ಬಸ್ಸ ನಿಲ್ದಾಣಕ್ಕೆ ಸೌಕರ್ಯ ಒದಗಿಸುವಂತೆ ಗಜಸೇನೆ ಕಾರ್ಯಕರ್ತರು ರಸ್ತೆ ತಡೆದು ಬೃಹತ ಪ್ರತಿಭಟನೆ
ಶಿಗ್ಗಾವಿ 24:- ಬಂಕಾಪೂರ ಪಟ್ಟಣಕ್ಕೆ ರಾಷ್ಟ್ರೀಯ ನವಿಲು ದಾಮ, ಕಿಲಾರಿ ಗೊವರ್ದನ ತಳಿ, ಐತಿಹಾಸಿಕ ಪುರಾತನ ನಗರೇಶ್ವರ ದೇವಸ್ಥಾನ ನೋಡಲು ದಿನ ನಿತ್ಯ ಸಾವಿರಾರು ಜನರು ಬಂದು ಹೋಗುತ್ತಾರೆ ಆದರೆ ಇಲ್ಲಿಯ ಕೆಂದ್ರ ಬಸ್ಸ ನಿಲ್ದಾಣದ ಅವ್ಯವಸ್ಥೆಯನ್ನು ನೋಡಿ ಸಂಬಂಧಿಸಿದ ಇಲಾಖೆಗೆ ಹಿಡಿ ಶಾಪ ಹಾಕುತ್ತಿರುವದು ನಾಚಿಕಿಗೆಡಿನ ಸಂಗತಿ ಇದನ್ನು ಕರ್ನಾಟಕ ರಕ್ಚಣಾ ವೇದಿಕೆ ಗಜಸೇನೆ ತೀವ್ರವಾಗಿ ಖಂಡಿಸುತ್ತದೆ ಎಂದು ಬಂಕಾಪುರ ಶಹರ ಅಧ್ಯಕ್ಷ ಶೇಖಪ್ಪ ದೀಪಾವಳಿ ಹೇಳಿದರು.
ಬಂಕಾಪುರ ಕೇಂದ್ರ ಬಸ್ಸ ನಿಲ್ದಾಣಕ್ಕೆ ಮೂಲಭೂತ ಸೌಕರ್ಯಗಳನ್ನು ಒದಗಿಸುವಂತೆ ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ ಗಜಸೇನೆ ಕಾರ್ಯಕರ್ತರು ಕಾರವಾರ-ಇಳಕಲ್ಲ ರಾಜ್ಯ ಹೆದ್ದಾರಿಯನ್ನು ಸುಮಾರು 2 ಘಂಟೆಗಳ ಕಾಲ ರಸ್ತೆ ತಡೆದು ಬೃಹತ ಪ್ರತಿಭಟನೆ ಮಾಡಿದರು, ನಂತರ ವೇದಿಕೆಯ ಶಹರ ಉಪಾಧ್ಯಕ ಶಿವು ಕಮ್ಮಾರ ಮಾತನಾಡಿ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು ಸರಿಯಾದ ಬಸ್ಸುಗಳ ವ್ಯವಸ್ಥೆ ಇಲ್ಲದೆ ದಿನ ನಿತ್ಯ ಪರದಾಡುವಂತೆ ಆಗಿದೆ ಹೆಚ್ಚುವರಿಯಾಗಿ ಬಸ್ಸ ಸಂಚರಿಸಲು ಕ್ರಮ ಕೈಗೊಳ್ಳಬೇಕೆಂದು ಸಂಬಧಿಸಿದ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ತಾಲೂಕಾ ಅಧ್ಯಕ್ಷ ದ್ಯಾಮಣ್ಣ ಮಲ್ಲಾಡದ ಮಾತನಾಡಿದರು.
ಪ್ರತಿಭಟನಾ ನಿರತ ಸ್ಥಳಕ್ಕೆ ಆಗಮಿಸಿದ ಸವಣೂರ ಪ್ರಭಾರ ಉಪ ವಿಭಾಗಾಧಿಕಾರಿ ಮಮತಾ ಹೊಸಗೌಡ್ರ ಹಾಗೂ ಸಾರಿಗೆ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಪ್ರತಿಭಟನಾ ನಿರತರ ಬೇಡಿಕೆಗಳನ್ನ ಈಡೇರಿಸುತ್ತೇವೆಂದು ಭರವಸೆ ನೀಡಿದ ನಂತರ ಪ್ರತಿಭಟನೆಯನ್ನು ಹಿಂದಕ್ಕೆ ಪಡೆದುಕೊಳ್ಳಲಾಯಿತು.
ಈ ಸಂರ್ದಭದಲ್ಲಿ ಜಿಲ್ಲಾ ಅಧ್ಯಕ್ಷ ಮಂಜುನಾಥ ಓಲೇಕಾರ, ಜಿಲ್ಲಾ ಕಾರ್ಯಾಧ್ಯಕ್ಷ ಪುಟ್ಟಪ್ಪ ಹಿತ್ತಲಮನಿ ಜಿಲ್ಲಾ ಉಪಾಧ್ಯಕ್ಷರುಗಳಾದ ಫಕ್ಕೀರೇಶ ಕಟ್ಟಿಮನಿ, ಸುಭಾನಿ ಹಿತ್ತಲಮನಿ, ಜಿಲ್ಲಾ ಸಂಘಟನಾ ಸಂಚಾಲಕ ಮಾಲತೇಶ ಜಿ.ಕೆ, ತಾಲೂಕ ಸಂಘಟನಾ ಕಾರ್ಯದರ್ಶಿ ಆನಂದ ವಾಲ್ಮೀಕಿ, ಸಂಚಾಲಕ ಮಂಜುನಾಥ ನೆಲ್ಲಿಕೊಪ್ಪ, ಸೇರಿದಂತೆ ನೂರಾರು ಕಾರ್ಯಕರ್ತರು ಹಾಜರಿದ್ದರು.