ಉಪನೋಂದಣಾಧಿಕಾರಿ ಅಸಭ್ಯ ವರ್ತನೆ ಖಂಡಿಸಿ ವಕೀಲರ ಸಂಘ ಪ್ರತಿಭಟನೆ

ರಾಯಬಾಗ 05: ಪಟ್ಟಣದ ಉಪನೋಂದಣಾಧಿಕಾರಿರವರು ನ್ಯಾಯಾಲಯದ ಆದೇಶವಿದ್ದರೂ ಆಸ್ತಿ ವಗರ್ಾವಣೆ ಮಾಡಲು ಬೇಕಾಬಿಟ್ಟೆ ಹಣ ಪಡೆಯುತ್ತಿರುವುದನ್ನು ವಕೀಲರು ಪ್ರಶ್ನಿಸಿದಕ್ಕೆ ಮಂಗಳವಾರ ವಕೀಲರೊಂದಿಗೆ ಅಸಭ್ಯವಾಗಿ ವತರ್ಿಸಿ, ಏಕವಚನದಲ್ಲಿ ಸಂಬೋಧಿಸಿರುವುದನ್ನು ಖಂಡಿಸಿ ವಕೀಲರ ಸಂಘದ ಸದಸ್ಯರು ಬುಧವಾರದಂದು ನ್ಯಾಯಾಲಯದ ಕಾರ್ಯಕಲಾಪಗಳನ್ನು ಬಹಿಷ್ಕರಿಸಿ ಉಪನೊಂದಣಾಧಿಕಾರಿ ಧನಂಜಯ ಹಾಗೂ ಸಿಬ್ಬಂದಿಗಳನ್ನು ಉಪನೋಂದಣಿ ಕಛೇರಿಯಿಂದ ಹೊರ ಹಾಕಿ ಬಾಗಿಲು ಮುಚ್ಚಿ ಪ್ರತಿಭಟಿಸಿ, ತಹಶೀಲ್ದಾರರವರಿಗೆ ಮನವಿ ಸಲ್ಲಿಸಿದರು.

ಪಟ್ಟಣದ ಉಪನೋಂದಣಾಧಿಕಾರಿಗಳ ಕಾಯರ್ಾಲಯದಲ್ಲಿ ಯಾವುದೇ ಕೆಲಸ ತೆಗೆದುಕೊಂಡು ಹೋದರು ಸಾರ್ವಜನಿಕರಿಂದ ಅಧಿಕಾರಿ ಹಾಗೂ ಸಿಬ್ಬಂದಿಗಳು ಸಿಕ್ಕಾಪಟ್ಟೆ ಹಣ ತೆಗೆದುಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದ ವಕೀಲರು, ಸೋಮವಾರ ನೋಂದಣಿ ಕಾರ್ಯದ ನಿಮಿತ್ಯ ನೋಂದಣಿ ಕಚೇರಿಗೆ ಹೋದಾಗ ವಕೀಲರೊಬ್ಬರಿಂದ ಅನಧಿಕೃತವಾಗಿ ಹೆಚ್ಚಿನ ಹಣದ ಪಡೆದಿದ್ದರು, ಈ ಬಗ್ಗೆ ಮಂಗಳವಾರ ವಕೀಲರು ಉಪನೋಂದಣಿ ಅಧಿಕಾರಿ ಧನಂಜಯರವರನ್ನು ಪ್ರಶ್ನಿಸಿದಾಗ ವಕೀಲರೊಂದಿಗೆ ಅಸಭ್ಯವಾಗಿ ವತರ್ಿಸಿದ್ದಾರೆ. ಉಪನೋಂದಣಾಧಿಕಾರಿಗಳ ಈ ವರ್ತನೆಯನ್ನು ಖಂಡಿಸಿ ಬುಧವಾರ ವಕೀಲರ ಸಂಘದ ಸದಸ್ಯರು ನ್ಯಾಯಾಲಯದ ಕಾರ್ಯಕಲಾಪಗಳಿಂದ ಹೊರಗುಳಿದು, ತಹಶೀಲ್ದಾರ ಕಚೇರಿ ಮುಂದೆ ಪ್ರತಿಭಟನೆ ನಡಿಸಿದರು.

ಭ್ರಷ್ಟಾಚಾರದಲ್ಲಿ ನಿರತರಾಗಿರುವ ಮತ್ತು ಕಾನೂನು ಬಾಹಿರ ಕಾರ್ಯ ಮಾಡುತ್ತಿರುವ ಉಪನೊಂದಣಾಧಿಕಾರಿ ಧನಂಜಯರವರನ್ನು ಕೂಡಲೇ ಅಮಾನತ್ತು ಮಾಡಬೇಕು ಮತ್ತು ಉಪನೋಂದಣಿ ಕಚೇರಿಯಲ್ಲಿರುವ ಮಧ್ಯವತರ್ಿಯಾಗಿ ಕಾರ್ಯ ಮಾಡುತ್ತಿರುವ ಖಾಸಗಿ ವ್ಯಕ್ತಿಗಳನ್ನು ಹೊರ ಹಾಕಬೇಕು ಹಾಗೂ ಬಹುದಿನಗಳಿಂದ ಇಲ್ಲಿಯೇ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಯನ್ನು ಬೇರೆಡೆಗೆ ಕೂಡಲೇ ವಗರ್ಾಯಿಸಬೇಕೆಂದು ಒತ್ತಾಯಿಸಿ ಗ್ರೇಡ್-2 ತಹಶೀಲ್ದಾರ ಬಸಪ್ಪ ಪೂಜಾರಿ ಅವರಿಗೆ ಮನವಿ ಸಲ್ಲಿಸಿದರು. ನಂತರ ಉಪನೋಂದಣಿ ಅಧಿಕಾರಿರವರು ಸಾರ್ವಜನಿಕವಾಗಿ ವಕೀಲರಲ್ಲಿ ಕ್ಷಮೆಯಾಚಿಸಿದರು. 

ರಾಯಬಾಗ ವಕೀಲರ ಸಂಘದ ಅಧ್ಯಕ್ಷ ಪಿ.ಆರ್.ಗುಡೋಡಗಿ, ಉಪಾಧ್ಯಕ್ಷ ಎಸ್.ಎಚ್.ನಿಡೋಣಿ, ನ್ಯಾಯವಾದಿಗಳಾದ ಟಿ.ಕೆ.ಶಿಂಧೆ, ರಾಜು ಶಿರಗಾಂವೆ, ಆರ್.ಓ.ಲೋಹಾರ, ವಿ.ಎಸ್.ಪೂಜಾರಿ, ಬಿ.ಆರ್.ಪಡಲಾಳೆ, ಎಸ್.ಬಿ.ಪಾಟೀಲ, ಬಿ.ಬಿ.ಈಟಿ, ಆರ್.ಎಚ್.ಗೊಂಡೆ, ಎ.ಬಿ.ನಡೊಣಿ, ಎ.ಬಿ.ತೆಗೂರ, ಆರ್.ಎಮ್.ಹೆಗಡೆ ಸೇರಿದಂತೆ ಅನೇಕರು ಇದ್ದರು.