ನಾಳೆ `ಕಡಪಾ ಮೈದಾನ' ನಾಮಫಲಕ ಅನಾವರಣ

ಲೋಕದರ್ಶನ ವರದಿ

ಧಾರವಾಡ: ಸಾರ್ವಜನಿಕ, ದೇಶಭಕ್ತಿಯ, ಸಭೆ, ಸಮಾರಂಭಗಳನ್ನು ನಡೆಸಲು ನಗರದ ಮಧ್ಯ ಭಾಗದಲ್ಲಿ ಇರುವ ನೂರಾರು ಕೋಟಿ ಬೆಲೆಯುಳ್ಳ ಆಸ್ತಿಯನ್ನು ಮಹಾನಗರ ಪಾಲಿಕೆಗೆ ದಾನ ಮಾಡಿದ ಖ್ಯಾತ ದೇಶಪ್ರೇಮಿ ಹಾಗೂ ಕನರ್ಾಟಕ ಏಕೀಕರಣಕ್ಕೆ ಅಹನರ್ಿಶಿ ಶ್ರಮಿಸಿದ್ದ ಕಡಪಾ ರಾಘವೇಂದ್ರರಾಯರ ಸ್ಮರಣಾರ್ಥ, ಗೌರವಾರ್ಥ ಆ ಸ್ಥಳದ ಪ್ರವೇಶ ದ್ವಾರದ ಬಳಿ `ಕಡಪಾ ಮೈದಾನ' ಎಂಬ ಬೃಹದಾಕಾರದ ನಾಮಫಲಕ ಅನಾವರಣ ಕಾರ್ಯಕ್ರಮ ನಡೆಯಲಿದೆ.

ಇದೇ ದಿ.13ರಂದು ಮಂಗಳವಾರ ಸಂಜೆ 4-30 ಗಂಟೆಗೆ ಈ ನಾಮಫಲಕ ಅನಾವರಣ ಕಾರ್ಯಕ್ರಮ ಜರುಗಲಿದ್ದು, ಪಾಲಿಕೆಯ ಪೂಜ್ಯ ಮಹಾಪೌರ ಸುಧೀರ ಸರಾಫ್, ಉಪಮಹಾಪೌರೆ ಮೇನಕಾ ಹುರಳಿ, ಸಹಾಯಕ ಆಯುಕ್ತ ಸಂತೋಷ ಆನಿಶೆಟ್ಟರ, ಸಾಹಿತಿ ಶ್ರೀನಿವಾಸ ವಾಡಪ್ಪಿ ಹಾಗೂ ಪಾಲಿಕೆಯ ಸದಸ್ಯರು, ವಿವಿಧ ಸಂಘಟನೆಗಳ, ಸಂಸ್ಥೆಗಳ ಮುಖಂಡರು ಈ ಸ್ಮರಣೀಯ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.

`ಕಡಪಾ ಮೈದಾನ' ಎಂಬ ನಾಮಫಲಕ ಹಾಕಿ ಆ ಮಹಾನ್ ದೇಶಪ್ರೇಮಿಯ ತ್ಯಾಗ, ಸೇವೆಗಳನ್ನು ಇಂದಿನ ಹಾಗೂ  ಮುಂದಿನ ಜನಾಂಗಕ್ಕೆ ಪರಿಚಯಿಸಲು ಆ ವ್ಯಕ್ತಿಯ ಹೆಸರಿನಲ್ಲಿ ನಾಮ ಫಲಕ ಹಾಕಲು ಅನೇಕ ದಿನಗಳಿಂದ ಪ್ರಯತ್ನಿಸುತ್ತಿದ್ದ ನಿವೃತ್ತ ಶಿಕ್ಷಕ, ಸಮಾಜ ಸೇವಕ ಹಾಗೂ `ಪುರಸ್ಕಾರ' ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಕೃಷ್ಣ ಜೋಶಿ ಇವರ ನೇತೃತ್ವದಲ್ಲಿ ಈ ನಾಮಫಲಕ ಅನಾವರಣ ಕಾರ್ಯಕ್ರಮ ನಡೆಯುವುದು.

ದೇಶಪ್ರೇಮಿಗಳು ಹಾಗೂ ಕಡಪಾ ರಾಘವೇಂದ್ರರಾಯರ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕೆಂದು ಪುರಸ್ಕಾರ ಸಂಸ್ಥೆಯ ಉಪಾಧ್ಯಕ್ಷ ವೀರಣ್ಣ ಹಿರೇಮಠ ಪ್ರಕಟಣೆಯಲ್ಲಿ ಕೋರಿದ್ದಾರೆ.

ಯಾರು ಈ ಕಡಪಾ ರಾಘವೇಂದ್ರರಾಯರು?: ಮೂಲತಃ ಆಂಧ್ರಪ್ರದೇಶದ `ಕಡಪಾ'ದವರಾದ ರಾಘವೇಂದ್ರರಾಯರು ಧಾರವಾಡವನ್ನು ಆರಿಸಿಕೊಂಡು ಇಲ್ಲಿಗೆ ಬಂದು ವಕೀಲಿ ವೃತ್ತಿಯನ್ನು ಪ್ರಾರಂಭಿಸಿದರು. ಹರಿದುಹಂಚಿ ಹೋಗಿದ್ದ ಕನ್ನಡ ಪ್ರಾಂತಗಳಲ್ಲಿ ವಾಸಿಸುತ್ತಿದ್ದ ಸಮಸ್ತ ಕನ್ನಡಿಗರನ್ನು ಒಂದುಗೂಡಿಸಿ ಕನರ್ಾಟಕ ರಾಜ್ಯವು ನಿಮರ್ಾಣವಾಗಬೇಕು ಎಂಬ ಹೆಬ್ಬಯಕೆಯನ್ನು ಅವರು ಹೊಂದಿದ್ದರು.

`ಕನ್ನಡ ಕುಲಪುರೋಹಿತ' ಆಲೂರ ವೆಂಕಟರಾಯರಿಂದ ಸ್ಥೂತರ್ಿಯನ್ನು ಪಡೆದಿದ್ದ ರಾಘವೇಂದ್ರರಾಯರು, ಅವರೊಂದಿಗೆ 12 ವರುಷ ಅವಿಶ್ರಾಂತವಾಗಿ ದುಡಿದರು. ಕನರ್ಾಟಕದ ಐಕ್ಯತೆ, ಸಮಗ್ರತೆ, ಅಭಿವೃದ್ಧಿಯ ಜೊತೆಗೆ ರಾಷ್ಟ್ರೀಯತೆಯನ್ನು ಉಳಿಸಿಕೊಂಡು, ಬೆಳೆಸಿಕೊಂಡು ಅಖಂಡ ಕನರ್ಾಟಕದ ನಿಮರ್ಾಣಕ್ಕೆ ದುಡಿದ ಇವರು ತಮ್ಮ ಅಮೂಲ್ಯ ಆಸ್ತಿಯಾದ ಜಾಗೆಯನ್ನು ರಾಷ್ಟ್ರೀಯ ಕಾರ್ಯಗಳನ್ನು ನಡೆಸಲು ಅನುಕೂಲವಾಗಲೆಂದು ಆಗಲೇ ದಾನಮಾಡಿದ ದಾನಶೂರರಾಗಿದ್ದಾರೆ. ಇವರ ಸ್ಮರಣಾರ್ಥ `ಕಡಪಾ ಮೈದಾನ' ಎಂದು ಆ ಜಾಗೆಗೆ ನಾಮಕರಣ ಮಾಡಲಾಗಿದೆ ಎಂಬ ಠರಾವು ಕೂಡಾ ಆಗಿತ್ತು.

ಪ್ರಖ್ಯಾತ ಹಿಂದೂಸ್ತಾನಿ ಗಾಯಕರಾದ ಪದ್ಮವಿಭೂಷಣ ಪ್ರಶಸ್ತಿಯಿಂದ ಪುರಸ್ಕೃತ ನಮ್ಮವರೇ ಆದ ಪಂ. ಮಲ್ಲಿಕಾಜರ್ುನ ಮನಸೂರ ಕಲಾಭವನವು ಈ ಜಾಗೆಯಲ್ಲಿ ತಲೆ ಎತ್ತುವ ಮೊದಲೇ ಕಡಪಾ ಮೈದಾನವೆಂದು ಹೆಸರಿಟ್ಟಿದ್ದ ಆ ಸ್ಥಳದಲ್ಲಿ ಒಂದು ಚಿಕ್ಕದಾದ ವೇದಿಕೆಯಿತ್ತು. (ತಗಡಿನ ಶೆಡ್) ಅದೊಂದು ಐತಿಹಾಸಿಕ ವೇದಿಕೆಯಾಗಿತ್ತು. 

ಜಯಪ್ರಕಾಶ ನಾರಾಯಣ, ಇಂದಿರಾ ಗಾಂಧಿ, ಅಟಲಬಿಹಾರಿ ವಾಜಪೇಯಿ, ಲಾಲಕೃಷ್ಣ ಆದ್ವಾನಿ, ಚಂದ್ರಶೇಖರ, ಜಗನ್ನಾಥರಾವ್ ಜೋಶಿ ಇವರೇ ಮೊದಲಾದ   ರಾಷ್ಟ್ರೀಯ ಅಗ್ರಗಣ್ಯ ನೇತಾರರು ಐತಿಹಾಸಿಕ ಭಾಷಣ ಮಾಡಿದ್ದನ್ನು ಹಿಂದಿನ ತಲೆಮಾರಿನವರು ಈಗಲೂ ಮೆಲಕು ಹಾಕುತ್ತಿರುತ್ತಾರೆ. ಇದೇ ಕಡಪಾ ಮೈದಾನದಲ್ಲಿ ಸಾಯಂಕಾಲ 6 ಗಂಟೆಗೆ ಜಗನ್ನಾಥರಾವ್ ಜೋಶಿಯವರ ಭಾಷಣ ಇದ್ದರೆ, ಸಂಜೆ 5 ಗಂಟೆಗೆ, ಕಡಪಾ ಮೈದಾನ ತುಂಬಿ ತುಳುಕುತ್ತಿತ್ತು ಎಂದು ಅಂದಿನ ಸಭೆಗಳಲ್ಲಿ ಉಪಸ್ಥಿತರಿದ್ದು ಭಾಷಣ ಕೇಳಿ ಖುಷಿ ಪಡುತ್ತಿದ್ದ ಜನರು ಸಹಸ್ರಾರು ಸಂಖ್ಯೆಯಲ್ಲಿ ಇನ್ನೂ ನಮ್ಮ ಮಧ್ಯ ಇದ್ದಾರೆ ಎಂಬುದರ ಇತಿಹಾಸವನ್ನು  ಕೃಷ್ಣ ಜೋಶಿ ವಿವರಿಸಿದ್ದಾರೆ.

ಇಂಥ ಅಪೂರ್ವದ, ಐತಿಹಾಸಿಕ ದಾಖಲೆ ಹೊಂದಿರುವ ಕಡಪಾ ರಾಘವೇಂದ್ರರಾಯರ ಬಗೆಗೆ  ಹು-ಧಾ ಪಾಲಿಕೆಯ ಒಡೆತನದಲ್ಲಿರುವ ಈ ಜಾಗೆಯಲ್ಲಿ ಕಡಪಾ ರವರ ನಾಮಫಲಕ ಅನಾವರಣ ಕಾರ್ಯ ಅತ್ಯಂತ ಸೂಕ್ತವಾಗಿದೆ ಎಂಬುದು ಸಾರ್ವಜನಿಕರ ಅಭಿಪ್ರಾಯವಾಗಿದೆ.