ಲೋಕದರ್ಶನ ವರದಿ
ಕೊಪ್ಪಳ 24: ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಜರುಗಿದ ರಾಜ್ಯ ಮಟ್ಟದ ಇಂಡಿಯನ್ ಆಮರ್ಿ ಟ್ರೋಫಿ ಕ್ರಿಕೇಟ್ ಪಂದ್ಯಾವಳಿಯಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಿಂದ 18ತಂಡಗಳ ಭಾಗವಹಿಸಿದ್ದು, ಬುಧವಾರದಂದು ಜರುಗಿದ ಅಂತಿಮ ಪಂದ್ಯಾವಳಿಯಲ್ಲಿ ವಿಜಯಪುರದ ಕೆಸಿಸಿ ಕ್ರಿಕೇಟ್ ತಂಡ ಹಾಗೂ ಕೊಪ್ಪಳದ ವೈಟ್ ಟೈಗರ್ಸ್ ತಂಡದ ನಡುವೆ ಅಂತಿಮ ಪಂದ್ಯ ಮತ್ತು ತೀವ್ರ ಶೆಣಶಾಟ ನಡೆದು ಕೊನೆಗೆ ಕೊಪ್ಪಳದ ವೈಟ್ ಟೈಗರ್ಸ್ ತಂಡ ರೋಚಕ ಗೆಲವು ಸಾಧಿಸಿತು.
ಅಂತಿಮ ಪಂದ್ಯಾವಳಿಯಲ್ಲಿ ಮೊದಲು ಟಾಸ್ಕ್ ಗೆದ್ದ ವಿಜಯಪುರ ಕೆಸಿಸಿ ತಂಡ ನಿಗದಿತ 20 ಒವರ್ಗಳಲ್ಲಿ 146 ರನ್ಗಳನ್ನು ಗಳಿಸಿ ತನ್ನ ಎಲ್ಲಾ ವಿಕೇಟ್ಗಳನ್ನು ಗಳಿಸಿತು. ನಂತರ ಬ್ಯಾಟಿಂಗ್ ಮಾಡಿದ ವೈಟ್ ಟೈಗರ್ಸ್ ತಂಡ ಆರಂಭಿಕ ಆಟದಲ್ಲಿ ಕಳಪೆ ಪ್ರದರ್ಶನ ನೀಡಿ ಮೂರು ಒವರ್ಗಳಲ್ಲಿ ಕೇವಲ 7 ರನ್ ಗಳಿಸಿ 2 ವಿಕೇಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ನಂತರ ಬ್ಯಾಟಿಂಗ್ ಮಾಡಿದ ವೈಟ್ ಟೈಗರ್ಸ್ನ ಕ್ರೀಡಾಪಟುಗಳಾದ ಮಹಮ್ಮರಫಿ ಹಾಗೂ ಅತೀಕ ಅಹ್ಮದ್ ರೋಮಾಂಚನ ಆಟ ಪ್ರದರ್ಶನ ಮಾಡಿ ಜಂಟಿಯಾಗಿ 80 ರನ್ಗಳಿಸಿ ತಂಡದ ಗೆಲುವಿಗೆ ಹಾದಿ ಸುಗಮಗೊಳಿಸುವಲ್ಲಿ ಯಶಸ್ವಿಯಾದರು. ಮಹಮ್ಮದರಫಿ ವೈಯಕ್ತಿಕ 87 ರನ್ಗಳಿಸಿ ಗಮನ ಸೆಳೆದರೆ, ಇಮ್ರಾನ್ ಮೋಟರ್ವಾಲೆ 25 ಹಾಗೂ ಅತೀಕ್ ಅಹ್ಮದ್ 22 ರನ್ಗಳಿಸಿ ಗೆಲುವಿಗೆ ನಾಂಧಿ ಹಾಡಿದರು. ಹಾಗೂ 7 ವಿಕೇಟ್ಗಳನ್ನು ಕಳೆದುಕೊಂಡು 148 ರನ್ಗಳಿಸಿ ವಿಜಯದ ಮಾಲೆ ತನ್ನ ಕೊರಳಿಗೆ ಹಾಕಿಕೊಳ್ಳುವಲ್ಲಿ ಯಶಸ್ವಿಯಾಗಿ 20 ಸಾವಿರ ನಗದು ಬಹುಮಾನದ ಜೊತೆಗೆ ಟ್ರೋಫಿ ಪಡೆದುಕೊಳ್ಳುವಲ್ಲಿ ಯಶಸ್ವಿಯಾದರು.
ವಿಜಯಪುರದ ಕೆಸಿಸಿ ತಂಡದ ಪಟು ರಾಜಶೇಖರರವರು 38 ರನ್, ಮನೋಜ ಬಿರಾದರ 23 ರನ್ಗಳಿಸಿದರೇ ಅದೇ ತಂಡದ ಅಜಹರ್ ಉಂಡೆಕಾರ 26 ರನ್ಗಳಿಸಿ ಉತ್ತಮ ಬ್ಯಾಟಿಂಗ್ ಪ್ರದಶರ್ಿಸಿದರು. ಗೆಲವು ಸಾಧಿಸಿದ ತಂಡದಲ್ಲಿ 3 ವಿಕೇಟ್ ಪಡೆದ ವೈಟ್ ಟೈಗರ್ಸ್ ತಂಡದ ಮಹಮ್ಮದರಫಿ ಉತ್ತಮ ಬೌಲಿಂಗ್ ಮಾಡಿದರೆ, ಅದೇ ರೀತಿ ಇಮ್ರಾನ್ ಮೋಟರ್ವಾಲೆ ಮತ್ತು ಸಾದೀಕ್ ಗೂದಿ ತಲಾ 2 ವಿಕೇಟ್ ಪಡೆದರು. ಇಮ್ರಾನ್ ಮತ್ತು ಜುಲ್ಫಿಕಾರ್ ತಲಾ ಒಂದು ವಿಕೇಟ್ ಪಡೆದು ನಂತರ ಒಂದು ವಿಕೇಟ್ ರನ್-ಓಟ್ ಮಾಡುವುದರ ಮೂಲಕ ಎಲ್ಲಾ ವಿಕೇಟ್ ಕಬಳಿಸಿ ಎದುರಾಳಿಗಳಿಗೆ ಸೋಲುಣಿಸಿತು.
ಈ ಪಂದ್ಯಾವಳಿಯಲ್ಲಿ ಮಹಮ್ಮದರಫಿ ಶರಣಿ ಶ್ರೇಷ್ಟ ಮತ್ತು ಪಂದ್ಯಾ ಪುರುಷ ಪ್ರಶಸ್ತಿ ಪಡೆದರು. ವಿಜಯಪುರದ ಕೆಸಿಸಿ ತಂಡದ ರಾಜಶೇಖರ ಉತ್ತಮ ಬೌಲರ್, ಸಚಿನ್ ರಾಥೋಡ್ಗೆ ಉತ್ತಮ ಬ್ಯಾಟ್ಸ್ಮೆನ್ ಪ್ರಶಸ್ತಿ ಲಭಿಸಿದರೆ, ಕೊಪ್ಪಳದ ವೈಟ್ ಟೈಗರ್ಸ್ನ ಅತೀಕ್ ಅಹ್ಮದ್ಗೆ ಬೆಸ್ಟ್ ಫೀಲ್ಡರ್ ಹಾಗೂ ಫಯಾಜ್ ಮಿಠಾಯಿಗೆ ಬೆಸ್ಟ್ ವಿಕೇಟ್ ಕೀಪರ್ ಪ್ರಶಸ್ತಿ ಲಭಿಸಿತು. ಪಂದ್ಯಾವಳಿ ಸಮಾರೋಪ ಮತ್ತು ಟ್ರೋಫಿ ವಿತರಣೆ ಸಮಾರಂಭದ ಅಧ್ಯಕ್ಷತೆಯನ್ನು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಯಕ ನಿದರ್ೇಶಕ ಆರ್.ಜಿ. ನಾಡಗೀರರವರು ವಹಿಸಿದ್ದು, ಕೊಪ್ಪಳದ ವೈಟ್ ಟೈಗರ್ಸ್ ತಂಡಕ್ಕೆ ಬಹುಮಾನ ಹಾಗೂ ಟ್ರೋಫಿ ವಿತರಿಸಿದರು.
ಇದೇ ಸಂದರ್ಭದಲ್ಲಿ ಕ್ರಿಕೆಟ್ ಪಂದ್ಯಾವಳಿ ಯಶಸ್ವಿಗೆ ಮಾರ್ಗದರ್ಶನ ಮಾಡಿ ಸಹಕಾರ ನೀಡಿದ ಆರ್.ಜಿ. ನಾಡಗೀರ್ ಸೇರಿದಂತೆ ಮಹಾಂತೇಶ ಹಾನಗಲ್ ಹಾಗೂ ಸಾಯಿ ಮಕ್ಕಳ ಆಸ್ಪತ್ರೆಯ ವ್ಯವಸ್ಥಾಪಕಾ ಮಂಡಳಿಯವರಿಗೆ ತಂಡದ ಕ್ರೀಡಾಪಟುಗಳಾದ ಫೆರೋಜ್, ಮುಜಾಹಿದ್, ನಯಿಮ್, ಹುಸೈನ್, ಶಕೀಲ್, ಚೇತನ್, ಸಲೀಂ ಹಾಗೂ ತಂಡದ ಕೋಚ್ಗಳಾದ ಫಜೀಲ್, ಹುಸೈನ್, ಖಲೀಲ್ ಪಟೇಲ್ ಸೇರಿದಂತೆ ಸರ್ವ ಸದಸ್ಯರು ಉಪಸ್ಥಿತರಿದ್ದು, ಅಭಿನಂಧನೆಯನ್ನು ಸಲ್ಲಿಸಿದ್ದಾರೆ.