ಮಮತಾ ಸರಕಾರ ಅವಧಿಗೆ ಮುನ್ನವೇ ಪತನಗೊಳ್ಳಲಿದೆ

ಕೊಲ್ಕತ್ತಾ 5 (ಯುಎನ್ಐ): ಮಮತಾ ಬ್ಯಾನರ್ಜಿ  ನೇತೃತ್ವದ  ತೃಣಮೂಲ ಕಾಂಗ್ರೆಸ್  ರಾಜ್ಯಸರಕಾರ  ಅವಧಿಗೂ ಮುನ್ನವೇ  ತನ್ನ ತಪ್ಪುಗಳಿಂದಲೇ  ಪತನಗೊಳ್ಳಲಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ  ಹಾಗೂ ಪಶ್ಚಿಮ ಬಂಗಾಳದ ಪಕ್ಷದ ಉಸ್ತುವಾರಿ ವಿಜಯವರ್ಗಿಯ  ಭವಿಷ್ಯ ನುಡಿದಿದ್ದಾರೆ. 

  ಕೊಲ್ಕತ್ತಾದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ವಿಜಯ ವಗರ್ಿಯ,  ತೃಣಮೂಲ ಕಾಂಗ್ರೆಸ್ ಗೆ ರಾಜ್ಯದ ಜನತೆ  2021 ರವರೆಗೆ ಜನಾದೇಶ ನೀಡಿದ್ದಾರೆ. ಆದರೆ, ಮಮತಾ ಬ್ಯಾನರ್ಜಿ ಸರ್ಕಾರ  ಅಲ್ಲಿವರೆಗೆ  ಮುಂದುವರಿಯುವುದಿಲ್ಲ. ಈ ಕುರಿತು ಈಗ ಏನಾದರೂ ಹೇಳಿದರೆ ಅದು ಅಪ್ರಸ್ತುತವಾಗಲಿದೆ. ನಾವು 2021ರ ಚುನಾವಣೆಗೆ ಸಿದ್ಧವಾಗುತ್ತಿದ್ದೇವೆ. 

  ಈ ಸರ್ಕಾರ  ತನ್ನ ತಪ್ಪುಗಳಿಂದಲೇ  ಪತನಗೊಳ್ಳಲಿದೆ ಎಂದು ಹೇಳಿದರು. ತೃಣಮೂಲ ಕಾಂಗ್ರೆಸ್ ಪಕ್ಷ ನೆಡೆಸುತ್ತಿರುವ  ಮನೆಮನೆ ಪ್ರಚಾರ ಪರಿಣಾಮ ಕುರಿತ ಪ್ರಶ್ನೆಗೆ,  ಮಮತಾ ಬ್ಯಾನರ್ಜಿ  ಮನೆ, ಮನೆ ಪ್ರಚಾರ ನಡೆಸಿದಷ್ಟೂ ಬಿಜೆಪಿಗೆ ಅನುಕೂಲವಾಗಲಿದೆ. 

  ಪಶ್ಚಿಮ ಬಂಗಾಳದಲ್ಲಿ ಹಿಂಸಾಚಾರ ಅಂತ್ಯಗೊಳಿಸಲು ರಾಜ್ಯದ ಜನ ಬಯಸಿದ್ದು, ಬಿಜೆಪಿ ಮಾತ್ರ ಆ ಕೆಲಸ ಮಾಡಲಿದೆ, ಟಿಎಂಸಿ ಆಡಳಿತದಲ್ಲಿ ಹಿಂಸಾಚಾರ ತಾರಕಕ್ಕೇರದೆ ಎಂದು ಅವರು ದೂರಿದರು. ವಿದ್ಯುನ್ಮಾನ ಮತ ಯಂತ್ರಗಳ(ಇವಿಎಂ)  ಲೋಪ ಕುರಿತ ವರದಿಗಳನ್ನು  ತಳ್ಳಿಹಾಕಿದ ಅವರು,  ಮಮತಾ ಬ್ಯಾನರ್ಜಿ  ಇವಿಎಂಗಳ ಮೂಲಕವೇ ಮುಖ್ಯಮಂತ್ರಿಯಾಗಿರುವುದು.  ಆಕೆ ಗೆಲುವು ಸಾಧಿಸಿದಾಗ  ಇವಿಎಂಗಳ ಸರಿಯಾಗಿದ್ದವು, ಲೋಕಸಭೆಯಲ್ಲಿ  ಪಕ್ಷ ಸೋತ ತಕ್ಷಣ,   ಇವಿಎಂಗಳಲ್ಲಿ ಲೋಪ ಕಂಡು ಬಂದಿತೇ ಎಂದು ಪ್ರಶ್ನಿಸಿದರು. 

  ಮುಖ್ಯಮಂತ್ರಿ  ಮಮತಾ ಬ್ಯಾನಜರ್ಿ  ಅವರು ಸವರ್ಾಧಿಕಾರಿಯ  ರೀತಿ  ಆಡಳಿತ ನಡೆಸುತ್ತಿದ್ದು, ಇದರ ಪರಿಣಾಮ ಲೋಕಸಭಾ ಚುನಾವಣೆಯಲ್ಲಿ  ಜನ ಕಪಾಳಮೋಕ್ಷ ಮಾಡಿದ್ದಾರೆ. ಇದೇ ಆಡಳಿತ ಮುಂದುವರಿಸಿದರೆ, ವಿಧಾನಸಭಾ ಚುನಾವಣೆಯಲ್ಲಿ  ಟಿಎಂಸಿ ಶಾಸಕರು ಎಲ್ಲಿದ್ದಾರೆ ಎಂದು ಹುಡುಕಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.