ಜಾನುವಾರ ಜಾತ್ರೆ ಜನಾಕಷರ್ಿಸುವಲ್ಲಿ ಯಶಸ್ವಿ

ಬೈಲಹೊಂಗಲದಲ್ಲಿ ನಡೆದ ಜಾನುವಾರ ಜಾತ್ರೆ ಕಮೀಟಿ ವತಿಯಿಂದ ಆರಂಭಗೊಂಡ ಎರಡನೇ ದಿನದ ಜಾನುವಾರು ಪ್ರದರ್ಶನದಲ್ಲಿ ಗಿರ್ ತಳ

ಬೈಲಹೊಂಗಲ 29: ಮರಡಿ ಬಸವೇಶ್ವರ ದೇವಸ್ಥಾನದ ಜಾತ್ರಾ ಮಹೋತ್ಸವ ಅಂಗವಾಗಿ ಆನಿಗೋಳ ರಸ್ತೆಯ ಈಶಪ್ರಭು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಜಾನುವಾರು ಮಾರುಕಟ್ಟೆ ಪ್ರಾಂಗಣದಲ್ಲಿ ಜಾನುವಾರ ಜಾತ್ರೆ ಕಮೀಟಿ ವತಿಯಿಂದ ಆರಂಭಗೊಂಡ ಎರಡನೇ ದಿನದ ಜಾನುವಾರು ಪ್ರದರ್ಶನ ಮತ್ತು ಜಾನುವಾರು ಮಾರಾಟವು ಗುರುವಾರ ರೈತಾಪಿ ಜನರನ್ನು ಆಕಷರ್ಿಸುವಲ್ಲಿ ಯಶಸ್ವಿಯಾಗುತ್ತಿದೆ.

ಜಾನುವಾರು ಜಾತ್ರೆಯಲ್ಲಿ  ಜವಾರಿ ಹಾಗೂ ಮುರ್ರಾ ತಳಿ ಎಮ್ಮೆಗಳು, ಆಕಳುಗಳು ಖಿಲಾರಿ ತಳಿಯ ಜೋಡೆತ್ತು, ಹೋರಿಗಳು, ಮಶಾನಲಾ ಮಸೂರಿ ಹಾಗೂ ಗಿರ್ ತಳಿ ಎತ್ತುಗಳು, ಮಣಕ, ಕರುಗಳು ಸೇರಿದಂತೆ ವಿವಿಧ ತಳಿಯ 500 ಕ್ಕೂ ಹೆಚ್ಚು ಜಾನುವಾರುಗಳು ಭಾಗವಹಿಸಿದ್ದು ವಿಶೇಷವಾಗಿತ್ತು.

 ಕನಿಷ್ಠ 7 ಲೀಟರನಿಂದ ಹಿಡಿದು  16 ಲೀಟರ್ ಹಾಲು ಕೊಡುವ ಹಸುಗಳು, 14 ಲೀಟರ್ ಹಾಲು ನೀಡುವ ಮುರ್ರಾ ಎಮ್ಮೆಗಳು ರೈತಾಪಿ ವರ್ಗವನ್ನು ಗಮನ ಸೆಳೆದವಲ್ಲದೇ, ಸುಮಾರು 2 ರಿಂದ 5 ಲಕ್ಷ ರೂಪಾಯಿ ಮೌಲ್ಯ ಹೊಂದಿದ್ದ ಎತ್ತುಗಳು, ಕೃಷಿ ಚಟುವಟಿಕೆಗಳನ್ನು ಮಾಡುವ ತಾಕತ್ತು ಉಳ್ಳ ಎತ್ತುಗಳು ಜನರ ಆಕರ್ಷಣೆಯ ಕೇಂದ್ರಬಿಂದುವಾಗಿದ್ದವು.

ಆನಿಗೋಳ, ಅಮಟೂರ,  ಬೆಳಗಾವಿ, ಮೂಡಲಗಿ, ಅಥಣಿ, ಗಡಹಿಂಗ್ಲಜ, ಗೋಕಾಕ, ರಾಜ್ಯವಲ್ಲದೇ ಹೊರರಾಜ್ಯದ ವಿವಿಧ ತಾಲೂಕುಗಳ ಸಾವಿರಾರು ರೈತರು ಭಾಗವಹಿಸಿ ರಾಸುಗಳನ್ನು ಕಣ್ತುಂಬಿಸಿಕೊಂಡರು. 

    ಜಾನುವಾರು ಪ್ರದರ್ಶನ ನಡೆಯುತ್ತಿರುವ ಬೃಹತ್ ಮೈದಾನದಲ್ಲಿರುವ ಹಲವಾರು ಗಿಡಮರಗಳು ಜಾನುವಾರುಗಳಿಗೆ ನೆರಳು ನೀಡುತ್ತಿವೆ.  ಕಮೀಟಿಯವರು ಶುದ್ದ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ, ಈ ಸುವ್ಯವಸ್ಥಿತ ಪ್ರದರ್ಶನದಲ್ಲಿ ರೈತರೂ ಸಂತಸದಿಂದಲೇ ಪಾಲ್ಗೊಂಡಿದ್ದಾರೆ.

  ದಲ್ಲಾಳಿಗಳಿಗೆ ಹೋರಿ ಅಥವಾ ಜೋಡೆತ್ತುಗಳು ಒಪ್ಪಿಗೆಯಾದರೆ ಜಾನುವಾರುಗಳ ಮಾಲೀಕ ಹೇಳೀ ಬೆಲೆ ನೀಡಿ ಕೊಳ್ಳುತ್ತಿರುವುದು ಕಂಡು ಬಂತು. ಬೀಜದ ಹೋರಿಗಳಿಗೆ ಎಲ್ಲಿಲ್ಲದ ಬೇಡಿಕೆ ಕಂಡುಬಂದಿದ್ದು, ಇವು ಒಂದು ಲಕ್ಷ ದಿಂದ ಮೂರು ಲಕ್ಷದವರೆಗೆ ಮೊತ್ತ ಇದೆ.

  ಇನ್ನೂ ಪ್ರತಿ ಶುಕ್ರವಾರ ಜಾನುವಾರು ಸಂತೆ ನಡೆಯಲಿದೆ ಎಂದು ಸಂಘಟಕರು ತಿಳಿಸಿದ್ದಾರೆ.