮ್ಮ ಶಾಲೆಗೆ ಹೆಮ್ಮೆ ತಂದಿದೆ ಎಂದರು.

ಶಿಕ್ಷಣ ರತ್ನ ಪ್ರಶಸ್ತಿ ಪುರಸ್ಕೃತ ಶಿಕ್ಷಕ  ಎಸ್.ಎನ್.ಯಮನಯ್ಕನವರ, ಅತ್ಯುತ್ತಮ ಶಿಕ್ಷಕಿ ಪ್ರಶಸ್ತಿ ಪಡೆದ ಶಿಕ್ಷಕಿ ಬಿ.ಐ.ಹಲಗಲಿ, ಜಿಲ್ಲಾಮಟ್ಟದ ಉತ್ತಮ ವಿದ್ಯಾಥರ್ಿನಿಯರ ವಸತಿ ನಿಲಯ ಪ್ರಶಸ್ತಿ ಪುರಸ್ಕೃತ ನಿಲಯ ಪಾಲಕಿ ಆಶಾ ಪರಿಟ್ ಅವರನ್ನು ಸನ್ಮಾನಿಸಲಾಯಿತು. ಎನ್ಸಿಸಿ ಕೆಡೇಟ್ಗಳಿಂದ ಪರೇಡ್ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.

ಮುಖ್ಯ ಶಿಕ್ಷಕ ಬಿ.ಎಸ್.ಆಲದಕಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು, ಬಸವೇಶ್ವರ ಆಂಗ್ಲ ಮಾದ್ಯಮ ಶಾಲಾ ಮುಖ್ಯ ಶಿಕ್ಷಕಿ ದೀಪಾ ಕಾದ್ರೋಳಿ, ಕೆ.ಬಿ.ದಾಸರ, ಎಲ್.ಎಚ್.ಹೊನ್ನಪ್ಪಗೋಳ, ಪಿ.ವ್ಹಿ.ಶಿಂದೋಳಿ, ಎಮ್.ಎಸ್.ಗುಗ್ಗರನಟ್ಟಿ, ಎಮ್.ಎಮ್.ತೊರಗಲ್, ವ್ಹಿ.ಆರ್.ಅಂತಾಪೂರ, ಡಿ.ಎಮ್.ಪಾಟೀಲ, ಜಿ.ಐ.ಡಮ್ಮಣಗಿ, ಎಮ್.ವ್ಹಿ.ಸೊನ್ನದ, ಎನ್ಸಿಸಿ ಕ್ಯಾಡೇಟ್ಗಳು ಹಾಗೂ ವಿದ್ಯಾಥರ್ಿಗಳು ಉಪಸ್ಥಿತರಿದ್ದರು