ಗದಗ 25: ಬಂಜಾರಾ ಸಮುದಾಯದವರು ಸಮಾಜದ ಮುಖ್ಯ ವಾಹನಿಗೆ ಬರಬೇಕು ಎಂದು ಗದಗ ಜಿ.ಪಂ. ಅಧ್ಯಕ್ಷ ಎಸ್.ಪಿ. ಬಳಿಗಾರ ನುಡಿದರು. ಅವರಿಂದು ನಗರದ ಅಂಬೇಡ್ಕರ್ ಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಗದಗ ವತಿಯಿಂದ ಏರ್ಪಡಿಸಲಾದ ಸಂತ ಸೇವಾಲಾಲರ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಬಂಜಾರ ಸಮುದಾಯದವರು ಒಕ್ಕಲುತನ ನಂಬಿರವವರು ಹಾಗೂ ದೇಶದ ಆಣೆಕಟ್ಟು ಕಟ್ಟುವುದರಲ್ಲಿ ಬಂಜಾರಾ ಸಮುದಾಯದ ಶ್ರಮವಿದೆ. ಸಮುದಾಯದವರು ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ಕೊಟ್ಟು ಸಮಾಜದ ಮುಖ್ಯ ವಾಹಿನಿಗೆ ಬರಬೇಕಾಗಿದೆ ಎಂದು ಜಿ.ಪಂ. ಅಧ್ಯಕ್ಷ ಎಸ್.ಪಿ. ಬಳಿಗಾರ ನುಡಿದರು.
ಪಾಂಡಪ್ಪ ಲಮಾಣಿ ಹಾಗೂ ಸುರೇಶ ರಾಠೋಡ ಅವರುಗಳು ಉಪನ್ಯಾಸ ನೀಡಿ ಸಂತ ಸೇವಾಲಾಲರು ಭೀಮಾನಾಯಕ ಅವರ ಮಗ. ದುಡಿಮೆಯಲ್ಲಿ ಪರಮಾತ್ಮನನ್ನು ಕಂಡವರು. ಸಂತ ಸೇವಾಲಾಲರು ತಮ್ಮ ಬಾಲ್ಯದಲ್ಲಿ ದನಕಾಯುತ್ತ ಕಲ್ಲುಬಂಡೆಯನ್ನು ನಗಾರೆಯಂತೆ ಬಾರಿಸುತ್ತಾ ಕೊಳಲೂದುತ್ತ ಶಿರಸಿ ಮಾರಿಕಾಂಬಾ ದೇವಿಯನ್ನು ಆರಾಧಿಸುತ್ತಿದ್ದರು. ಸಂತ ಸೇವಾಲಾಲರು ಈಸುವುದಾದರೆ ಜ್ಞಾನ ಸಾಗರದಲ್ಲಿ ಈಸು. ಕುಣಿಯುವುದಾದರೂ ಭಕ್ತಿ ಪಂಥದಲ್ಲಿ ಕುಣಿಯೆಂದು ಸಮಾಜಕ್ಕೆ ಸಂದೇಶ ನೀಡಿದ್ದಾರೆ ಎಂದು ತಿಳಿಸಿದರು ಹಾಗೂ ಸಂತ ಸೇವಾಲಾಲರ ಜೀವನ ಹಾಗೂ ಸಂದೇಶಗಳನ್ನು ಹಾಡಿನ ಮುಖಾಂತರ ವಿವರಿಸಿದರು.
ಅಪರ ಜಿಲ್ಲಾಧಿಕಾರಿ ಶಿವಾನಂದ ಕರಾಳೆ ಅವರು ಮಾತನಾಡಿ ಸಂತ ಸೇವಾಲಾಲರು ಸುರಗೊಂದನ ಕೊಪ್ಪದಲ್ಲಿ ಜನಿಸಿದರು. ಜನರಲ್ಲಿ ಶೈಕ್ಷಣಿಕ ಹಾಗೂ ಸಾಮಾಜಿಕ ಸುಧಾರಣೆಗೆ ಸಂತ ಸೇವಾಲಾಲರು ಶ್ರಮಿಸಿದರು. ಸಂತ ಸೇವಾಲಾಲರ ತತ್ವಗಳನ್ನು ಹಾಗೂ ಮಾರ್ಗದರ್ಶನಗಳನು ಜನಸಾಮಾನ್ಯರು ಅಳವಡಿಸಿಕೊಂಡು ಉತ್ತಮ ಪ್ರಜೆಯಾಗಲು ಪ್ರಯತ್ನಿಸಬೇಕೆಂದು ತಿಳಿಸಿದರು.
ಸಮಾಂಭದಲ್ಲಿ ಗದಗ ಜಿ.ಪಂ. ಉಪಾಧ್ಯಕ್ಷೆ ಶಕುಂತಲಾ ಮೂಲಿಮನಿ, ತಾ.ಪಂ. ಅಧ್ಯಕ್ಷ ಮೋಹನ ದುರಗಣ್ಣವರ, ತಾ.ಪಂ. ಉಪಾಧ್ಯಕ್ಷೆ ಸುಜಾತಾ ಖಂಡು, ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮಂಜುನಾಥ ಚವ್ಹಾಣ, ಮಹಾರಾಷ್ಟ್ರದ ಅರುಣಕುಮಾರ ಚವ್ಹಾಣ , ಗದಗ ಜಿಲ್ಲಾ ಸರ್ವ ತಾಂಡಾದ ನಾಯಕರು, ಹಾಗೂ ಕಾರಭಾರಿ, ಮತ್ತು ಗುರು ಹಿರಿಯರು, ಸಮಾಜದ ಸರ್ವ ಸಂಘಟನೆಗಳ ಅಧ್ಯಕ್ಷರು, ಸರ್ವ ಪದಾಧಿಕಾರಿಗಳು, ನಾಗರಿಕರು ಉಪಸ್ಥಿತರಿದ್ದರು.
ಜೇನುಗೂಡು ಕಲಾ ತಂಡ ನಾಡಗೀತೆ ಪ್ರಸ್ತುತಪಡಿಸಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿದರ್ೇಶಕ ಅಜರ್ುನ ಗೊಳಸಂಗಿ ಸರ್ವರನ್ನು ಸ್ವಾಗತಿಸಿ ವಂದಿಸಿದರು. ಸಂಗಪ್ಪ ಬಳಗೋಡ ಕಾರ್ಯಕ್ರಮ ನಿರೂಪಿಸದರು. ನಂತರ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.