ಧಾರವಾಡ 02: ಜಗತ್ತಿನ ಎಲ್ಲಾ ದೇಶಗಳ ಪರಿಸ್ಥಿತಿಯನ್ನು ಇಂದಿನ ಕಾಲದಲ್ಲಿ ಗಮನಿಸಿದಾಗ ಆಡಳಿತಾತ್ಮಕವಾಗಿ ಎಷ್ಟೋ ದೇಶಗಳು ಅರಾಜಕತೆ, ಅಂತರಿಕ ನಾಗರಿಕ ಯುದ್ಧಗಳ ಸಮಸ್ಯೆ ಸೇರಿದಂತೆ ಹಲವಾರು ಸಮಸ್ಯೆಗಳಲ್ಲಿ ಬಳಲುತ್ತಿವೆ. ಆದರೆ ನಮ್ಮ ದೇಶದ ಉತ್ಕೃಷ್ಟ ಸಂವಿಧಾನವು ಎಲ್ಲಾ ಸಮಸ್ಯೆಗಳಿಗೆ ಪರಿಹಾರವನ್ನು ಸೂಚಿಸಿದ್ದು, ಇಂದಿಗೂ ಪ್ರಜೆಗಳಿಗೆ ಯಾವುದೇ ತೊಂದರೆಯಾಗದಂತೆ ಸಮಾನವಾಗಿ ನೋಡಿಕೊಳ್ಳುವಂತೆ ಮಾಡಿದೆ. ಬೃಹತ್ ಲಿಖಿತ ಸಂವಿಧಾನ ನಮ್ಮ ದೇಶದ್ದು ಎಂಬುದು ನಾವೆಲ್ಲರೂ ಹೆಮ್ಮೆ ಪಡುವಂಥದ್ದು ಎಂದು ಧಾರವಾಡದ ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿದರ್ೇಶಕ ಎನ್.ಮುನಿರಾಜು ಅಭಿಪ್ರಾಯಪಟ್ಟರು.
ಅವರು ಇತ್ತೀಚೆಗೆ ಕೆಲಗೇರಿಯ ಆಂಜನೇಯ ನಗರದ ಎಚ್ಡಿಎನ್ ಪ್ರೌಢಶಾಲೆಯಲ್ಲಿ ಗಣಕರಂಗ, ಮಾತೋಶ್ರೀ ರಮಾಬಾಯಿ ಅಂಬೇಡ್ಕರ ಮಹಿಳಾ ಪ್ರಗತಿ ಮತ್ತು ಅಧ್ಯಯನ ಸಂಸ್ಥೆಯ ಸಂಯುಕ್ತಾಶ್ರದಲ್ಲಿ ಹಮ್ಮಿಕೊಳ್ಳಲಾಗಿದ್ದ ವಿದ್ಯಾಥರ್ಿ ದಿನಾಚರಣೆ ಮತ್ತು ಸಂವಿಧಾನ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಬಡತನದ ಹಿನ್ನಲೆಯಿಂದ ಬಂದ ಬಹುಮುಖ ವ್ಯಕ್ತಿತ್ವದ ಬಾಬಾಸಾಹೇಬ ಡಾ.ಬಿ.ಆರ್.ಅಂಬೇಡ್ಕರ ಅವರು ತಮ್ಮ ದೈಹಿಕ ಕಾಯಿಲೆಯನ್ನು ಲೆಕ್ಕಿಸದೇ ಬಹುತ್ವದ ಭಾರತಕ್ಕೆ ಒಪ್ಪುವಂಥಹ ಸಂವಿಧಾನ ರಚಿಸಿ ಕೊಡುವ ಮೂಲಕ ಅಖಂಡ ಭಾರತಕ್ಕೆ ದಿಕ್ಸೂಚಿಯಾಗಿ ಅಮರರಾಗಿದ್ದಾರೆ. ಅವರ ಕನಸಿನ ಭಾರತವು ಸಂವಿಧಾನದ ಮೂಲಕ ಈಡೇರಬೇಕಾಗಿದೆ. ವಿನಾಕಾರಣ ಅಸೂಯೆ, ಅಪನಂಬಿಕೆ ತೋರದೆ ಪರಸ್ಪರ ಸೌಹಾರ್ಧತೆಯಿಂದ ಬಾಳಬೇಕಾಗಿದೆ ಎಂದು ವಿವರಿಸಿದರು.
ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಚಿಂತಕ ಲಕ್ಷ್ಮಣ ಬಕ್ಕಾಯಿ ಅವರು ಮಾತನಾಡುತ್ತಾ, ಸರ್ವರ ಏಳಿಗೆಯನ್ನು ಬಯಸುವ ವಿಶಾಲ ಭಾರತದ ಅಭಿವೃದ್ಧಿಯನ್ನು ಗಮನದಲ್ಲಿಟ್ಟುಕೊಂಡು ಹಲವಾರು ಅಂಶಗಳನ್ನು ಸೇರಿಸಲಾದ, ಇಡೀ ವಿಶ್ವವೇ ಮೆಚ್ಚಿದ ಸಂವಿಧಾನ ನಮ್ಮದಾಗಿದೆ. ವಾಸ್ತವ ನೆಲೆಗಟ್ಟಿನ ಹಿನ್ನಲೆಯಲ್ಲಿ ಈ ದೇಶದ ವಿಚಾರಗಳಿಗೆ ವಿದ್ಯಾಥರ್ಿಗಳು ಈಗಿನಿಂದಲೇ ತೊಡಗಿಸಿಕೊಳ್ಳಬೇಕೆಂದು ಹೇಳಿದರು.
ಅಧ್ಯಕ್ಷತೆಯನ್ನು ಶಿಕ್ಷಣ ಸಂಸ್ಥೆಯ ಅಧ್ಯಕ್ಷ ನಿಂಗಪ್ಪ ಮುಗಳಿ ವಹಿಸಿದ್ದರು. ಶೋಭಾ ಚಲವಾದಿ, ವೈ.ಡಿ.ನವಲಗುಂದ, ಹಿಪ್ಪರಗಿ ಸಿದ್ಧರಾಮ, ಡಿ.ವೈ.ಕರೆಪ್ಪನವರ, ಯುಬಿ ಅಂಗಡಿ, ಕಮಲಾ ತಳವಾರ ಮುಂತಾದವರು ಉಪಸ್ಥಿತರಿದ್ದರು. ಗಾಯಕ ಚನಬಸು ಮಾಳಗಿ ನಿರ್ವಹಿಸಿದರು. ಶಾಲಾ ಶಿಕ್ಷಕ ಸಿಬ್ಬಂದಿ, ವಿದ್ಯಾಥರ್ಿಗಳು ಸೇರಿದಂತೆ ಸಾರ್ವಜನಿಕರು ಉಪಸ್ಥಿತರಿದ್ದರು.