ಭಾರತೀಯರಿಗೆ ಸಂವಿಧಾನವು ಪವಿತ್ರ ಗ್ರಂಥ: ನ್ಯಾ.ಕೆ.ಜಿ.ಶಾಂತಿ
The Constitution is a sacred book for Indians: Justice K.G. Shanti
ಬಳ್ಳಾರಿ 27: ವಿಶ್ವದ ಅತಿದೊಡ್ಡ ಬಲಿಷ್ಠವಾದ, ಶಕ್ತಿಯುತವಾದ ಲಿಖಿತ ಸಂವಿಧಾನ ಹೊಂದಿದ ದೇಶ ನಮ್ಮದು. ಭಾರತೀಯರಿಗೆ ಸಂವಿಧಾನವು ಒಂದು ಪವಿತ್ರ ಗ್ರಂಥವಾಗಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರೂ ಆಗಿರುವ ಕೆ.ಜಿ.ಶಾಂತಿ ಅವರು ಹೇಳಿದರು.ಜಿಲ್ಲಾ ನ್ಯಾಯಾಂಗ ಮತ್ತು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ವತಿಯಿಂದ ನಗರದ ಇವರ ಸಂಯುಕ್ತಾಶ್ರಯದಲ್ಲಿ ನಗರದ ತಾಳೂರು ರಸ್ತೆಯ ಹೊಸ ನ್ಯಾಯಾಲಯದ ಸಭಾಂಗಣದಲ್ಲಿ ಬುಧವಾರ ಏರಿ್ಡಸಿದ್ದ ಸಂವಿಧಾನದ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ಸಮಾಜದಲ್ಲಿ ನಾವೆಲ್ಲರೂ ಸಮಾನರು, ಪ್ರತಿಯೊಬ್ಬರೂ ನಮ್ಮ ಕರ್ತವ್ಯ ತಿಳಿದುಕೊಂಡು ದೇಶದ ಭದ್ರತೆಗಾಗಿ ಅಲ್ಲದೇ, ನಮ್ಮ ಭದ್ರತೆಗಾಗಿ ಸಹ ಕಾನೂನುಗಳನ್ನು ಪಾಲಿಸುತ್ತ ಸಂವಿಧಾನದ ಹಕ್ಕುಗಳನ್ನು ಮತ್ತು ಕರ್ತವ್ಯಗಳನ್ನು ಪಾಲಿಸಿದರೆ ಸಂತೋಷದ ಜೀವನ ಹಾಗೂ ರಾಷ್ಟ್ರದ ಏಕತೆ, ಅಖಂಡತೆ ಮತ್ತು ವ್ಯಕ್ತಿ ಗೌರವವನ್ನು ಉಳಿಸಿಕೊಳ್ಳಬಹುದು ಎಂದರು.
ಸಂವಿಧಾನದ ಮಹತ್ವ, ಅದರ ರಚನಾಕಾರರು ಮತ್ತು ಆಧುನಿಕ ಭಾರತಕ್ಕೆ ಅದರ ಪ್ರಸ್ತುತತೆಯ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಭಾರತ ಸರ್ಕಾರವು 2015 ರಲ್ಲಿ ನವೆಂಬರ್ 26 ಅನ್ನು ಅಧಿಕೃತವಾಗಿ ಸಂವಿಧಾನ ದಿನ ಎಂದು ಘೋಷಿಸಿ ಡಾ.ಬಿ.ಆರ್.ಅಂಬೇಡ್ಕರ್ ಅವರಿಗೆ ಗೌರವ ಸಲ್ಲಿಸಲಾಯಿತು ಎಂದು ಹೇಳಿದರು. ನಮ್ಮ ಸಂವಿಧಾನವು ಲಿಖಿತ ರೂಪದಲ್ಲಿದ್ದು, ಆಂಗ್ಲ ಮತ್ತು ಹಿಂದಿ ಎರಡರಲ್ಲೂ ಕೈಬರಹದ ಕ್ಯಾಲಿಗ್ರಫಿಯಲ್ಲಿ ಬರೆಯಲಾಗಿದೆ. ಇದರ ಮೂಲ ಪ್ರತಿಗಳನ್ನು ಪ್ರೇಮ್ ಬಿಹಾರಿ ನಾರಾಯಣ ರೈಜಾದಾ ಅವರು ದೇವನಾಗರಿ ಲಿಪಿಯಲ್ಲಿ ಬರೆದಿದ್ದಾರೆ. ಆಚಾರ್ಯ ನಂದಲಾಲ್ ಬೋಸ್ ಅವರ ನೇತೃತ್ವದಲ್ಲಿ ಶಾಂತಿನಿಕೇತನದ ಕಲಾವಿದರು ಕೈಯಿಂದ ರಚಿಸಿದ್ದಾರೆ.ಮೂಲ ಪ್ರತಿಗಳನ್ನು ಈಗಲೂ ಸಹ ಸಂಸತ್ತಿನ ಗ್ರಂಥಾಲಯದಲ್ಲಿಸಂರಕ್ಷಿಸಲಾಗಿದೆ ಎಂದರು.ಸಮಾಜದಲ್ಲಿ ಬದಲಾದ ವ್ಯವಸ್ಥೆಗೆ ತಕ್ಕಂತೆ ಹಲವು ಬಾರಿ ಸಂವಿಧಾನದ ಕಾಯ್ದೆಗಳು ಬದಲಾವಣೆ ಮತ್ತು ಸೇರೆ್ಡಗೊಂಡಿವೆ. ಪ್ರಾರಂಭದಲ್ಲಿ 395 ವಿಧಿಗಳು, 22 ಭಾಗಗಳು, ಮತ್ತು 8 ಅನುಸೂಚಿಗಳು ಇದ್ದು, ನಂತರ 368 ವಿಧಿಗಳು, 28 ಭಾಗಗಳು ಸೇರೆ್ಡಗೊಂಡಿವೆ. ಸಂವಿಧಾನದಲ್ಲಿ ರಾಜನೀತಿ, ಮೂಲಭೂತ ಕರ್ತವ್ಯ, ಕಾನೂನು ವ್ಯವಸ್ಥೆ, ಸ್ವಾತಂತ್ರ್ಯ, ಸಮಾನತೆ, ಶಿಕ್ಷಣ, ಭಾರತೀಯ ಪ್ರಜೆಯ ಕರ್ತವ್ಯ ಸೇರಿದಂತೆ ಇನ್ನಿತರೆ ವಿಷಯಗಳ ಬಗ್ಗೆ ತಿಳಿಸಿಕೊಡಲಾಗಿದೆ ಎಂದರು.
2002 ರಲ್ಲಿ ಪೋಷಕರು ಮಕ್ಕಳನ್ನು ದೇಶದ ಶಕ್ತಿಯಾಗಿ, ಆಸ್ತಿಯಾಗಿ ಬೆಳೆಸುವುದು ಹಾಗೂ ಕಡ್ಡಾಯವಾಗಿ ಶಿಕ್ಷಣ ನೀಡುವುದು ಪೋಷಕರ ಕರ್ತವ್ಯವಾಗಿದೆ ಎಂಬ ಕಾಯ್ದೆ ಸೇರಿದಂತೆ ಹಲವಾರು ಕಾಯ್ದೆಗಳು ಜಾರಿಯಾದವು. ಸಂವಿಧಾನದ ಪೀಠಿಕೆ ಓದುವುದರಿಂದ ಭಾರತದ ಪ್ರಜೆಗಳಾದ ನಮ್ಮ ಕರ್ತವ್ಯ ಏನೆಂದು ತಿಳಿಯಬಹುದು ಎಂದು ಸಂವಿಧಾನದ ಸಮಗ್ರ ಮಾಹಿತಿ ನೀಡಿದರು.ಕೌಟುಂಬಿಕ ನ್ಯಾಯಾಲಯದ ನ್ಯಾಯಾಧೀಶರಾದ ವೆಂಕಟೇಶ ಅವರು ಸಂಪನ್ಮೂಲ ವ್ಯಕ್ತಿಯಾಗಿ ಸಂವಿಧಾನದ ಮಹತ್ವದ ಬಗ್ಗೆ ಮಾತನಾಡಿದರು.ಕಾರ್ಯಕ್ರಮಕ್ಕೂ ಮುನ್ನ ನ್ಯಾ.ಕೆ.ಜಿ ಶಾಂತಿ ಅವರು ಸಂವಿಧಾನ ಪೀಠಿಕೆಯ ಪ್ರತಿಜ್ಞಾ ವಿಧಿ ಭೋದಿಸಿದರು.ಈ ಸಂದರ್ಭದಲ್ಲಿಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರಾದ ರಾಜೇಶ್ ಎನ್.ಹೊಸಮನೆ, 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಬಿ.ಜಿ ಪ್ರಮೋದ್, ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ರಾಘವೇಂದ್ರ ಗೌಡ ಬಿ.ಜಿ., 4ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ವಾಸುದೇವ ರಾಧಾಕಾಂತ್ ಗುಡಿ, ಸಿಜೆಎಂ ಹಿರಿಯ ಸಿವಿಲ್ ನ್ಯಾಯಾಧೀಶ ಇಬ್ರಾಹಿಂ ಎಂ ಮುಜಾವರ್, 2ನೇ ಹೆಚ್ಚುವರಿ ಸಿವಿಲ್ ನ್ಯಾಯಾಧೀಶರಾದ ವಿನುತಾ ಬಿ.ಎಸ್., 3ನೇ ಹೆಚ್ಚುವರಿ ಸಿವಿಲ್ ಮತ್ತು ಜೆಎಂಎಫ್ ನ್ಯಾಯಾಧೀಶ ಮುದುಕಪ್ಪ ಒಡನ್, 2ನೇ ಹಿರಿಯ ಸಿವಿಲ್ ನ್ಯಾಯಾಧೀಶರಾದ ನಸ್ರತ್ ಮುಖ್ತಾರ್ ಅಹ್ಮದ್ ಖಾನ್, ಸಿವಿಲ್ ಮತ್ತು ಜೆಎಂಎಫ್ ನ್ಯಾಯಾಧೀಶ ನಾಗೇಶ್ ನಾಯ್ಕ, 1ನೇ ಹೆಚ್ಚುವರಿ ಸಿವಿಲ್ ಮತ್ತು ಜೆಎಂಎಫ್ ನ್ಯಾಯಾಧೀಶ ಸಿದ್ಧಲಿಂಗಯ್ಯ ಗಂಗಾಧರಮಠ ಸೇರಿದಂತೆ ನ್ಯಾಯಾಲಯದ ಅಧಿಕಾರಿ-ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 