ನವದೆಹಲಿ, ಮೇ 8 ಐಪಿಎಲ್ ಪಂದ್ಯದ ವೇಳೆ ಗಾಯಕ್ಕೆ ತುತ್ತಾಗಿರುವ ಮಧ್ಯಮ ಕ್ರಮಾಂಕದ ಬ್ಯಾಟ್ಸ್ಮನ್ ಕೇದಾರ್ ಜಾದವ್, ಅವರ ಫಿಟ್ನೆಸ್ ಬಗ್ಗೆ ಬಿಸಿಸಿಐ ಮೇ 23ರ ವರೆಗೂ ಕಾಯಲಿದೆ. ವಿಶ್ವಕಪ್ ತಂಡದಲ್ಲಿ ಬದಲಾವಣೆ ಮಾಡಿಕೊಳ್ಳಲು ಕೊನೆಯ ದಿನವಾದ ಮೇ 23ರ ವರೆಗೂ ಕಾಲಾವಕಾಶ ನೀಡಲಾಗಿದೆ. ಎಂಎಸ್ಕೆ ಪ್ರಸಾದ್ ಅವರ ಮುಂದಾಳತ್ವದ ತಂಡಕ್ಕೆ ಜಾಧವ್ ಫಿಟ್ನೆಸ್ ಬಗ್ಗೆ ಮಾಹಿತಿ ಸಿಕ್ಕಿದ್ದು, ಗಂಭೀರ ಗಾಯವಾಗಿಲ್ಲ ಎನ್ನುವ ಬಗ್ಗೆ ಮಾಹಿತಿ ಸಿಕ್ಕಿದೆ ಎಂದು ತಿಳಿದು ಬಂದಿದೆ.
ಮೊಹಾಲಿಯಲ್ಲಿ ಲೀಗ್ ಹಂತದ ಕೊನೆಯ ಪಂದ್ಯವನ್ನು ಆಡುವ ವೇಳೆ ಕಿಂಗ್ಸ್ ಇಲೆವೆನ್ ವಿರುದ್ಧ ಚೆನ್ನೈ ಹೋರಾಟ ನಡೆಸಿತ್ತು. ಈ ಪಂದ್ಯದ 14ನೇ ಓವರ್ ನಲ್ಲಿ ಕ್ಷೇತ್ರರಕ್ಷಣೆ ಮಾಡುವಾಗ ಕೇದಾರ್ ಜಾದವ್ ಗೆ ಗಾಯವಾಗಿತ್ತು. ಇದರಿಂದ ಅವರು ಮೈದಾನದಿಂದ ಹೊರ ನಡೆದರು. ಅಲ್ಲದೆ ಮುಂದಿನ ಐಪಿಎಲ್ ಪಂದ್ಯಗಳಿಗೂ ಅವರು ಅಲಭ್ಯರಿಲ್ಲ ಎಂಬ ಬಗ್ಗೆ ಚೆನ್ನೈ ತಂಡದ ಕೋಚ್ ಸ್ಟೀಫನ್ ಫ್ಲೇಮಿಂಗ್ ಸ್ಪಷ್ಟಪಡಿಸಿದ್ದರು.
ಐಸಿಸಿ ವಿಶ್ವಕಪ್ 15 ಆಟಗಾರರ ತಂಡದಲ್ಲಿ ಬದಲಾವಣೆ ಮಾಡಿಕೊಳ್ಳಲು ಮೇ 23ರ ಅವಕಾಶ ನೀಡಿದೆ. ಭಾರತ ತಂಡ ಇಂಗ್ಲೆಂಡ್ ಪ್ರವಾಸ ಬೆಳೆಸಲಿದ್ದು, ಇಲ್ಲಿಯವರೆಗೂ ಕಾಯ್ದು ಅವಶ್ಯಕತೆ ಬಿದ್ದಲ್ಲಿ ಜಾದವ್ ಅವರ ಸ್ಥಾನಕ್ಕೆ ಬೇರೆ ಆಟಗಾರರಿಗೆ ಅವಕಾಶ ನೀಡಲಾಗುವುದು ಎಂದು ಮಾಹಿತಿ ಲಭಿಸಿದೆ.
ಭಾರತ ತಂಡ ಮೇ 22 ರಂದು ಇಂಗ್ಲೆಂಡ್ ಪ್ರವಾಸ ಕೈಗೊಳ್ಳಲಿದ್ದು, ಇದರೊಳಗೆ ಜಾದವ್ ಫಿಟ್ ಆಗುವ ಬಗ್ಗೆ ಮಾಹಿತಿ ಸಿಕ್ಕಿದೆ. ಭಾರತ ತಂಡ ಜೂನ್ 5 ರಂದು ದಕ್ಷಿಣ ಆಫ್ರಿಕಾ ವಿರುದ್ಧ ಕಾದಾಟ ನಡೆಸಲಿದೆ. ಒಂದು ವೇಳೆ ಜಾದವ್ ನಿಗದಿತ ಸಮಯದಲ್ಲಿ ಫಿಟ್ ಆಗದೇ ಇದ್ದಲ್ಲಿ, ಇವರ ಸ್ಥಾನದಲ್ಲಿ ರಿಷಭ್ ಪಂತ್, ಅಂಬಟಿ ರಾಯುಡು, ಅಕ್ಷರ್ ಪಟೇಲ್, ನವದೀಪ್ ಸೈನಿ, ಇಶಾಂತ್ ಶಮರ್ಾ ಅವರಲ್ಲಿ ಒಬ್ಬರಿಗೆ ಆಯ್ಕೆ ಸಮಿತಿ ಅವಕಾಶ ನೀಡುವ ಸಾಧ್ಯತೆ ಇದೆ.