ಲೋಕದರ್ಶನ ವರದಿ
ಇಂಡಿ 25: ತಾಲೂಕಿನ ಶಿರಶ್ಯಾಡ ಗ್ರಾಮದ ಗ್ರಾಮದೇವರಾದ ಬಸವೇಶ್ವರ ಜಾತ್ರೆಯನ್ನು ರದ್ದುಪಡಿಸುವ ಕುರಿತು ಗ್ರಾಮೀಣ ಪಿಎಸ್ಐ ಎಸ.ಎಮ್. ಶಿರಗುಪ್ಪಿ ಅವರ ಸಮ್ಮುಖದಲ್ಲಿ ಸಭೆ ನಡೆಸಲಾಯಿತು.
ಸಭೆಯನ್ನುದ್ದೇಶಿಸಿ ಪಿಎಸ್ಐ ಶಿರಗುಪ್ಪಿ ಮಾತನಾಡಿ ಕೊರೊನಾ ಹರಡುವಿಕೆಯನ್ನು ತಡೆಗಟ್ಟಲು ಕಡ್ಡಾಯವಾಗಿ ಸಭೆ, ಸಮಾರಂಭಗಳನ್ನು ಮದುವೆ ಸೇರಿದಂತೆ ಇನ್ನಿತರ ಎಲ್ಲ ಧಾಮರ್ಿಕ ಸಮಾರಂಭಗಳನ್ನು ಮಾಡದಂತೆ ಸರಕಾರ ಆದೇಶಿಸಿದ್ದು ಗ್ರಾಮಸ್ಥರು ಸರಕಾರದ ಆದೇಶ ಪಾಲಿಸಲೇಬೇಕು ಎಂದು ತಿಳಿಸಿದರು.
ಇದಕ್ಕೆ ಗ್ರಾಮಸ್ಥರೆಲ್ಲರೂ ಒಪ್ಪಿಗೆ ಸೂಚಿಸಿ ಈ ಬಾರಿ ಜಾತ್ರೆ ರದ್ದುಪಡಿಸುತ್ತೇವೆ ಎಂದು ಒಪ್ಪಿಕೊಂಡರು. ಪ್ರತೀ ವರ್ಷ ಬಸವ ಜಯಂತಿಯ ದಿನದಂದು ಶಿರಶ್ಯಾಡ ಗ್ರಾಮದಲ್ಲಿ ಬಸವೇಶ್ವರ ಜಾತ್ರಾ ಮಹೋತ್ಸವ ಅಥಿ ವಿಜೃಂಭಣೆಯಿಂದ ನಡೆಯುತ್ತಿತ್ತು. ಕೊರೊನಾ ಮಾಹಾಮಾರಿಯಿಂದ ಜಾತ್ರೆಯು ರದ್ದಾಗಿದೆ ಎಂದು ಜಾತ್ರಾ ಕಮೀಟಿ ಪ್ರಕಟಣೆ ತಿಳಿಸಿದೆ.
ಸಭೆಯಲ್ಲಿ ಶಂಕರಗೌಡ ಪಾಟೀಲ, ಅಣ್ಣಪ್ಪ ಮಾಸ್ತರ್ ಬಿರಾದಾರ, ಬಾಳು ಮುಳಜಿ, ಬಿ.ಕೆ.ಬಿರಾದಾರ, ದಾದು ಕೋಣಶಿರಸಗಿ, ಗ್ರಾಮ ಪಂಚಾಯತ್ ಸಿಬ್ಬಂದಿ ಶಿವಯ್ಯ ಹಿರೇಮಠ, ಮಹಾದೇವ ತಡ್ಲಗಿ, ಪೊಲೀಸ್ ಸಿಬ್ಬಂದಿಗಳಾದ ಯಶ್ವಂತ ನಾಯಿಕ್ ಮತ್ತು ಶ್ರೀಧರ ಬಗಲಿ ಇದ್ದರು.