ಮೊರಬ ಗ್ರಾಮದ ಕೃಷಿ ಸಮೃದ್ಧಿ ರೈತ ಉತ್ಪಾದಕರ ಕಂಪನಿಗೆ ಅತ್ಯುತ್ತಮ ರೈತ ಉತ್ಪಾದಕರ ಪ್ರಶಸ್ತಿ ಗರಿ

ಮೊರಬ ಗ್ರಾಮದ ಕೃಷಿ ಸಮೃದ್ಧಿ ರೈತ ಉತ್ಪಾದಕರ ಕಂಪನಿಗೆ  ಅತ್ಯುತ್ತಮ ರೈತ ಉತ್ಪಾದಕರ ಪ್ರಶಸ್ತಿ ಗರಿ The Krishi Samriddhi Farmer Producer Company of Moraba village won the Best Farmer Producer Award

ಧಾರವಾಡ ಫೆ 25: ಕೃಷಿ ಸಮೃದ್ಧಿ ರೈತ ಉತ್ಪಾದಕರ ಕಂಪನಿಗೆ ಅತ್ಯುತ್ತಮ ರೈತ ಉತ್ಪಾದಕರ ಕಂಪನಿ ಪ್ರಶಸ್ತಿ ಗರಿ ಕೃಷಿ ಸಮೃದ್ಧಿ ರೈತ ಉತ್ಪಾದಕರ ಕಂಪನಿ ಲಿಮಿಟೆಡ್ ಮೊರಬ ಇದು ನಬಾರ್ಡ್‌ ಪ್ರಾಯಜಕತ್ವದೊಂದಿಗೆ ಮತ್ತು ಸ್ಕೋಪ್ ಸಂಸ್ಥೆ ಧಾರವಾಡ ಇವರ ತಾಂತ್ರಿಕ ಸಲಹೆದೊಂದಿಗೆ 2019 ರಲ್ಲಿ ಮಂಜೂರಾತಿ ಪಡೆದು 20/07/2020 ರಂದು 2013 ರ ಕಂಪನಿ ಕಾಯ್ದೆ ಪ್ರಕಾರ ನೋಂದಣಿ ಯಾಗಿದೆ.  

ಮೊರಬ ಕೇಂದ್ರವನ್ನಗಿರಿಸಿಕೊಂಡು ಮೊರಬ ಮತ್ತು ಸುತ್ತಮುತ್ತಲಿನ ಗ್ರಾಮಗಳ ಸುಮಾರು 800 ರೈತರು ಸೇರೆ​‍್ಡಯಾಗಿದ್ದು ಸುಮಾರು 40 ರೈತ ಆಸಕ್ತ ಗುಂಪುಗಳಿದ್ದು ಇದರಲ್ಲಿ 5 ಜನ ನಿರ್ದೇಶಕರಿದ್ದು, ಮತ್ತು 5 ಜನ ಪ್ರವರ್ತಕರೊಂದಿಗೆ ಆಡಳಿತ ಮಂಡಳಿಯಾಗಿ ಕಾರ್ಯ ನಿರ್ವಹಿಸುತ್ತಿದೆ.  

ಸರಾಸರಿ ಪ್ರತಿ ವರ್ಷ ಸುಮಾರು 1 ಕೋಟಿಯಷ್ಟು ವ್ಯವಹಾರ ಮಾಡುತ್ತಾ ಬಂದಿರುವ ಈ ರೈತ ಉತ್ಪಾದಕ ಕಂಪನಿಯು, ರೈತರಿಗೆ ಬೇಕಾದ ಕೃಷಿ ಪರಿಕರಗಳಾದ ರಸಗೊಬ್ಬರ, ಬೀಜ, ಕೀಟನಾಶಕ, ತಾಡಪತ್ರಿ ಮತ್ತು ಇತರ ಪರಿಕರಗಳನ್ನು ಯೋಗ್ಯ ದರದಲ್ಲಿ ಮಾರಾಟ, ಅನೇಕ ಸದಸ್ಯ ರೈತರಿಗೆ ಸರಕಾರದ ವಿವಿಧ ಯೋಜನೆಗಳ ಮಾಹಿತಿ ಕಾರ್ಯಾಗಾರ, ಸರಕಾರದ ಬೆಂಬಲ ಬೆಲೆ ಯೋಜನೆ ಅಡಿ ಖರೀದಿ ಕೇಂದ್ರಗಳನ್ನು ತೆರೆಯುವ ಕಾರ್ಯ ಮಾಡಿದೆ.  

ಪ್ರಸ್ತುತ ಭಾರತ ಸರಕಾರ ಮತ್ತು ರಾಜ್ಯ ಸರಕಾರದ ವಿವಿಧ ಯೋಜನೆಗಳನ್ನು ಸೇರೆ​‍್ಡಗೊಳಿಸಿ ಯುಸಿಓ ಬ್ಯಾಂಕ್ ಅಮೀನಭಾವಿ ಶಾಖೆಯ ಸಹಕಾರ ಮತ್ತು ಸೆಲ್ಕೊ ಫೌಂಡೇಶನ್ ಇವರ ಆರ್ಥಿಕ ನೆರವಿನೊಂದಿಗೆ ಮೊರಬ ಗ್ರಾಮದಲ್ಲಿ ಸೋಲಾರ್ ಡ್ರೈಯರ್, ಚಿಲ್ಲಿ ಪೌಂಡಿಂಗ್, ದಾಲ್ ಪ್ರೋಸೆಸಿಂಗ್ ಮತ್ತು ಎಣ್ಣೆ ಗಾಣ ಘಟಕ ಸ್ಥಾಪಿಸಲಿದ್ದು ಶೀಘ್ರವೆ ಕಾರ್ಯರಂಭ ಮಾಡಲಿದೆ. 

ಕೃಷಿ ವಿಶ್ವವಿದ್ಯಾಲಯ ಧಾರವಾಡ ಮತ್ತು ಡಾ.ಎಸ್‌.ವಿ.ಪಾಟೀಲ ಫೌಂಡೇಶನ್ ಇವರ ಸಂಯುಕ್ತ ಆಶ್ರಯದಲ್ಲಿ ಡಾ.ಎಸ್‌.ವಿ.ಪಾಟೀಲ ಫೌಂಡೇಶನ್‌ದ 4ನೇ ಸಂಸ್ಥಾಪನ ದಿನದ ಅಂಗವಾಗಿ ಇಂದು (ಫೆ.25) ಕೃಷಿ ವಿಶ್ವವಿದ್ಯಾಲಯದಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ರೈತ ಉತ್ಪಾದಕರ ಕಂಪನಿಗೆ ನೀಡುವ ಅತ್ಯುತ್ತಮ ರೈತ ಉತ್ಪಾದಕರ ಕಂಪನಿ ಪ್ರಶಸ್ತಿಯನ್ನು ಮೊರಬದ ಕೃಷಿಸಮೃದ್ಧಿ ರೈತ ಉತ್ಪಾದಕರ ಕಂಪನಿ ಲಿಮಿಟೆಡ್ ಇವರಿಗೆ ನೀಡಲಾಯಿತು. ಪ್ರಶಸ್ತಿಯನ್ನು ಕಂಪನಿಯ ಎಲ್ಲ ನಿರ್ದೇಶಕರು ಹಾಗೂ ಸಿಇಓ ಸೇರಿ ಸ್ವೀಕರಿಸಿದರು.