ಸಂಸ್ಥೆ ಶೈಕ್ಷಣಿಕವಾಗಿ ಶಿಕ್ಷಣ ನೀಡುವಲ್ಲಿ ಮಹತ್ತರ ಪಾತ್ರ ವಹಿಸಿದೆ: ಶಹಾ

ಲೋಕದರ್ಶನ ವರದಿ

ಇಂಡಿ 06: ಪಟ್ಟಣದಲ್ಲಿ ರಾಮಚಂದ್ ಮೋತಿಚಂದ್ ಶಹಾ ಶೈಕ್ಷಣಿಕ ಸಂಸ್ಕೃತಿಕ ಟ್ರಸ್ಟ ವತಿಯಿಂದ ಈಗಾಗಲೆ ಸಿ.ಬಿ.ಎಸ್.ಇ ಮಾನ್ಯತೆ ಹೊಂದಿರುವ ಆರ್ ಎಂ ಶಹಾ ಪಬ್ಲಿಕ ಶಾಲೆಯು ಶೈಕ್ಷಣಿಕವಾಗಿ ಶಿಕ್ಷಣ ನೀಡುವಲ್ಲಿ ಮಹತ್ತರ ಪಾತ್ರ ವಹಿಸಿದ್ದು, ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾಗಿ ಹೊರ ಹೊಮ್ಮಿದೆ. ಶೈಕ್ಷಣಿಕ ಹಿತವನ್ನು ಗಮನಿಸಿ ಇಂದು ನಗರದಲ್ಲಿ ಪ್ರಸಕ್ತ ವರ್ಷದಲ್ಲಿ ವಿನೂತನವಾಗಿ ಪದವಿ ಪೂರ್ವ ಕಾಲೇಜು ಪ್ರಾರಂಭಿಸಲು ತೀಮರ್ಾನಿಸಲಾಗಿದೆ ಎಂದು ರಾಮಚಂದ್ ಮೋತಿಚಂದ್ ಶಹಾ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಿ.ಆರ್ ಶಹಾ ಹೇಳಿದರು.

ಪಟ್ಟಣದ ಕನರ್ಾಟಕ ಪತ್ರಕರ್ತರ ಸಭಾ ಭವನದಲ್ಲಿ ಪತ್ರಿಕಾ ಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು ಬೆಳೆಯುವ ಸಿರಿ ಮೊಳಕೆಯಲ್ಲಿ ಎಂಬ ನಾಣ್ನುಡಿಯಂತೆ ನಮ್ಮ ಶಿಕ್ಷಣ ಸಂಸ್ಥೆ ಸ್ಥಾಪಿಸಿದ ಅಲ್ಪ ಸಮಯದಲ್ಲಿಯೇ ಇಂದು ಪ್ರಖ್ಯಾತಿ  ಪಡೆದು ಶಿಕ್ಷಣ ನೀಡುವ  ಬೃಹತ್ ಶಿಕ್ಷಣ ಸಂಸ್ಥೆ ಎಂದು ಹೆಗ್ಗಳಿಕೆಗೆ ಪಾತ್ರವಾಗಿದೆ. ಕಳೆದ ಬಾರಿ ನಮ್ಮ ಶಾಲೆಯ ವಿಧ್ಯಾಥರ್ಿಗಳು 90 ಪ್ರತಿಶತ ಅಂಕಗಳನ್ನು ಗಳಿಸಿ ಶಾಲೆಯ ಗೌರವಕ್ಕೆ ಭಾಜನರಾಗಿದ್ದಾರೆ. 

ಶಿಕ್ಷಣ ಸಂಸ್ಥೆಯ ಮುಖ್ಯ ಉದ್ದೇಶ ಶೈಕ್ಷಣಿಕ ಪ್ರಗತಿ ಸಾಧಿಸಿ ಗ್ರಾಮೀಣ ಭಾಗದ ಹಾಗೂ ಬಡ ವಿಧ್ಯಾಥರ್ಿಗಳು ಬೇರೆ ಬೇರೆ ಕಡೆ ಶಿಕ್ಷಣ ಪಡೆಯಲು ಹೋಗಬಾರದು ಸ್ಥಳೀಯವಾಗಿಯೆ ಶಿಕ್ಷಣ ಪಡೆದು ಒಳ್ಳೆಯ ಭವ್ಯ ಭಾರತದ ಸತ್ಪ್ರಜೆಗಳಾಗಲಿ ಹಾಗೂ ಶೈಕ್ಷಣಿಕವಾಗಿ ಮುಂದೆ ಬರಲಿ ಎಂಬ ಉದ್ದೇಶದಿಂದ ಇಂದು ಅನೇಕ ಶೈಕ್ಷಣಿಕ ವಿಭಾಗಗಳನ್ನು ತೆರೆಯಲಾಗಿದೆ ಎಂದರು. ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿರುವ ಉದ್ದೇಶ ಹಣ ಗಳಿಸುವ ಉದ್ದೇಶಕ್ಕೆ ಅಲ್ಲ ಸಾರ್ವಜನಿಕ ಬದುಕಿನಲ್ಲಿ ಏನಾದರೂ ಸಾಧನೆ ಮಾಡಿ ಇದರಲ್ಲಿಯೇ ತೃಪ್ತಿ ಹೊಂದಬೇಕು ಎಂಬ ಬಯಕೆ ಇದೆ. 

ಮುಂಬರುವ 2019 -20ನೇ ಸಾಲಿನಲ್ಲಿ ನಮ್ಮ ಸಂಸ್ಥೆಯ ಅಡಿಯಲ್ಲಿ ವಿಜ್ಞಾನ ಪದವಿ ಪೂರ್ವ ಕಾಲೇಜು ಸ್ಥಾಪಿಸಲಾಗುತ್ತಿದೆ. ಈಗಾಗಲೆ ಇಲಾಖೆಯಿಂದ ಅನುಮತಿ ದೊರಕಿದೆ ಪುಲಚಂದ್ ಕಸ್ತೂರಚಂದ್ ದೋಶಿ ಎಂಬ ನಾಮಕರಣದೊಂದಿಗೆ ಆರಂಭಿಸಲಾಗುತ್ತಿದ್ದು ಕಾಲೇಜಿಗೆ ಮೂಲಭೂತ ಸೌಲಭ್ಯಗಳಾದ ಪ್ರಯೋಗಾಲಯಗಳು, ಹಾಗೂ ಗ್ರಂಥಾಲಯ,  ಸುಸಜ್ಜಿತ ವರ್ಗಕೋಣೆಗಳ ಸೌಲಭ್ಯ ಹಾಗೂ ಶಿಕ್ಷಣ ನೀಡಲು ನುರಿತ ಶಿಕ್ಷಕ ಸಿಬ್ಬಂದಿಗಳು ಹಾಗೂ ಇಂದಿನ ದಿನಮಾನಗಳಿಗೆ ತಕ್ಕಂತೆ ವಿಜ್ಞಾನ ತಂತ್ರಜ್ಞಾನಗಳ ಸಲಕರಣೆಗಳ ಸೌಲಭ್ಯ ವಿಧ್ಯಾಥರ್ಿಗಳಿಗೆ ಒದಗಿಸಲು ಕ್ರಮಕೈಗೊಳ್ಳಲಾಗಿದೆ ಎಂದರು.

ಕೇವಲ ಶಿಕ್ಷಣ ನೀಡಿದರೆ ಸಾಲದು ಇದರ ಜೊತೆಗೆ ಮಕ್ಕಳ ದೈಹಿಕ ಬೆಳವಣಿಗೆಗೆ ಸಹ ಪಠ್ಯೆ ಚಟುವಟಿಕೆಗಳಿಗೂ ಆದ್ಯತೆ ನೀಡಲಾಗುವದು. ಜೊತೆಯಲ್ಲಿ ಪಿಯುಸಿ ನಂತರದ ಎಂ.ಬಿ.ಬಿ. ಎಸ್ ಇಂಜನಿಯರಿಂಗ್ ಕೃಷಿ ವಿಜ್ಞಾನ, ಜ್ಞಾನಕ್ಕೆ ಸಿ.ಈ.ಟಿ, ನೀಟ್, ಆಯ್.ಆಯ್.ಟಿ, ಪರೀಕ್ಷಾ ಪೂರ್ವ ತರಬೇತಿಗೆ ವಿಧ್ಯಾಥರ್ಿಗಳಿಗೆ ಅಣಿಗೊಳಿಸಲಾಗುವದು. ಮುಂಬರುವ ಶೈಕ್ಷಣಿಕ ವರ್ಷದ ಕಾಲೇಜ ಆರಂಭವಾಗಲಿದ್ದು ಒಟ್ಟು 80 ವಿಧ್ಯಾಥರ್ಿ ವಿಧ್ಯಾಥರ್ಿನಿಯರಿಗೆ ಪ್ರವೇಶ ಪಡೆದುಕೊಳ್ಳಲಾಗುವದು.  2019-20ನೇ ಸಾಲಿನ ಎಸ್ ಎಸ್ ಎಲ್ ಸಿ ವಿಧ್ಯಾಥರ್ಿಗಳಲ್ಲಿ ಶೆಕಡಾ 90 ಕ್ಕಿಂತಹೆಚ್ಚು ಅಂಕ ಪಡೆದ ವಿಧ್ಯಾಥರ್ಿಗಳಿಗೆ ಉಚಿತ ಪ್ರವೇಶ ನೀಡಲಾಗುವದು. ಸದರಿ ಸಂಸ್ಥೆಯಲ್ಲಿ ವಸತಿ ಸಹಿತ ಹಾಗೂ ವಸತಿ ರಹಿತ ವ್ಯಾಸಾಂಗಕ್ಕೆ ಅವಕಾಶ ಇದ್ದು ಪಾಲಕರು ಶಿಕ್ಷಣ ಹಿತೈಸಿಗಳು ಇದರ ಸದುಪಯೋಗ ಪಡೆಯಬೇಕು ಎಂದು ಅಧ್ಯಕ್ಷ ಡಿ.ಆರ್.ಶಹಾ ಹಾಗೂ ಪ್ರಚಾರ್ಯ ಆರ್.ಎಂ.ಬಿರಾದಾರಜಂಟಿಯಾಗಿ ತಿಳಿಸಿದ್ದಾರೆ.