ಲೋಕದರ್ಶನ ವರದಿ
ಕೊಪ್ಪಳ 02: ವಿಶಿಷ್ಟ ಸಾಹಿತ್ಯ ಪರಂಪರೆ ಹೊಂದಿರುವ ಕೋಪಣಾಚಲ ಪ್ರದೇಶ ಅಶೋಕ ಚಕ್ರವತರ್ಿ ಕಾಲದಿಂದ ಇಂದಿನವರೆಗೂ ಸಾಹಿತ್ಯ, ಸಾಂಸ್ಕೃತಿ ಕ್ಷೇತ್ರಕ್ಕೆ ಅಗಾಧ ಕೊಡುಗೆ ನೀಡಿದೆ ಎಂದು ಕನರ್ಾಟಕ ಇತಿಹಾಸ ಅಕಾಡೆಮಿ ಅಧ್ಯಕ್ಷ ಹಾಗೂ ಶಾಸನ ತಜ್ಞ ಡಾ. ದೇವರ ಕೊಂಡಾರಡ್ಡಿ ಹೇಳಿದರು.
ಅವರು ಕೊಪ್ಪಳ ಜಿಲ್ಲಾ ಹಾಗೂ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಭಾಗ್ಯನಗರದ ಸರಕಾರಿ ಪಪೂ ಕಾಲೇಜಿನ ಆವರಣದಲ್ಲಿ ಹಮ್ಮಿಕೊಂಡಿದ್ದ ಲಿಂ.ಬಿ.ಸಿ. ಪಾಟೀಲ ಮತ್ತು ಲಿಂ. ಬಸಪ್ಪ ಕೆಂಚಪ್ಪ ದಿವಟರ ಸ್ಮರಣಾರ್ಥ ದತ್ತಿ ಉಪನ್ಯಾಸ ಹಾಗೂ ಲಿಂ. ಮರಿಗೌಡ ಸ್ಮರಣಾರ್ಥ ದತ್ತಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ 'ಇತಿಹಾಸ ಮತ್ತು ಪುರಾತತ್ವ ಸಂಶೋಧನೆಗಳು' ವಿಷಯದ ಕುರಿತು ಉಪನ್ಯಾಸ ನೀಡಿದರು.
ಕೊಪ್ಪಳದಲ್ಲಿ 2300 ವರ್ಷಗಳ ಹಿಂದೆ ಅಶೋಕನ ಶಾಸನಗಳು ಇವೇ ಅಂದರೆ ಅಂದು ಇಲ್ಲಿ ಉತ್ತಮ ನಾಗರಿಕತೆ ಇತ್ತು ಎಂಬ ಕುರುಹು ಸಿಗುತ್ತದೆ. ಚಕ್ರವತರ್ಿ ಅಶೋಕನಿಗೆ ಸಂಬಂಧಿಸಿದ 11 ಶಾಸನಗಳು ಕನರ್ಾಟಕದಲ್ಲಿ ದೊರಕಿವೆ ಇದು ಕೊಪ್ಪಳ ಇತಿಹಾಸ ಪರಂಪರೆ ತೋರುತ್ತದೆ ಎಂದರು. ಅಶೋಕನ ಶಾಸನಗಳ ಪೈಕಿ ಶಿರುಗುಪ್ಪಾದಲ್ಲಿ ರಾಜ ಅಶೋಕನ ಹೆಸರಿದೆ ಇತ್ತೀಚಿಗೆ ಮಸ್ಕಿಯಲ್ಲಿ ಅಶೋಕ ಚಿತ್ರವಿರುವ ಶಾಸನ ದೊರೆತಿದ್ದು ವಿಶೇಷವೆನಿಸಿದೆ. ದೇಶದಲ್ಲಿ ಬರವಣಿಗೆಯನ್ನು ಸಾರ್ವತ್ರಿಕಗೊಳಿಸಿದ ಮೊದಲಿಗ ಅಶೋಕ ಚಕ್ರವತರ್ಿ ಎಂದರು.
ಕೊಪ್ಪಳ 10, 12, 13 ನೇ ಶತಮಾನದಲ್ಲಿ ಜೈನರ ಕಾಶಿಯಾಗಿ ಅತ್ಯಂತ ಪುಣ್ಯಕ್ಷೇತ್ರವಾಗಿತ್ತು. ಅಹಿಂಸಾ ತತ್ವ ಇಲ್ಲಿ ಮನೆ ಮಾಡಿತ್ತು. ಗಂಗರು ಮತ್ತು ರಾಷ್ಟ್ರಕೂಟರು ತಮ್ಮ ರಾಜ್ಯ (ಅಧಿಕಾರ) ಕಳೆದುಕೊಂಡ ಮೇಲೆ ಕೊಪ್ಪಳಕ್ಕೆ ಬಂದು ಸಲ್ಲೇಖನ ವ್ರತ ಆಚರಿಸಿ ದೇಹ ತ್ಯಾಗ ಮಾಡಿದರು ಎಂಬ ಉಲ್ಲೇಖವಿದ್ದು ಅನೇಕ ಮುನಿಗಳು ಓಡಾಡಿದ ಬೀಡು ಕೋಪಣಾಚಲ ಎಂದರು.
ಮಕ್ಕಳಿಗೆ ಇತಿಹಾಸ ಪರಿಚಯದ ಕೊರತೆ ಇದೆ. ಸಾಹಿತ್ಯ ಅಧ್ಯಯನ ಮಾಡುವುದರ ಮೂಲಕ ಮಕ್ಕಳು ಇತಿಹಾಸವನ್ನು ಅರಿಯುವ ಕೆಲಸ ಮಾಡಬೇಕು. ಇತಿಹಾಸ ಅಧ್ಯಯನದಿಂದ ಮನುಷ್ಯನಲ್ಲಿ ಆಗಾಧವಾದ ಜ್ಞಾನ ಮೂಡುತ್ತದೆ. ಯುವ ಪೀಳಿಗೆ ಓದುವದನ್ನು ರೂಢಿಸಿಕೊಳ್ಳಿ ಎಂದರು.
ಸಾಹಿತಿ ಹುಚ್ಚಿರಪ್ಪ ಬೆಟಗೇರಿಯವರ 'ಎದೆಯ ಪದಗಳ ಚೌಪದಿ' ಕೃತಿಗೆ ದಿ. ಮರಿಗೌಡ ಮಲ್ಲನಗೌಡರ ದತ್ತಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಕನ್ನಡ ಭುವನೇಶ್ವರಿಗೆ ನಿವೃತ್ತ ಶಿಕ್ಷಕ ಗಂಗಾಧರ ಕಾತರಕಿ ಮಾಲಾರ್ಪಣೆ ಮಾಡಿದರು. ಕಸಾಪ ರಾಜ್ಯ ಸಮಿತಿ ಸದಸ್ಯ ಶೇಖರಗೌಡ ಮಾಲಿ ಪಾಟೀಲ ಅದ್ಯಕ್ಷತೆ ವಹಿಸಿದ್ದರು. ವೇದಿಕೆ ಮೇಲೆ ಕಸಾಪ ಜಿಲ್ಲಾಧ್ಯಕ್ಷ ರಾಜಶೇಖರ ಅಂಗಡಿ, ಸಿ.ಬಿ. ಪಾಟೀಲ, ಮಂಜುನಾಥ ದಿವಟರ, ಮುಖಂಡ ಶ್ರೀನಿವಾಸ ಗುಪ್ತಾ, ಸರಸ್ವತಿ ಇಟ್ಟಂಗಿ, ಸಾಹಿತಿ ಮಹಾಂತೇಶ ಮಲ್ಲನಗೌಡರ, ಉಪನ್ಯಾಸಕರಾದ ಸುರೇಂದ್ರಗೌಡ, ಸೋಮಶೇಖರ ಹತರ್ಿ, ಪ್ರೊ. ನಿಂಗಪ್ಪ ಕಂಬಳಿ, ಯಮನಪ್ಪ ನರಗುಂದ ಇತರರು ವೇದಿಕೆ ಮೇಲಿದ್ದರು.
ಕಸಾಪ ತಾಲೂಕ ಅಧ್ಯಕ್ಷ ಗಿರೀಶ ಪಾನಘಂಟಿ ಸ್ವಾಗತಿಸಿದರು. ಜಿಲ್ಲಾ ಕೋಶಾಧ್ಯಕ್ಷ ಸಂತೋಷ ದೇಶಪಾಂಡೆ ದತ್ತಿ ಪರಿಚಯ ನುಡಿ ಹೇಳಿದರು. ಸಂಸ್ಕೃತಿ ಸಮಿತಿ ಸದಸ್ಯ ಸೋಮಶೇಖರ ಹತರ್ಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕ ವೀರಯ್ಯ ಪೂಜಾರ ನಿರೂಪಿಸಿ ವಂದಿಸಿದರು.