ಲೋಕದರ್ಶನವರದಿ
ಹಾವೇರಿ, 01 : ಕನರ್ಾಟಕದಲ್ಲಿ ಮೊದಲ ಸಾಮ್ರಾಜ್ಯ ನಿಮರ್ಿಸಿದ ಶ್ರೇಯಸ್ಸು ಬಾದಾಮಿ ಚಾಲುಕ್ಯರಿಗೆ ಸಲ್ಲುತ್ತಿದ್ದು, ಪ್ರಾಚೀನ ವಾಸ್ತು ಹಾಗೂ ಶಿಲ್ಪಶಾಸ್ತ್ರಗಳಿಗೆ ಅನುಗುಣವಾಗಿ ದೇವಾಲಯಗಳು ನಿಮರ್ಾಣಗೊಂಡುವು ಎಂದು ಗುದ್ಲೆಪ್ಪ ಹಳ್ಳಿಕೇರಿ ಮಹಾವಿದ್ಯಾಲಯದ ಇತಿಹಾಸ ವಿಭಾಗವು ಬಿ.ಎ. ವಿದ್ಯಾಥರ್ಿಗಳಿಗೆ ಆಯೋಜಿಸಿದ್ದ ಬಾದಾಮಿ ಚಾಲುಕ್ಯರ ಕಾಲದ ವಾಸ್ತುಶಿಲ್ಪ ಕುರಿತ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದ ಶಿಗ್ಗಾವಿಯ ಎಸ್.ಆರ್.ಜೆ.ವಿ. ಮಹಾವಿದ್ಯಾಲಯದ ಇತಿಹಾಸ ಪ್ರಾಧ್ಯಾಪಕ ಪ್ರೊ. ಪಿ. ಸಿ. ಹಿರೇಮಠ ತಿಳಿಸಿದರು.
ಗುಹಾಲಯ ಹಾಗೂ ಕಟ್ಟಡ ದೇವಾಲಯಗಳು ಈ ಕಾಲದಲ್ಲಿ ನಿಮರ್ಾಣಗೊಂಡಿದ್ದು, ನಾಗರ, ದ್ರಾವಿಡ ಹಾಗೂ ವೇಸರಶೈಲಿಯ ಎಲ್ಲ ಪ್ರಕಾರದ ದೇವಾಲಯಗಳನ್ನು ನಿಮರ್ಿಸಿದ ಶ್ರೇಯಸ್ಸು ಚಾಲುಕ್ಯ ದೊರೆಗಳಿಗೆ ಸಲ್ಲುತ್ತದೆ ಎಂದರು. ಈ ಹಿನ್ನಲೆಯಲ್ಲಿ ಚಾಲುಕ್ಯರ ಪ್ರಮುಖ ಕಲಾ ಕೇಂದ್ರ 'ಐಹೊಳೆಯನ್ನು ದೇವಾಲಯಗಳ ಶಿಲ್ಪದ ತೊಟ್ಟಿಲುಗಳಲ್ಲಿ ಒಂದು' ಎಂಬುದಾಗಿ ಹೇಳಲಾಗಿದೆ ಎಂದು ತಿಳಿಸಿದರು. ಸ್ಥಳೀಯವಾಗಿ ದೊರೆತ ಒರಟುಶಿಲೆಯನ್ನೆ ದೇವಾಲಯಗಳ ನಿಮರ್ಾಣಕ್ಕೆ ಬಳಸಲಾಗಿರುವುದರಿಂದ ದೇವಾಲಯಗಳಲ್ಲಿನ ಶಿಲ್ಪಗಳು ಸೂಕ್ಷ್ಮಕೆತ್ತನೆಯನ್ನು ಹೊದಿರುವುದಿಲ್ಲ ಎಂಬುದಾಗಿ ತಿಳಿಸಿದರು. ವಾಸ್ತುಶಿಲ್ಪದ ಹಿನ್ನಲೆ ಹಾಗೂ ಬೆಳವಣಗೆಗಳನ್ನು ಎಳೆ ಎಳೆಯಾಗಿ ಬಿಚ್ಚಿಟ್ಟ ಅವರು ಚಾಲುಕ್ಯ ಕಲಾ ಕೇಂದ್ರಗಳಲ್ಲಿ ವಿವಿಧ ಧರ್ಮಗಳ ದೇವಾಲಯಗಳು ವಿಶಿಷ್ಟ ಮಾದರಿಯಲ್ಲಿ ಬೆಳೆದು ಬಂದವು ಎಂಬುದನ್ನು ಸವಿವರವಾಗಿ ತಿಳಿಸಿದರು.
ಅದ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಡಾ. ಎಂ. ಎಸ್. ಯರಗೊಪ್ಪ ಇಂತಹ ಉಪನ್ಯಾಸಗಳನ್ನು ಆಲಿಸುವುದರ ಮೂಲಕ ವಿದ್ಯಾಥರ್ಿಗಳು ತಮ್ಮ ಜ್ಞಾನವನ್ನ ಹೆಚ್ಚಿಸಿಕೊಳ್ಳವಂತೆ ಕರೆ ನೀಡಿದರು.
ಮಹಾವಿದ್ಯಾಲಯದ ಇತಿಹಾಸ ಪ್ರಾಧ್ಯಾಪಕ ಡಾ. ಶಿವಯೋಗಿ ಕೋರಿಶೆಟ್ಟರ ಸ್ವಾಗತಿಸಿದರು. ಕು. ಸವಿತಾ ಪ್ರಾಥರ್ಿಸಿದರೆ, ಪ್ರೊ. ಸಿದ್ಧೇಶ್ವರ ಹುಣಸಿಕಟ್ಟಿ ವಂದಿಸಿದರು. ಪ್ರೊ. ನಾಗರಾಜ ಮುಚ್ಚಟ್ಟಿ ಕಾರ್ಯಕ್ರಮ ನಿರೂಪಿಸಿದರು.