ಅತೀ ಹೆಚ್ಚು ತಾಂತ್ರಿಕತೆ ಬಳಕೆ ಮಾಡುವಲ್ಲಿ ಕೃಷಿ ಉತ್ಪನ್ನ ಮಾರುಕಟ್ಟೆ ಮುಂದಾಗಿದೆ: ನ್ಯಾಮಗೌಡ

ಎಪಿಎಂಸಿ ಕಾರ್ಯದಶರ್ಿಯವರಿಂದ ಉಚಿತ ಟ್ಯಾಬ್ ಪಡೆದುಕೊಳ್ಳುತ್ತಿರುವ ದೇಸಾಯಿ ಎಂಟರಪ್ರೈಸಿಸ್ ಮಾಲೀಕ ಮಂಜುನಾಥ ಸಂಕಣ್ಣನವರ.

ಲೋಕದರ್ಶನ ವರದಿ

ಬ್ಯಾಡಗಿ24: ರೈತರಿಗೆ ಮೋಸ ಮಾಡಿ ಹಣ ಸಂಪಾದನೆ ಮಾಡುವ ಉದ್ದೇಶವನ್ನು ವ್ಯಾಪಾರಸ್ಥರು ಕೈಬಿಡಬೇಕು, ವ್ಯಾಪಾರದಲ್ಲಿ ಪಾರದರ್ಶಕತೆ ಮತ್ತು ಪ್ರಾಮಾಣಿಕತೆ ಉಳಿಸಿಕೊಂಡು ಬರುವಷ್ಟು ದಿವಸ ಮಾರುಕಟ್ಟೆಯ ಭವಿಷ್ಯಕ್ಕೆ ಧಕ್ಕೆ ಬರಲಾರದು, ಮೋಸದ ಪ್ರಕರಗಳಿಗೆ ಕಡಿವಾಣ ಹಾಕಲೆಂದೇ ಅತೀ ಹೆಚ್ಚು ತಾಂತ್ರಿಕತೆ ಬಳಕೆ ಮಾಡಿಕೊಳ್ಳಲು ಕೃಷಿ ಉತ್ಪನ್ನ ಮಾರುಕಟ್ಟೆ ಮುಂದಾಗಿದೆ ಎಂದು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಕಾರ್ಯದಶರ್ಿ ಎಸ್.ಬಿ.ನ್ಯಾಮಗೌಡ ಅಭಿಪ್ರಾಯ ವ್ಯಕ್ತಪಡಿಸಿದರು.

  ಸ್ಥಳೀಯ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯಲ್ಲಿನ ಪೇಟೆ ಕಾರ್ಯಕರ್ತರಿಗೆ (ವ್ಯಾಪಾರಸ್ಥರು) ಉಚಿತವಾಗಿ ಟ್ಯಾಬ್ಗಳನ್ನು ವಿತರಿಸಿ ಬಳಿಕ ಮಾತನಾಡಿದರು. ವ್ಯಾಪಾರದ ಇನ್ನೊಂದು ಮುಖವೇ ಮೋಸವೆಂದು ಹೇಳಲಾಗುತ್ತಿದೆ, ಅದರಲ್ಲೂ ಮುಗ್ಧ ರೈತರಿಗೆ ಇದರ ಕಹಿ ಅನುಭವಗಳು ಬಹಳ ಹೆಚ್ಚು ಅದಾಗ್ಯೂ ಕೂಡ ಪ್ರಾಮಾಣಿಕತೆ ಎಂಬುದೊಂದು ಜೀವಂತವಾಗಿ ಇದ್ದೇ ಇರುತ್ತದೆ, ಅದನ್ನು ತಪ್ಪಿ ನಡೆದರೇ ಅಂತಹ ಮಾರುಕಟ್ಟೆ ವ್ಯಾಪಾರಸ್ಥರಿಗೆ ಭವಿಷ್ಯದಲ್ಲಿ ಉಳಿಗಾಲವಿಲ್ಲ ಎಂದರು.

     ಅಂತರಾಷ್ಟ್ರೀಯ ಖ್ಯಾತಿಗೆ ತಕ್ಕಂತೆ ನಡೆದುಕೊಳ್ಳಿ: ಅಂತರಾಷ್ಟ್ರೀಯ ಮಾರುಕಟ್ಟೆಯೊಂದರಲ್ಲಿ ಲೈಸನ್ಸ್ ಪಡೆದು ವ್ಯವಹರಿಸುತ್ತಿರುವುದೇ ಅತೀ ಹೆಮ್ಮೆಯ ವಿಷಯ, ಆದರೆ ಇತ್ತೀಚಿನ ದಿನಗಳಲ್ಲಿ ಕೆಲ ವ್ಯಾಪಾರಸ್ಥರಿಗೆ ಧೀಡಿರ್ ಶ್ರೀಮಂತರಾಗುವ ಉದ್ದೇಶದಿಂದ ರೈತರಿಗೆ ನಾನಾ ವಿಧದ ಮೋಸವೆಸಗುತ್ತಿರುವ ಪ್ರಕರಣಗಳು ಬೆಳಕಿಗೆ ಬರುತ್ತಿವೆ, ಅಂತಹವರನ್ನು ಮಟ್ಟ ಹಾಕುವ ವಿಚಾರದಲ್ಲಿ ಎಪಿಂಎಂಸಿ ಹಿಂದೆ ಬೀಳುವುದಿಲ್ಲ ಅದಕ್ಕೂ ಮುನ್ನ ವ್ಯಾಪಾರಸ್ಥರು ಯಾವುದೇ ಕಾರಣಕ್ಕೂ ಸಹ ಸ್ವಯಂಕೃತ ಅಪರಾಧಗಳನ್ನೆಸಗದೇ ಮಾರುಕಟ್ಟೆಯ ಖ್ಯಾತಿಗೆ ತಕ್ಕಂತೆ ನಡೆದುಕೊಳ್ಳುವುದು ಉತ್ತಮ ಎಂದರು.

  ಸೌಲಭ್ಯ ಉಪಯೋಗಿಸಿಕೊಳ್ಳಿ: ರೈತರಿಗೆ ಸ್ಪಧರ್ಾತ್ಮಕ ದರವೂ ಸೇರಿದಂತೆ ಮಾರುಕಟ್ಟೆಯಲ್ಲಿ ಪಾರದರ್ಶಕ ವ್ಯಾಪಾರ ನಡೆಸಲು ಎಲ್ಲ ರೀತಿಯ ಕ್ರಮಗಳನ್ನು ಕೈಗೊಳ್ಳಲಾಗಿದ್ದು ಇದರ ಪ್ರಯೋಜನವನ್ನು ರೈತರು ಪಡೆದುಕೊಳ್ಳಬೇಕು, ಅದರ ಭಾಗವಾಗಿ ಮಾರುಕಟ್ಟೆಯಲ್ಲಿ ಈಗಾಗಲೇ ಎಲೆಕ್ಟ್ರಾನಿಕ್ ತೂಕದ ಯಂತ್ರಗಳ ಬಳಕೆ ಕಡ್ಡಾಯಗೊಳಿಸಲಾಗಿದ್ದು, ಯಾವುದೇ ಕಾರಣಕ್ಕೂ ಬಿಳಿಚೀಟಿ (ಕೈಪಟ್ಟಿ) ಕೊಡುವುದನ್ನು ನಿರ್ಭಂಧಿಸಲಾಗಿದೆ. ದರಗಳಲ್ಲಿ ವ್ಯತ್ಯಾಸವಾಗದಂತೆ ಮತ್ತು ವೇಗದ ವಹಿವಾಟಿಗೆ ಇ-ಟೆಂಡರ್ ವ್ಯವಸ್ಥೆ ಅಳವಡಿಸಲಾಗಿದೆ.

  ರೈತ ತನ್ನ ಮೆಣಸಿನಕಾಯಿಗೆ ಟೆಂಡರ್ ಹಾಕಿರುವ ವ್ಯಕ್ತಿಗಳ ಹೆಸರು ಮತ್ತು ದರಗಳನ್ನು ರೈತ ಯಾವುದೇ ಸಮಯದಲ್ಲೂ ಪರೀಕ್ಷಿಸಿಕೊಳ್ಳಬಹುದಾಗಿದೆ ಎಂದರು.

ನಮ್ಮ ಜೊತೆ ಕೈಜೋಡಿಸಿ: ಎಪಿಎಂಸಿ ಆಡಳಿತ ಮಂಡಳಿ ಅಧ್ಯಕ್ಷ ಕೆ.ಎಸ್.ನಾಯ್ಕರ್ ಮಾತನಾಡಿ, ಕೃಷಿ ಉತ್ಪನ್ನ ಮಾರುಕಟ್ಟೆ ಆದಾಯ ಹೆಚ್ಚಿಸಿಕೊಳ್ಳುವುದು ಸೇರಿದಂತೆ ರೈತರ ಅನುಕೂಲಕ್ಕಾಗಿ ಕೈಬರಹದ ಪಟ್ಟಿಗಳನ್ನು ಸ್ಥಗಿತಗೊಳಿಸಿದ್ದು ತಾಂತ್ರಿಕತೆ ಬಳಿಸಿಕೊಳ್ಳುವ ಉದ್ದೇಶದಿಂದ ಪ್ರತಿಯೊಂದು ವ್ಯಾಪಾರಸ್ಥರಿಗೆ ರೂ.10 ಸಾವಿರಕ್ಕೂ ಹೆಚ್ಚು ಮೌಲ್ಯದ ಟ್ಯಾಬ್ಗಳನ್ನು ಉಚಿತವಾಗಿ ವಿತರಿಸಲಾಗುತ್ತಿದೆ ಎಂದ ಅವರು, ಎಪಿಎಂಸಿ ನಡೆಸುತ್ತಿರುವ ದಿಟ್ಟ ಹೆಜ್ಜೆಗೆ ಮತ್ತು ಪ್ರಯತ್ನಕ್ಕೆ ಎಲ್ಲರೂ ಕೈಜೋಡಿಸುವಂತೆ ಮನವಿ ಮಾಡಿದರು.

  ಈ ಸಂದರ್ಭದಲ್ಲಿ ಉಪಾಧ್ಯಕ್ಷ ಉಳಿವೆಪ್ಪ ಕುರುವತ್ತಿ, ನಿದರ್ೇಶಕರಾದ ಡಿ.ಬಿ.ತೋಟದ, ಸಿ.ಆರ್.ಪಾಟೀಲ ಚನ್ನಬಸಪ್ಪ ಹುಲ್ಲತ್ತಿ, ಶಶಿಧರ ದೊಡ್ಮನಿ, ವೀರಭದ್ರಪ್ಪ ಗೊಡಚಿ, ಮಾರುತಿ ಕೆಂಪಗೊಂಡರ, ವನಿತ ಗುತ್ತಲ, ವಿಜಯಕುಮಾರ ಮಾಳಗಿ, ಕುಮಾರಪ್ಪ ಚೂರಿ, ಶಂಭನಗೌಡ ಪಾಟೀಲ, ಮಾಲತೇಶ ಹೊಸಳ್ಳಿ, ನಾಗರಾಜ ಕಟಗಿ, ಶಿವನಗೌಡ ಪಾಟೀಲ, ಸುಶೀಲಮ್ಮ ದಾನಪ್ಪನವರ, ಸಿಬ್ಬಂದಿಗಳಾದ ಪ್ರಭುಲಿಂಗ ದೊಡ್ಮನಿ, ಶ್ರೀಕಾಂತ ಗೂಳೇದ, ಎಸ್.ಜಿ.ಗುರಪ್ಪನವರ, ವಿಕಾಸ್ ಹಾಗೂ ಇನ್ನಿತರರು ಉಪಸ್ಥಿತರಿದ್ದರು.