ಲೋಕದರ್ಶನ ವರದಿ
ಗೋಕಾಕ20: ಸ್ಥಳೀಯ ಪ್ರತಿಷ್ಠಿತ ಆದರ್ಶ ಶಿಕ್ಷಣ ಸಂಸ್ಥೆಯ 30 ನೇ ವಾಷರ್ಿಕ ಸ್ನೇಹ ಸಮ್ಮೇಳನ ಇದೇ ದಿ.22 ಮತ್ತು 23 ರಂದು ಜರುಗಲಿದೆ.
ಬೆಳಿಗ್ಗೆ 10 ಘಂಟೆಗೆ ಶಂಕರಲಿಂಗ ಕಲ್ಯಾಣ ಮಂಟಪದಲ್ಲಿ ಕ್ರೀಡಾ ಮತ್ತು ಸಾಂಸ್ಕೃತಿಕ ಚಟುವಟಿಕೆ ವಿಜೇತರಿಗೆ ಪಾರಿತೋಷಕ ವಿತರಣೆ ಜರುಗಿದರೆ ಎರಡೂ ದಿನ ಸಂಜೆ 4 ಗಂಟೆಗೆ ಮಕ್ಕಳಿಂದ ಮನರಂಜನಾ ಕಾಯಕ್ರಮಗಳು ಪುಂಡಿಕೇರಿ ಓಣಿಯಲ್ಲಿರುವ ಶಾಲಾ ಆವರಣದಲ್ಲಿ ಜರುಗಲಿವೆ.
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಕ್ಷೇತ್ರ ಶಿಕ್ಷಣಾಧಿಕಾರಿ ಜಿ. ಬಿ. ಬಳಗಾರ, ಹೆಸ್ಕಾಂನ ಅಧೀಕ್ಷಕ ಅಭಿಯಂತರಾದ ಎಸ್. ಎಮ್. ಸಸಾಲಟ್ಟಿ, ಶಿಕ್ಷಕ ಸಂಯೋಜಕ ಎನ್. ಆರ್. ಪಾಟೀಲ, ನಿವೃತ್ತ ಪಾಧ್ಯಾಪಕರಾದ ಪ್ರೋ ಗಂಗಾಧರ ಮಳಗಿ ಆಗಮಿಸಲಿದ್ದಾರೆ.
ಎರಡೂ ದಿನದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷ ಆಯ್.ವ್ಹಿ.ಕೌತನಾಳಿ ವಹಿಸಿಕೊಳ್ಳಲಿದ್ದಾರೆ.
ಕಾರಣ ಆ ದಿನ ಪಾಲಕರು, ಸಂಸ್ಥೆಯ ಹಿತೈಷಿಗಳು, ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮಕ್ಕೆ ಶೋಭೆ ತರಬೇಕೆಂದು ಸಂಸ್ಥೆ ಮುಖ್ಯಸ್ಥರು ತಿಳಿಸಿದರು