ಲಖನೌ 6 (ಯುಎನ್): ಉದ್ಯೋಗ ಸೃಷ್ಟಿ ಮತ್ತು ಅಭಿವೃದ್ಧಿ ಕ್ಷೇತ್ರಗಳಲ್ಲಿ ಬಿಜೆಪಿ ಸರಕಾರ ಸಂಪೂರ್ಣ ವಿಫಲವಾಗಿದೆ ಎಂದು ಆರೋಪಿಸಿರುವ ಬಹುಜನ ಸಮಾಜ ಪಕ್ಷ (ಬಿಎಸ್ಪಿ) ವರಿಷ್ಠೆ ಮಾಯಾವತಿ, ಜನರು ಮಾತ್ರ ಸರಕಾರ ವನ್ನು ಕ್ಷಮಿಸಬೇಕಾಗಿದೆ ಎಂದು ಹೇಳಿದ್ದಾರೆ.
'ನಿರುದ್ಯೋಗ ಪ್ರಮಾಣ ದಾಖಲೆಯ ಶೇ. 6.1ಕ್ಕೆ ಏರಿದೆ ಎಂದು ಕಾಮರ್ಿಕ ಇಲಾಖೆಯೇ ಒಪ್ಪಿಕೊಂಡಿದೆ. ಇದು 45 ವರ್ಷಗಳಲ್ಲಿ ಅತ್ಯಧಿಕವಾಗಿದೆ. ಆದರೆ ಈಗ ಜನರು ಮಾತ್ರ ಸಕರ್ಾರವನ್ನು ಕ್ಷಮಿಸಬೇಕಾಗಿದೆ' ಎಂದು ಅವರು ಹೇಳಿದ್ದಾರೆ.
ಜಿಡಿಪಿ ಶೇ. 5.8 ಕ್ಕೆ ಕುಸಿದಿದೆ. ಇದು ಸಣ್ಣ ಕೈಗಾರಿಕೆಗಳು ಮತ್ತು ಕೃಷಿ ಕ್ಷೇತ್ರದ ಮೇಲೆ ಪ್ರತಿಕೂಲವಾಗಿ ಪರಿಣಾಮ ಬೀರಿದೆ. ಸಾರ್ವಜನಿಕ ಕ್ಷೇಮಾಭಿವೃದ್ಧಿ ಕಾಗದಗಳಲ್ಲಿ ಮಾತ್ರ ಉಳಿದಿದೆ. ವಾಸ್ತವ ಇದಕ್ಕೆ ವಿರುದ್ಧವಾಗಿದೆ ಎಂದು ಮಾಯಾವತಿ ಹೇಳಿದ್ದಾರೆ.
ಕಳೆದ ಲೋಕಸಭಾ ಚುನಾವಣೆಗಳಲ್ಲಿ ಬದ್ಧವೈರಿ ಸಮಾಜವಾದಿ ಪಕ್ಷದೊಂದಿಗೆ ಕೈ ಜೋಡಿಸಿ ಮಹಾಘಟ್ಬಂಧನ್ನಿಂದ ಚುನಾವಣೆ ಎದುರಿಸಿದ್ದ ಬಿಎಸ್ಪಿ, ಚುನಾವಣೆಯಲ್ಲಿ ದಯನೀಯ ಸೋಲಿನ ನಂತರ ಉತ್ತರ ಪ್ರದೇಶದಲ್ಲಿ ನಡೆಯುವ ವಿಧಾನಸಭಾ ಉಪ ಚುನಾವಣೆಯಲ್ಲಿ ಏಕಾಂಗಿಯಾಗಿ ಸ್ಪಧರ್ಿಸುವುದಾಗಿ ಪ್ರಕಟಿಸಿದೆ.