'ಭಗವಂತನು ಜಗದ ನಿಯಮವನ್ನು ಅನುಷ್ಠಾನಕ್ಕೆ ತಂದಿರುತ್ತಾನೆ'

ಲೋಕದರ್ಶನ ವರದಿ

ವಿಜಯಪುರ 26: ತನ್ನ ಪ್ರದೇಶಕ್ಕೆ ರಾಜನಾದವನು ಒಂದು ನಿಯಮವನ್ನು ಜಾರಿಗೆ ತಂದಂತೆ,  ಇಡೀ ಜಗತ್ತಿಗೆ ರಾಜನಾದ ಭಗವಂತನು  ಜಗದ ನಿಯಮವನ್ನು ಅನುಷ್ಠಾನಕ್ಕೆ ತಂದಿರುತ್ತಾನೆ.  ಧಮರ್ಾಚರಣೆಯ ಮೂಲಕ  ಅದನ್ನು  ಪಾಲಿಸುವದು ಸಕಲ ಭಕ್ತರ ಆದ್ಯ ಕರ್ತವ್ಯವಾಗಿದೆ" ಎಂದು ಜಗದ್ಗುರು ಶಂಕರಾಚಾರ್ಯ ಮಹಾಸಂಸ್ಥಾನಂ ದಕ್ಷಿಣಾಮ್ನಾಯ ಶೃಂಗೇರಿ ಶಾರದಾ ಪೀಠದ ಜಗದ್ಗುರು ವಿಧುಶೇಖರಭಾರತೀ ಸನ್ನಿಧಾನಂಗಳವರು  ಕರೆ ನೀಡಿದರು. ಸನಾತನ ಧರ್ಮ ಪ್ರಚಾರಕ್ಕೊಸ್ಕರ ದೇಶಾದ್ಯಂತ ವಿಜಯಯಾತ್ರೆಯನ್ನು  ಹಮ್ಮಿಕೊಂಡಿರುವ ಶ್ರೀಗಳು ನಿನ್ನೆ ಸಂಜೆ ಪ್ರಥಮ ಬಾರಿಗೆ ನಗರಕ್ಕೆ ಆಗಮಿಸಿದ ಸಂದರ್ಭದಲ್ಲಿ ಇಲ್ಲಿಯ ಶಂಕರ ಮಠದಲ್ಲಿ  ಆಶೀರ್ವಚನ ನೀಡಿ ಮಾತನಾಡುತ್ತಿದ್ದರು. ಸನಾತನ ಧರ್ಮವನ್ನು ಎಲ್ಲೆಡೆ ಪಸರಿಸಿದ ಕೀತರ್ಿ ಜಗದ್ಗುರು ಶಂಕರ ಭಗವತ್ಪಾದರಿಗೆ ಸಲ್ಲುತ್ತದೆ ಎಂದು  ಅವರು ಹೇಳಿದರು. ಶ್ರೀಮಠದ  ಅಧ್ಯಕ್ಷ ಪ್ರದೀಪ ಕುಲಕಣರ್ಿ ಸ್ವಾಗತಿಸಿದರು. ಪ್ರಸ್ತಾವಿಕವಾಗಿ ಪ್ರಮೋದ ಅಥಣಿ( ಶಾಸ್ತ್ರಿ) ಮಾತನಾಡಿದರು.  ರಾಜು ಪದಕಿ ಕಾರ್ಯಕ್ರಮ ನಿರೂಪಣೆ ಮಾಡಿದರು.ಸೊಮವಾರ ರೆಂದು  ಸಂಸ್ಥಾನ ಅರ್ಚಕರಿಂದ ಚಂದ್ರಮೌಳೇಶ್ವರ ಪೂಜೆ ನೆರವೇರಿತು. ಬಳಿಕ ಸನ್ನಿಧಾನಂಗಳವರ ದರ್ಶನ, ಮಂತ್ರಾಕ್ಷತೆ ವಿತರಣೆ,  ಭಕ್ತರಿಂದ ಪಾದುಕಾ ಪೂಜಾ, ವಸ್ತ್ರ ಸಮರ್ಪಣೆ,  ಭಿಕ್ಷಾವಂದನೆ ಇತ್ಯಾದಿ ಸೇವೆಗಳು ಜರುಗಿದವು.ಭಕ್ತಾದಿಗಳು  ಸಾಲು ಸಾಲಾಗಿ ನಿಂತು  ಶ್ರೀಗಳ ದರ್ಶನ ಪಡೆದು ತೀರ್ಥ ಸ್ವೀಕರಿಸಿದರು. ಭಕ್ತ ಮಂಡಳಿಯಿಂದ ಸುಶ್ರಾವ್ಯ ದೇವರ ನಾಮ ಕೇಳಿಬರುತ್ತಿತ್ತು. ಮಧ್ಯಾಹ್ನ ಬಾಗಲಕೋಟ ಜಿಲ್ಲಾ ಉಸ್ತುವಾರಿ ಹಾಗೂ ಆರೋಗ್ಯ ಖಾತೆ ಸಚಿವ ಶಿವಾನಂದ ಪಾಟೀಲ  ಶ್ರೀಮಠಕ್ಕೆ ಆಗಮಿಸಿ ಶ್ರೀಗಳ ದರ್ಶನಾಶೀವರ್ಾದ ಪಡೆದರು.ಸಹಸ್ರಾರು ಸಂಖ್ಯೆಯಲ್ಲಿ ಸೇರಿದ್ದ ಭಕ್ತರು ಶ್ರೀಮಠದ ಮುಂಭಾಗದಲ್ಲಿ ಹಾಕಲಾಗಿದ್ದ ಭವ್ಯ ಮಂಟಪದಲ್ಲಿ ಮಹಾ ಪ್ರಸಾದವನ್ನು ಶಾಂತಚಿತ್ತದಿಂದ ಸ್ವೀಕರಿಸಿ ಕೃತಾರ್ಥರಾದರು.   ಶ್ರೀಮಠದ ಆಡಳಿತ ಮಂಡಳಿ ಪದಾಧಿಕಾರಿಗಳಾದ ಪ್ರದೀಪ ವಿ ಕುಲಕಣರ್ಿ, ಗಂಗಾಧರ ದೇಶಪಾಂಡೆ, ಇನಾಮದಾರ, ಅರುಣ ಸೊಲಾಪುರಕರ, ಡಾ. ಶ್ರೈಲೇಶ ದೇಶಪಾಂಡೆ, ರಾಜು ಪದಕಿ, ಸಿದ್ದಾಂತಿ, ಮಹೇಶ ದೇಶಪಾಂಡೆ, ಶಾಮ ಜೋಶಿ( ಜುಮನಾಳಕರ) ಶಂಕರ ಕುಲಕಣರ್ಿ( ಗಿರಗಾವಿ), ವಲ್ಲಭ ಮನಗೂಳಿ,  ಪ್ರಕಾಶ ಅಕ್ಕಲಕೋಟ, ಶ್ರೀನಿವಾಸ ಬೆಟಗೇರಿ,  ವಿಜಯ ಜೋಶಿ, ಶ್ರೀಹರಿ ಗೊಳಸಂಗಿ ಮುಂತಾದವರು ಭಾಗವಹಿಸಿದ್ದರು.