ನಾಲ್ಕನೇ ದಿನದ ಕನರ್ಾಟಕ ವಿದ್ಯಾವರ್ಧಕ ಸಂಘ ಸಂಭ್ರಮ

ಕಾರ್ಯಕ್ರಮದಲ್ಲಿ ಗೌರವ ಉಪಾಧ್ಯಕ್ಷರಾದ ಸೇತುರಾಮ ಹುನಗುಂದ, ಡಾ. ಶಾಂತಿನಾಥ ದಿಬ್ಬದ, ಹಾಗೂ ಪ್ರಿ. ಶಿವಶಂಕರ ಹಿರೇಮಠ, ವೀ


ಲೋಕದರ್ಶನ ವರದಿ

ಧಾರವಾಡ 24: ಧಾರವಾಡದ ಮಣ್ಣಿನ ಗುಣವೋ ಏನೋ, ಈ ನಗರವನ್ನು ವಿಶ್ವದ ಅನೇಕ ಮೇಧಾವಿಗಳು ಪ್ರೀತಿಸಿರುವುದು ವಿಶೇಷ. ಹರ್ಮನ್ ಮೋಗ್ಲಿಂಗ್, ರೆವರೆಂಡ್ ಕಿಟೆಲ್ ಮತ್ತು ಫ್ಯಾರೆನ್ರಂತಹ ಧೀಮಂತರು ಧಾರವಾಡದ ಬಗ್ಗೆ ಅನನ್ಯ ಕಾಳಜಿಯುಳ್ಳವರಾಗಿದ್ದರು. ಕಿಟೆಲ್ರವರು ತಮ್ಮ ಕೊನೆಯ ದಿನಗಳಲ್ಲಿ ಭಾರತಕ್ಕೆ ಹೋಗಿ ಧಾರವಾಡದಲ್ಲಿ ನೆಲೆಸಬೇಕಾಗಿತ್ತು ಎಂದು ಚಿಂತಿಸಿದ್ದರು. ಅಂತೆಯೇ ಕನರ್ಾಟಕ ಕಾಲೇಜಿನ ಪ್ರಾಚಾರ್ಯರಾಗಿದ್ದ ಫ್ಯಾರೆನ್ರವರು ನಿವೃತ್ತಿ ನಂತರ ವಿದೇಶದಿಂದ ಮರಳಿ ಬಂದು ಮತ್ತೆ ಹದಿನಾಲ್ಕು ವರ್ಷ ಧಾರವಾಡದಲ್ಲಿ ನೆಲೆಸಿದ್ದರು ಎಂಬ ಸಂಗತಿಗಳು ಧಾರವಾಡದ ವಿಶೇಷತೆಯನ್ನು ಎತ್ತಿ ತೋರಿಸುತ್ತವೆ ಎಂದು ಕಲಬುಗರ್ಿ ಕೇಂದ್ರಿಯ ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ. ಎಚ್.ಎಂ. ಮಹೇಶ್ವರಯ್ಯ ಅಭಿಪ್ರಾಯಪಟ್ಟರು. 

ಅವರು ಕನರ್ಾಟಕ ವಿದ್ಯಾವರ್ಧಕ ಸಂಘದ 129ನೇ ಸಂಸ್ಥಾಪನಾ ದಿನಾಚರಣೆ 4 ದಿನದ ಸಂಭ್ರಮದಲ್ಲಿ ವೆಂಕಟ ರಂಗೋ ಕಟ್ಟಿ ವೇದಿಕೆ ಯಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.  

ಮುಂದುವರೆದು ಮಾತನಾಡಿದ ಅವರು, ರಾಷ್ಟ್ರದಲ್ಲೇ ಹಳೆಯದು ಎಂದು ಹೇಳಬಹುದಾದ ಸಂಸ್ಥೆಗಳಲ್ಲಿ ಬಹುಖ್ಯಾತಿಯ ವಿದ್ಯಾವರ್ಧಕ ಸಂಘವು ಒಂದು. ಇತ್ತೀಚೆಗೆ ಹೊರನಾಡಿನಲ್ಲಿಯೂ ಕನ್ನಡ ಸಮ್ಮೇಳನಗಳನ್ನು ಸಂಘ ಆಯೋಜಿಸಿ, ಕನ್ನಡದ ಅಸ್ಮಿತೆಯನ್ನು ಉಳಿಸಲು ಶ್ರಮಿಸುತ್ತಿರುವುದು ಶ್ಲ್ಯಾಘನೀಯ ಎಂದರು. 

ಸಮಾರಂಭದಲ್ಲಿ ಅತಿಥಿಗಳಾಗಿ ಪಾಲ್ಗೊಂಡ ನಾಡಿನ ಖ್ಯಾತ ಛಾಯಾಗ್ರಾಹಕರಾದ ಹುಬ್ಬಳ್ಳಿ ಸಾಲಿ ಗ್ರಾಫಿಕ್ಸ್ನ ಶಶಿ ಸಾಲಿ ಅವರು ಮಾತನಾಡಿ, ವಿದ್ಯಾಥರ್ಿ ಜೀವನದಿಂದ ಸಂಘದ ಜೊತೆ ಸಂಬಂಧ ಹೊಂದಿದ ನನ್ನಂತಹ ಅನೇಕರು ಸಂಘದ ಮಾರ್ಗದರ್ಶನದಿಂದ ಉನ್ನತ ಸ್ಥಾನಮಾನ ಹೊಂದಿರುವುದು, ನಮಗೆ ಸಂಘ ಕಟ್ಟಿಕೊಟ್ಟ ಶ್ರೀಮಂತಿಕೆ ಎನ್ನಬಹುದು. ನನ್ನ ವೃತ್ತಿ ಪ್ರಾರಂಭದ ದಿನಗಳಲ್ಲಿ ಧಾರವಾಡದ ಹಿರಿಯ ಸಾಹಿತಿಗಳು, ಸಂಗೀತಗಾರರು, ವಿದ್ವಾಂಸರು ವಿದ್ಯಾವರ್ಧಕ ಸಂಘದಲ್ಲಿ ಸೇರುತ್ತಿದ್ದ ಕ್ಷಣಗಳನ್ನು ಸೆರೆ ಹಿಡಿಯುವುದೇ ನನ್ನ ಪಾಲಿನ ಸೌಭಾಗ್ಯವಾಗಿತ್ತು ಎಂದರು.

ವೇದಿಕೆ ಮೇಲೆ ನಾಡೋಜ ಡಾ. ಪಾಟೀಲ ಪುಟ್ಟಪ್ಪ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಕ.ವಿ.ವ. ಸಂಘದ ಹಿರಿಯ ಸದಸ್ಯರಾದ ಡಾ. ಎನ್.ಎಸ್. ಹಿರೇಮಠ, ಪ್ರಿ. ಜ್ಯೋತಿ ಹೊಸೂರ, ಪ್ರೊ. ಸಿ.ಆರ್. ಯರವಿನತೆಲಿಮಠ, ರಂಜನಾ ನಾಯಕ ಅವರನ್ನು ಗೌರವಿಸಿ ಸನ್ಮಾನಿಸಲಾಯಿತು. ಸನ್ಮಾನಕ್ಕೆ ಪ್ರತಿಕ್ರಿಯೆ ನೀಡಿ ಮಾತನಾಡಿದ ರಂಜನಾ ನಾಯಕ, ವಿದ್ಯಾವರ್ಧಕ ಸಂಘದ ಗೌರವ ನನಗೆ ತವರಿನ ಪ್ರೀತಿಯನ್ನು ನೀಡಿದೆ. ಸಂಘದ ಆವರಣದಲ್ಲಿ ಹಿರಿಯ ಸಾಹಿತಿಗಳೊಂದಿಗೆ ತಾವು ಕಳೆದ ಕ್ಷಣಗಳನ್ನು ಮೆಲುಕು ಹಾಕಿದ ಅವರು ಸಂಘದ ಕನ್ನಡದ ಕೈಂಕರ್ಯ ಇತರರಿಗೆ ಅನುಕರಣೀಯ ಎಂದರು. ಇನ್ನೋರ್ವ ಸನ್ಮಾನಿತರಾದ ಪ್ರಿ. ಜ್ಯೊತಿ ಹೊಸೂರ ಮಾತನಾಡಿ, ನಮ್ಮ ಮನೆತನದಲ್ಲಿಯೇ ನಾನೇ ಮೊದಲು ಶಾಲೆ ಕಲಿತವ. ನಾನು ವಿದ್ಯೆ ಕಲಿಯದಿದ್ದರೆ ನಾನು ಏನಾಗಬಹುದಾಗಿತ್ತು ಎಂದು ಚಿಂತಿಸಿದರೆ ಆಶ್ಚರ್ಯವೆನಿಸುತ್ತದೆ. ಶಿಕ್ಷಣ ನನ್ನನ್ನು ಈ ಗೌರವಕ್ಕೆ ಪಾತ್ರನನ್ನಾಗಿಸಿದೆ ಎಂದರು.  

ವೇದಿಕೆ ಮೇಲೆ ಸಂಘದ ಕಾರ್ಯಾಧ್ಯಕ್ಷ ಶಿವಣ್ಣ ಬೆಲ್ಲದ, ಕೋಶಾಧ್ಯಕ್ಷ ಕೃಷ್ಣ ಜೋಶಿ, ಪ್ರಧಾನ ಕಾರ್ಯದಶರ್ಿ ಪ್ರಕಾಶ ಎಸ್. ಉಡಿಕೇರಿ, ಕಾರ್ಯಕಾರಿ ಸಮಿತಿ ಸದಸ್ಯರಾದ ಶಂಕರ ಕುಂಬಿ, ಪ್ರಫುಲ್ಲಾ ನಾಯಕ, ಎಸ್.ಬಿ. ಗಾಮನಗಟ್ಟಿ ಇದ್ದರು.

ಆರಂಭದಲ್ಲಿ ಆಶಾ ಪ್ರಳಯಕಲ್ಮಠ ಪ್ರಾಥರ್ಿಸಿದರು. ಸಂಘದ ಉಪಾಧ್ಯಕ್ಷರಾದ ನಿಂಗಣ್ಣ ಕುಂಟಿ ಸ್ವಾಗತಿಸಿ, ಅತಿಥಿಗಳನ್ನು ಪರಿಚಯಿಸಿದರು. ಕಾರ್ಯಕಾರಿ ಸಮಿತಿ ಸದಸ್ಯರು ಹಾಗೂ ಕಾರ್ಯಕ್ರಮ ಸಂಯೋಜಕರಾದ ಬಸವಪ್ರಭು ಹೊಸಕೇರಿ ಪ್ರಾಸ್ತಾವಿಕ ನುಡಿಗಳನ್ನಾಡಿ, ಕಾರ್ಯಕ್ರಮ ನಿರೂಪಿಸಿದರು. ಶಿವಾನಂದ ಭಾವಿಕಟ್ಟಿ ವಂದಿಸಿದರು. 

ಕಾರ್ಯಕ್ರಮದಲ್ಲಿ ಭಾರತೀಯ ನೃತ್ಯ ಅಕಾಡೆಮಿ, ಧಾರವಾಡದ ರಾಜು ಟೊಣಪಿ ಹಾಗೂ ವಿಶ್ವಾಂಬರಿ ನೃತ್ಯ ಮತ್ತು ಸಾಂಸ್ಕೃತಿಕ ಸಂಸ್ಥೆ ಧಾರವಾಡದ ಅಂಕಿತಾ ರಾವ ನೃತ್ಯ ಪ್ರದರ್ಶನ ನೀಡಿದರು.